ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Stock Market: ಸೆನ್ಸೆಕ್ಸ್‌, ನಿಫ್ಟಿ ನಿಲ್ಲದ ಕುಸಿತ, ಕಾಫಿ ಡೇ ಷೇರು ದರ 20% ಜಿಗಿತ

ಏಷ್ಯಾದ ಇತರ ಮಾರುಕಟ್ಟೆಯ ಪಾಸಿಟಿವ್‌ ಸಿಗ್ನಲ್‌ ಪರಿಣಾಮ ಸೂಚ್ಯಂಕಗಳು ಏರಿಕೆಯಿಂದ ಶುರುವಾದರೂ, ಬಳಿಕ ಮುಗ್ಗರಿಸಿತು. ಕಳೆದ ಶುಕ್ರವಾರ ಪ್ರಕಟವಾಗಿದ್ದ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ 6.2%ಕ್ಕೆ ಏರಿಕೆಯಾಗಿದ್ದರಿಂದ ಸಕಾರಾತ್ಮಕವಾಗಿತ್ತು. ಹೀಗಿದ್ದರೂ ಬಳಿಕ ಸೆನ್ಸೆಕ್ಸ್‌, ನಿಫ್ಟಿ ಕುಸಿಯಿತು. ಬಿಎಸ್‌ಇ, ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ದರ ತಲಾ 3% ಇಳಿಯಿತು.

ಸೆನ್ಸೆಕ್ಸ್‌, ನಿಫ್ಟಿ ನಿಲ್ಲದ ಕುಸಿತ, ಕಾಫಿ ಡೇ ಷೇರು ದರ 20% ಜಿಗಿತ

Profile Rakshita Karkera Mar 3, 2025 12:55 PM

ಮುಂಬಯಿ: ಷೇರು ಮಾರುಕಟ್ಟೆ(Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ ಬೆಳಗ್ಗೆ 400ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿತು. 11 ಗಂಟೆಯ ವೇಳೆಗೆ ಸೆನ್ಸೆಕ್ಸ್‌ 72,800 ಮತ್ತು ನಿಫ್ಟು 22,027 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಮಧ್ಯಾಹ್ನ 12.30 ವೇಳೆಗೆ ಸೆನ್ಸೆಕ್ಸ್ ಸೂಚ್ಯಂಕ ತುಸು ಚೇತರಿಸಿ‌ 73,113 ಅಂಕಗಳ ಮಟ್ಟದಲ್ಲಿತ್ತು. ಏಷ್ಯಾದ ಇತರ ಮಾರುಕಟ್ಟೆಯ ಪಾಸಿಟಿವ್‌ ಸಿಗ್ನಲ್‌ ಪರಿಣಾಮ ಸೂಚ್ಯಂಕಗಳು ಏರಿಕೆಯಿಂದ ಶುರುವಾದರೂ, ಬಳಿಕ ಮುಗ್ಗರಿಸಿತು. ಕಳೆದ ಶುಕ್ರವಾರ ಪ್ರಕಟವಾಗಿದ್ದ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ 6.2%ಕ್ಕೆ ಏರಿಕೆಯಾಗಿದ್ದರಿಂದ ಸಕಾರಾತ್ಮಕವಾಗಿತ್ತು. ಹೀಗಿದ್ದರೂ ಬಳಿಕ ಸೆನ್ಸೆಕ್ಸ್‌, ನಿಫ್ಟಿ ಕುಸಿಯಿತು. ಬಿಎಸ್‌ಇ, ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ದರ ತಲಾ 3% ಇಳಿಯಿತು.

