Madhuri Bhaave Column: ಅಗಣಿತ ರಿಫ್ರೆಷರ್ ಗಳ ನಡುವೆ ಕಂಗಾಲಾಗಿದ್ದಾರೆ ವಿದ್ಯಾರ್ಥಿಗಳು
“ಮೇಡಂ, ಯಾವ ರಿಫ್ರೆಷರ್ ರೆಫರ್ ಮಾಡಲಿ, ಅದನ್ನೋ ಅಥವಾ ಇದನ್ನೋ? ಕಳೆದ ಸಲ ಆ ರಿಫ್ರೆಷರ್‌ನಿಂದ ತುಂಬಾ ಪ್ರಶ್ನೆಗಳನ್ನು ಕೇಳಿದ್ದರು, ಅದರ ಹಿಂದಿನ ಸಲ ಈ ರಿಫ್ರೆಷರ್ ನಿಂದ ಪ್ರಶ್ನೆಗಳನ್ನು ಕೇಳಿದ್ದರು; ಅವನು ಅದನ್ನ ಓದ್ತಾ ಇದ್ದಾನೆ, ಇವನು ಇದನ್ನ ಓದ್ತಾ ಇದ್ದಾನೆ. ಆ ಸ್ಕೂಲಿನವರು ಈ ಪುಸ್ತಕವನ್ನ ರೆಫರ್ ಮಾಡ್ತಾ ಇದ್ದಾರೆ.


ಕಳಕಳಿ
ಮಾಧುರಿ ಭಾವೆ
ಹೇಳಿ ಕೇಳಿ ಇದು ಪರೀಕ್ಷಾ ಸಮಯ. ಓದಿ ಓದಿ ಮಕ್ಕಳ ತಲೆಗೆ ಬಿಸಿಯೇರಿ ಬಿಡುವ ಕಾಲ ಘಟ್ಟವಿದು. ತರಹೇವಾರಿ ಪುಸ್ತಕಗಳು, ಪ್ರಶ್ನೆಪತ್ರಿಕೆಗಳು, ರಿಫ್ರೆಷರ್‌ಗಳು ಇತ್ಯಾದಿಗಳನ್ನು ಮುಂದೆ ಹರಡಿಕೊಂಡು, ಯಾವ ಯಾವ ಪುಸ್ತಕಗಳನ್ನು ಓದಬೇಕು ಎನ್ನುವ ಗೊಂದಲ ದಲ್ಲಿದ್ದಾರೆ ವಿದ್ಯಾರ್ಥಿಗಳು. ಈ ಪೈಕಿ ಕೆಲವರು ನೂರಕ್ಕೆ ನೂರು ಅಂಕಗಳನ್ನು ತೆಗೆಯ ಬೇಕೆಂಬ ದೃಢಸಂಕಲ್ಪ ಮಾಡಿದವರಾದರೆ, ಇನ್ನು ಕೆಲವರು ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿಸಲು ಮುಂದಾಗುವ ಜಾಯಮಾನದವರು. ಒಟ್ಟಿನಲ್ಲಿ, ಮಕ್ಕಳ ಮಸ್ತಕ ಮತ್ತು ಪುಸ್ತಕ ಗೊಂದಲದಲ್ಲಿ ಮುಳುಗಿವೆ. ಇಂಥ ಅತಂತ್ರ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ ಗಳಿಗೆ ನೆನಪಾಗುವವರೇ ಅಧ್ಯಾಪಕ-ಅಧ್ಯಾಪಕಿಯರು.
“ಮೇಡಂ, ಯಾವ ರಿಫ್ರೆಷರ್ ರೆಫರ್ ಮಾಡಲಿ, ಅದನ್ನೋ ಅಥವಾ ಇದನ್ನೋ? ಕಳೆದ ಸಲ ಆ ರಿಫ್ರೆಷರ್‌ನಿಂದ ತುಂಬಾ ಪ್ರಶ್ನೆಗಳನ್ನು ಕೇಳಿದ್ದರು, ಅದರ ಹಿಂದಿನ ಸಲ ಈ ರಿಫ್ರೆಷರ್ ನಿಂದ ಪ್ರಶ್ನೆಗಳನ್ನು ಕೇಳಿದ್ದರು; ಅವನು ಅದನ್ನ ಓದ್ತಾ ಇದ್ದಾನೆ, ಇವನು ಇದನ್ನ ಓದ್ತಾ ಇದ್ದಾನೆ. ಆ ಸ್ಕೂಲಿನವರು ಈ ಪುಸ್ತಕವನ್ನ ರೆಫರ್ ಮಾಡ್ತಾ ಇದ್ದಾರೆ.
