Haveri News: ಬಸ್ ಡಿಕ್ಕಿಯಾಗಿ ಹಾವೇರಿ ಪೊಲೀಸ್ ಶ್ವಾನ ʼಕನಕʼ ಸಾವು: ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
Haveri News: ಹಂಪಿ ಉತ್ಸವದ ಭದ್ರತೆ ಕರ್ತವ್ಯದಲ್ಲಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಕನಕ ಶ್ವಾನ ಮೃತಪಟ್ಟಿದೆ. ಕನಕನನ್ನು ಕಳೆದುಕೊಂಡ ಜಿಲ್ಲಾ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಸಕಲ ಸರ್ಕಾರಿ ಗೌರವಗಳೊಂದಿದೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.


ಹಾವೇರಿ: ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ (Haveri News) ಕರ್ತವ್ಯ ನಿರ್ವಹಿಸುತ್ತಿದ್ದ ʼಕನಕʼ ಶ್ವಾನ ಹಂಪಿ ಉತ್ಸವ ಬಂದೋಬಸ್ತ್‌ನಲ್ಲಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮೃತಪಟ್ಟಿದೆ. ಬೆಳಗಿನ ಜಾವ ವಾಕಿಂಗ್ ಹೋದ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಪಲಕಾರಿಯಾಗದೇ ಇಹಲೋಕ ತ್ಯಜಿಸಿದೆ. ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿದ್ದ ಹಂಪಿ ಉತ್ಸವದದಕ್ಕು ಕನಕ ಭದ್ರತೆ ಕರ್ತವ್ಯ ನಿರ್ವಹಿಸುತ್ತಿತ್ತು. ಮಾ. 2 ರಂದು ಹಂಪಿಯ ರಾಮಕೃಷ್ಣ ಸ್ಕೂಲ್ ಹತ್ತಿರ ಕಮಲಾಪೂರ - ಪಿ.ಕೆ ರಸ್ತೆಯಲ್ಲಿ ಸಿಂಧನೂರು ಡಿಪೋ ಬಸ್ ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿತ್ತು. ತಕ್ಷಣವೇ ಪೊಲೀಸ್ ವಾಹನದಲ್ಲಿ ಹೊಸಪೇಟೆ ಪಶು ಚಿಕಿತ್ಸಾಲಯಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕನಕ ಶ್ವಾನ ಕೊನೆಯುಸಿರೆಳೆದಿದೆ.
ಲ್ಯಾಬ್ರಡಾರ್ ರಿಟ್ರೈವರ್ ತಳಿಯ ಈ ಶ್ವಾನವು 2019ರ ಜನವರಿ 28ರಂದು ಜನಿಸಿತ್ತು. ನಂತರ ಬೆಂಗಳೂರಿನಲ್ಲಿ ಏಳು ತಿಂಗಳು ಪೊಲೀಸ್ ತರಬೇತಿ ಪಡೆದುಕೊಂಡು ಹಾವೇರಿ ಜಿಲ್ಲೆಯ ಪೊಲೀಸ್ ಇಲಾಖೆಯ ಕರ್ತವ್ಯ ಆರಂಭಿಸಿದ ಮೇಲೆ ಮೈಸೂರು ದಸರಾ, ಹಂಪಿ ಉತ್ಸವ, ಬೆಳಗಾವಿ ವಿಧಾನಸಭೆ ಅಧಿವೇಶನ, ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ, ಪ್ರಧಾನಮಂತ್ರಿ ಕಾರ್ಯಕ್ರಮ ಸೇರಿ ಇನ್ನು ಅನೇಕ ಗಣ್ಯವ್ಯಕ್ತಿಗಳ ಭದ್ರತೆಯಲ್ಲಿ ಬಹಳ ಚಾತುರ್ಯತೆಯಿಂದ ಕರ್ತವ್ಯ ನಿಭಾಯಿಸಿಕೊಂಡು ಬಂದಿತ್ತು.

