Bombay Mami: ಹಿಮ ಬೆಟ್ಟಗಳ ಮೇಲೆ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸಿದ ಸಿಂಗರ್ ಬಾಂಬೆ ಮಾಮಿ
ಖ್ಯಾತ ಸ್ವಿಸ್ – ಇಂಡಿಯನ್ ಗಾಯಕಿ ಬಾಂಬೆ ಮಾಮಿಯ ಮುಂಬರುವ ವಿಡಿಯೋ ಆಲ್ಬಂ ‘ಫೈರ್ ಇನ್ ಡೆಲ್ಲಿ’ಯ ಶೂಟಿಂಗ್ ಸ್ವಿಝರ್‌ಲ್ಯಾಂಡ್‌ನ ಆಲ್ಫ್ ಪರ್ವತ ಶ್ರೇಣಿಯ ಹಿಮ ಹಾದಿಯಲ್ಲಿ ನಡೆದಿದೆ. ಇದರ ಫಸ್ಟ್ ಲುಕ್ ಅನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಇದರ ಝಲಕ್ ಇಲ್ಲಿದೆ.

ಸ್ವಿಸ್‌ನ ಆಲ್ಫ್ ಪರ್ವತ ಪ್ರದೇಶದಲ್ಲಿ ‘ಫೈರ್ ಇನ್ ಡೆಲ್ಲಿ’ ಶೂಟಿಂಗ್

ನವದೆಹಲಿ: ಪ್ರವಾಸಿಗರ ಸ್ವರ್ಗ ಸ್ವಿಝರ್‌ಲ್ಯಾಂಡ್‌ನ (Switzerland) ಆಲ್ಫ್ (Alp) ಪರ್ವತ ಶ್ರೇಣಿಗಳಲ್ಲಿ ಆಲ್ಬಂ ಒಂದರ ಶೂಟಿಂಗ್‌ನ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Medai) ಸಿಕ್ಕಾಪಟ್ಟೆ ವೈರಲ್ (Viral Video) ಆಗಿದ್ದು, ನೆಟ್ಟಿಗರನ್ನು ಸಖತ್ ಇಂಪ್ರೆಸ್ ಮಾಡಿದೆ. ಸ್ವಿಸ್-ಇಂಡಿಯನ್ ಗಾಯಕಿ (Swiss-Indian Singer) ಬಾಂಬೆ ಮಾಮಿ (Bombay Mami) ತನ್ನ ಮುಂದಿನ ‘ಫೈರ್ ಇನ್ ಡೆಲ್ಲಿ’ (Fire in Delhi) ಆಲ್ಬಂ (Album) ಅನ್ನು ಹಿಮಾಚ್ಛಿದಿತ ಬೆಟ್ಟ ಭಾಗಗಳಲ್ಲಿ ಶೂಟ್ ಮಾಡಿದ್ದು, ಇದರ ಕೆಲವೊಂದು ಅದ್ಭುತ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿನ ಹಿಮಾಚ್ಛಾದಿತ ಬೆಟ್ಟದ ಇಳಿಜಾರುಗಳಲ್ಲಿ ಮಾಮಿ ಕೆಂಪು ಲೆಹಂಗಾ ಧರಿಸಿ ತಾನೇ ಸ್ವತಃ ನಟಿಸಿದ್ದಾರೆ. ತನ್ನ ಆಲ್ಬಂನ ಹೊಸ ಹಾಡಿನಲ್ಲಿ ಅವರು ನಟಿಸಿದ್ದಾರೆ.
ತನ್ನ ಇತ್ತೀಚಿನ ವಿಡಿಯೋ ಶೂಟ್ ಸಂದರ್ಭದ ಕೆಲವೊಂದು ದೃಶ್ಯಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಆಲ್ಬಂ ಹಾಡಿನ ದೃಶ್ಯಗಳಲ್ಲಿ ಸಿಂಗರ್ ಮಾಮಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದು, ದುಪ್ಪಟ್ಟ ಧರಿಸಿದ್ದಾರೆ. ‘ಫೈರ್ ಇನ್ ಡೆಲ್ಲಿ’ ಹಾಡಿಗೆ ಲಿಪ್ ಸಿಂಕ್ ಮಾಡುತ್ತಾ ಈ ಗಾಯಕಿ ಹಿಮ ಬೆಟ್ಟಗಳ ಮೇಲೆ ಕುಣಿದಾಡುತ್ತಾ ಸಾಗುತ್ತಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: Chaitra Vasudevan: ಬಹುಕಾಲದ ಗೆಳೆಯನ ಕೈ ಹಿಡಿದ ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್... ಮದ್ವೆ ವಿಡಿಯೊ ಫುಲ್ ವೈರಲ್
ತನ್ನ ಹೊಸ ಆಲ್ಬಂ ಇದೀಗ ಬಿಡುಗಡೆಗೊಂಡಿದೆ ಎಂದು ತನ್ನ ಅಭಿಮಾನಿಗಳಿಗೆ ಮತ್ತು ಫಾಲೋವರ್ಸ್ ಗಳಿಗೆ ತಿಳಿಸಲೆಂದೇ ಬಾಂಬೆ ಮಾಮಿ ಈ ರೀಲ್‌ಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಹೊಸ ಹಾಡನ್ನು ವೀಕ್ಷಿಸಿ ಅದರ ಬಗ್ಗೆ ಕಾಮೆಂಟ್ ಮಾಡಿ ಅದನ್ನು ಇತರರಿಗೂ ಶೇರ್ ಮಾಡುವಂತೆ ಸಿಂಗರ್ ಮಾಮಿ ಅಭಿಮಾನಿಗಳು ಮತ್ತು ಫಾಲೋವರ್ಸ್‌ಗಳಲ್ಲಿ ವಿನಂತಿಸಿಕೊಂಡಿದ್ದಾರೆ.
‘ಫೈರ್ ಇನ್ ಡೆಲ್ಲಿ’ ನನ್ನ ಮುಂಬರುವ ಮ್ಯೂಸಿಕ್ ಆಲ್ಬಂ ಆಗಿದ್ದು ಅದೀಗ ವೀಕ್ಷಣೆಗೆ ಲಭ್ಯವಿದೆ, ಇದನ್ನು ಡೌನ್‌ಲೋಡ್ ಮಾಡ್ಕೊಂಡು ನಿಮ್ಮ ಮನೆಯವರಿಗೆ, ಸಂಬಂಧಿಕರಿಗೆ ಮತ್ತು ನಿಮಗೆ ಗೊತ್ತಿರುವವರಿಗೆಲ್ಲರಿಗೂ ಇದನ್ನು ವೀಕ್ಷಿಸುವಂತೆ ಹೇಳಿ. ಈ ಆಲ್ಬಂ ಸಾಂಗ್‌ನ ಲಿಂಕ್ ಬಯೋದಲ್ಲಿದೆ’ ಎಂದು ಈ ಸಿಂಗರ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಸ್ವಿಸ್ – ಇಂಡಿಯನ್ ಮೂಲದ ಬಾಂಬೆ ಮಾಮಿ ಗಾಯಕಿಯ ಈ ಆಲ್ಬಂ ಸಾಂಗ್ ಬಗ್ಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತು ನೆಟ್ ಲೋಕದಲ್ಲಿ ಸಖತ್ ಕ್ರೇಝ್ ಸೃಷ್ಟಿಯಾಗಿದೆ.