ಇದನ್ನೂ ಓದಿ: R T Vittalmurthy Column: ಡಿಕೆಶಿ ಅಂದ್ರೆ ಅಮಿತ್ ಶಾ ಅವರಿಗಷ್ಟ
ನಾನೀಗ ಏನು ಮಾಡಲಿ?" ಹೀಗೆ ಹತ್ತಾರು ಪ್ರಶ್ನೆಗಳ ಮೂಟೆಯನ್ನೇ ಹೊತ್ತು ತರುತ್ತಾರೆ ವಿದ್ಯಾರ್ಥಿಗಳು. ಇಂಥ ವೇಳೆ ಶಿಕ್ಷಕರ ಅವಸ್ಥೆ ಹೇಳತೀರದು. ಏಕೆಂದರೆ, ‘ಆ ಪುಸ್ತಕ ಓದಿ ಅಂತ ಹೇಳಿ, ಈ ಪುಸ್ತಕದಿಂದ ಪ್ರಶ್ನೆ ಬಂದರೆ? ಅದರಿಂದ ಮಕ್ಕಳಿಗೆ ತೊಂದರೆಯಾದರೆ?’ ಎನ್ನುವ ಆಲೋಚನೆ ಅವರಿಗೆ.
ನೂರಕ್ಕೆ ನೂರು ಅಂಕಗಳನ್ನು ತೆಗೆಯಬೇಕೆಂದುಕೊಂಡಿರುವ ಮಕ್ಕಳಿಗೆ ಸಲಹೆ ಕೊಡು ವುದೂ ಕಷ್ಟ. ಅವರಿಗೆ ಯಾವ ರೀತಿಯ ಅನ್ಯಾಯವೂ ಆಗಬಾರದೆಂಬ ಕಳಕಳಿ. ಹೀಗೊಂ ದು ಗೊಂದಲದ ಗೂಡು ರೂಪುಗೊಂಡಿರುವಾಗ, ಯಾಕೆ ನೂರೆಂಟು ರಿಫ್ರೆಷರ್ ಗಳನ್ನು ಮಾಡಿ ಮಕ್ಕಳ ಜೀವ ತಿಂತಾರೋ? ರಿಫ್ರೆಷರ್ ಎನ್ನುವುದೊಂದು ಮಾಫಿಯಾವೇ? ಶಿಕ್ಷಣ ಇಲಾಖೆಯವರೇ ಒಂದೆರಡು ಪುಸ್ತಕಗಳನ್ನು ಯಾಕೆ ಬಿಡುಗಡೆ ಮಾಡಬಾರದು? ಅದ ರಿಂದಲೇ ಕೆಲವು ಪ್ರಶ್ನೆಗಳನ್ನೇಕೆ ಕೇಳಬಾರದು? ಎಂಬುದು ಶಿಕ್ಷಕರ ಮನದಲ್ಲಿ ಸುಳಿದಾ ಡುವ ಪ್ರಶ್ನೆಗಳು.
ಶಿಕ್ಷಣ ಇಲಾಖೆಯು ಈ ವಿಷಯದ ಬಗ್ಗೆ ಗಮನಹರಿಸಬೇಕಿದೆ. ಈ ವಿಷಯವನ್ನು ಹಗುರ ವಾಗಿ ಪರಿಗಣಿಸದೇ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹಲವು ಪುಸ್ತಕ ಪ್ರಕಾಶಕರು ಪೈಪೋಟಿಗೆ ಬಿದ್ದು, ಬಗೆಬಗೆಯ ಕ್ಲಿಷ್ಟ ಪ್ರಶ್ನೆಗಳನ್ನು ರಚಿಸಿ, ತಮ್ಮ ಪುಸ್ತಕವೇ ಶ್ರೇಷ್ಠ ವೆನ್ನುವ ಸಮರ್ಥನೆಗೆ ನಿಂತಿದ್ದಾರೆ. ಪ್ರಶ್ನೆಪತ್ರಿಕೆಗಳನ್ನು ಅನವಶ್ಯಕವಾಗಿ ಕಷ್ಟವಾಗಿಸಲು ಪ್ರೇರೇಪಿಸುತ್ತಿದ್ದಾರೆ.