ಕನಕನನ್ನು ಕಳೆದುಕೊಂಡ ಜಿಲ್ಲಾ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಪ್ರೀತಿ, ಅನ್ಯೋನ್ಯತೆಯಿಂದ ಪ್ರತಿನಿತ್ಯ ಕನಕನೊಂದಿಗಿದ್ದ ಪೇದೆಯೊಬ್ಬರು ಅಂತ್ಯ ಸಂಸ್ಕಾರದ ವೇಳೆ ನಾಯಿಯ ಮುಖ ಹಾಗೂ ಎದೆಯ ಮೇಲೆ ಕೈ ಇಟ್ಟು ಬಿಕ್ಕಿ- ಬಿಕ್ಕಿ ಕಣ್ಣೀರಿಟ್ಟಿದ್ದು ಮನಕಲಕುವಂತಿತ್ತು.
ಈ ಸುದ್ದಿಯನ್ನೂ ಓದಿ | Viral Video: ಬಲವಂತವಾಗಿ ಕುದುರೆಯ ಬಾಯಿಗೆ ಸಿಗರೇಟ್ ಇಟ್ಟು ವಿಕೃತಿ ಮೆರೆದ ದುಷ್ಕರ್ಮಿಗಳು!
ಕನಕ ಶ್ವಾನಕ್ಕೆ ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಅಂತ್ಯಕ್ರಿಯೆಯನ್ನು ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ ಸೇರಿ ಇನ್ನು ಅನೇಕ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.
8 ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ ಪತಿ
ತುಮಕೂರು : ಶೀಲಶಂಕಿಸಿ 8 ತಿಂಗಳ ಗರ್ಭಿಣಿಯನ್ನು 8 ವರ್ಷದ ಮಗನ ಕಣ್ಣೆದುರೇ ನೇಣು ಬಿಗಿದು ಕೊಲೆ ಮಾಡಿ ಬಳಿಕ ಪತಿ ಠಾಣೆಗೆ ಹೋಗಿ ಶರಣಾಗಿರುವ ಘಟನೆ ನಗರದ ತಿಲಕ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಗರ್ಭಿಣಿ ನಗ್ಮಾ, ಪಾಪಿ ಪತಿ ಸೈಯದ್ ಎಂದು ತಿಳಿದುಬಂದಿದೆ.
ಹೌಸಿಂಗ್ ಬೋರ್ಡ್ ನಿವಾಸಿಯಾದ ನಗ್ಮಾಗೆ 8 ವರ್ಷದ ಮಗನಿದ್ದಾನೆ. ಒಂದು ವರ್ಷದ ಹಿಂದೆ ನಗ್ಮಾ ಮೊದಲ ಗಂಡನನ್ನು ಬಿಟ್ಟಿದ್ದಳು. ಬಳಿಕ ಸೈಯದ್ ನನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದಳು.ಎಂಟು ತಿಂಗಳ ಗರ್ಭಿಣಿ ನಗ್ಮಾಳನ್ನು ನೇಣು ಬಿಗಿದು 8 ವರ್ಷದ ಮಗನ ಕಣ್ಣೆದುರೇ ಹತ್ಯೆಗೈದಿದ್ದಾನೆ.
ಈ ಸುದ್ದಿಯನ್ನೂ ಓದಿ | Bangalore Accident: ಬಿಎಂಟಿಸಿ ಬಸ್‌ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಈತ ನಶೆಮುಕ್ತ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಹಣ ತೆಗೆದುಕೊಂಡು ಬಾ ಎಂದು ಪೀಡಿಸಿ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ . ಇದೇ ವಿಚಾರಕ್ಕೆ ಗಲಾಟೆ ನಡೆದು 8 ವರ್ಷದ ಮಗನ ಕಣ್ಣೆದುರೇ ನಗ್ಮಾ ಬಾಯಿಗೆ ಬಟ್ಟೆ ತುರುಕಿ ನೇಣು ಬಿಗಿದು ಕೊಲೆ ಮಾಡಿ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.