ಭಾರತದ ಸ್ಮಾಲ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಷೇರುಗಳು ಗಣನೀಯ ಕುಸಿತಕ್ಕೀಡಾಗಿವೆ. 2020ರ ಮಾರ್ಚ್‌ನಲ್ಲಿ ಸಂಭವಿಸಿದ್ದ ಕೋವಿಡ್‌ ಬಿಕ್ಕಟ್ಟಿನ ನಂತರದ ಗರಿಷ್ಠ ಇಳಿಕೆಯನ್ನು ಈ ವಲಯದ ಷೇರುಗಳು ದಾಖಲಿಸಿವೆ. ಫೆಬ್ರವರಿಯಲ್ಲಿ ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ 14% ಹಾಗೂ ನಿಫ್ಟಿ ಮಿಡ್‌ ಕ್ಯಾಪ್‌ 100 ಇಂಡೆಕ್ಸ್‌ 10.8% ಇಳಿಕೆಯಾಗಿದೆ. ಹೀಗಿದ್ದರೂ ಈ ವಲಯದ ಷೇರುಗಳ ವಾಲ್ಯುಯೇಶನ್‌ ಈಗಲೂ ಉನ್ನತ ಮಟ್ಟದಲ್ಲಿ ಇದೆ. ಹೀಗಾಗಿ ರಿಟೇಲ್‌ ಹೂಡಿಕೆದಾರರ ಪೋರ್ಟ್‌ಫೋಲಿಯೊಗಳು ಈಗ ಕೆಂಬಣ್ಣದಲ್ಲಿ ಅದ್ದಿದಂತಿದೆ.

ಈ ಸುದ್ದಿಗಳನ್ನು ಓದಿ: Budget Session: ಗ್ಯಾರಂಟಿ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಿದೆ: ರಾಜ್ಯಪಾಲ ಗೆಹ್ಲೊಟ್‌

ಬಿಎಸ್‌ಇ ಸ್ಮಾಲ್‌ ಕ್ಯಾ ಇಂಡೆಕ್ಸ್‌ನಲ್ಲಿ 938 ಷೇರುಗಳ ಪೈಕಿ 321 ಷೇರುಗಳು ಕಳೆದ ಒಂದೇ ತಿಂಗಳಿನಲ್ಲಿ 20% ಕುಸಿತಕ್ಕೀಡಾಗಿವೆ. ಈ ನಡುವೆ ಸೋಮವಾರ ಕಾಫಿ ಡೇ ಎಂಟರ್‌ಪ್ರೈಸಸ್‌ (ಸಿಡಿಇಎಲ್)‌ ಷೇರುಗಳ ದರದಲ್ಲಿ 20% ಏರಿಕೆ ದಾಖಲಾಯಿತು. ಕಂಪನಿಗಳ ಕಾನೂನು ಕುರಿತ ರಾಷ್ಟ್ರೀಯ ನ್ಯಾಯಾಧೀಕರಣವು ( NCLAT) ಕಾಫಿ ಡೇ ಎಂಟರ್‌ಪ್ರೈಸಸ್‌ ವಿರುದ್ಧದ ದಿವಾಳಿ ಪ್ರಕ್ರಿಯೆಯನ್ನು ತಡೆದಿರುವ ಹಿನ್ನೆಲೆಯಲ್ಲಿ ಕಾಫಿ ಡೇ ಷೇರುಗಳು 20% ಏರಿಕೆಯಾಯಿತು. 25.65 ರುಪಾಯಿಗೆ ವೃದ್ಧಿಸಿತು. ಐಡಿಬಿಐ ಟ್ರಸ್ಟೀಶಿಪ್‌ ಸರ್ವೀಸ್‌ ಲಿಮಿಟೆಡ್‌ ಸಂಸ್ಥೆಯು ಕಾಫಿ ಡೇ ವಿರುದ್ಧ 228 ಕೋಟಿ ರುಪಾಯಿ ಬಾಕಿಗೆ ಸಂಬಂಧಿಸಿ ದಿವಾಳಿ ಪ್ರಕ್ರಿಯೆಯನ್ನು ಕೋರಿತ್ತು. ಇದಕ್ಕೆ ಸಂಬಂಧಿಸಿ ಎನ್‌ಸಿಎಲ್‌ಟಿಯು 2024ರ ಆಗಸ್ಟ್‌ನಲ್ಲಿ ಅರ್ಜಿಯನ್ನು ಪರಿಗಣಿಸಿತ್ತು. ಆದರೆ ಎನ್‌ಸಿಎಲ್‌ಎಟಿಯ ಚೆನ್ನೈ ಪೀಠವು ತಡೆ ಹಿಡಿದಿದೆ. ಈ ಆದೇಶದಿಂದ ಕಾಫಿ ಡೇ ಕಂಪನಿಗೆ ನಿರಾಳವಾಗಿದೆ.