ಶಾಲೆಯಲ್ಲಿ ನಿಗದಿಪಡಿಸಿದ ಪುಸ್ತಕದಿಂದ ಪಾಠ-ಪ್ರವಚನ ಮಾಡಿ, ಅದೇ ಪುಸ್ತಕದಿಂದ ಅಲ್ಲದಿದ್ದರೂ ಪಾಠದ ಆಧಾರದ ಮೇಲೆ ಕೆಲವು ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳ ಬಹುದು. ಅನವಶ್ಯಕವಾಗಿ ತರಹೇವಾರಿ ಪ್ರಶ್ನೆಗಳನ್ನು ಮಾಡಿ, ಎಲ್ಲ ಮಕ್ಕಳನ್ನೂ ಒಂದೇ ತಕ್ಕಡಿಯಲ್ಲಿ ಅಂದರೆ ಪ್ರಶ್ನೆಪತ್ರಿಕೆಯ ಆಧಾರದ ಮೇಲೆ ಅಳೆಯುವುದು ಮೂರ್ಖತನವೇ ಸರಿ.
10 ಮತ್ತು 12ನೇ ತರಗತಿಯ ಪ್ರಶ್ನೆಪತ್ರಿಕೆಗಳನ್ನು ಸ್ವಲ್ಪ ಸುಲಭ ಮಾಡಿ, ಮಕ್ಕಳು ಶಿಕ್ಷಣ ದಲ್ಲಿ ಆಸಕ್ತಿ ಕಳೆದುಕೊಳ್ಳದೇ, ಬೋರ್ಡ್ ಪರೀಕ್ಷೆಗಳನ್ನು ಎದುರಿಸಿ ಮುಂದುವರಿಯು
ವಂತೆ ಮಾಡುವುದು ಶ್ರೇಯಸ್ಕರ. ಪ್ರೊ-ಷನಲ್ ಕೋರ್ಸುಗಳನ್ನು ಮಾಡುವಾಗ, ಅವರ ವರ ವೃತ್ತಿಗೆ ಸಹಾಯಕವಾಗುವಂಥ ಪರೀಕ್ಷೆಗಳನ್ನು ಮಾಡಿದರೆ ಒಳ್ಳೆಯದು.
ಎಲ್ಲಾ ಖಾಸಗಿ ವಿದ್ಯಾಸಂಸ್ಥೆಗಳು ಮನಬಂದಂತೆ ವರ್ತಿಸುತ್ತಿವೆ. ಅಂದರೆ, ಬಹಳ ಬೇಗನೆ 10 ಮತ್ತು 12ನೇ ತರಗತಿಗಳಿಗೆ ಪಾಠಗಳನ್ನು ಶುರುಮಾಡುವುದು, ನಿಗದಿತ ಪಠ್ಯಕ್ರಮವನ್ನು ಬಹಳ ಬೇಗ ಮುಗಿಸುವುದು, ಹಲವು ಪೂರ್ವತಯಾರಿ ಪರೀಕ್ಷೆಗಳನ್ನು ಮಾಡುವುದು ಇತ್ಯಾದಿ.
ಸರಕಾರಿ ಶಾಲೆಗಳ ಮಕ್ಕಳು ಇದರಿಂದ ವಂಚಿತರು. ಮತ್ತೊಂದು ಅತಿರೇಕದ ಸಂಗತಿ ಯೆಂದರೆ, 5-6ನೇ ತರಗತಿಯಲ್ಲಿಯೇ ಹೈಸ್ಕೂಲ್‌ನ ಪಾಠಗಳನ್ನು ಮಾಡಿ, ಅವರನ್ನು ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ತಯಾರು ಮಾಡುವುದು; ತುತ್ತು ಇಳಿಯದ ಗಂಟಲಲ್ಲಿ ಕಡು ಬನ್ನು ತುರುಕುವ ಕೆಲಸ ಮಾಡುವುದು. ಈ ವಿಷಯದ ಬಗ್ಗೆ ಬರೆಯುತ್ತಾ ಹೋದರೆ ವಿಷಯ ದಾರಿ ತಪ್ಪುತ್ತದೆ.
ಪೋಷಕರಲ್ಲಿ ಮಕ್ಕಳ ಮೇಲಿರುವ ಅತಿಯಾದ ನಿರೀಕ್ಷೆಯನ್ನು ಶಿಕ್ಷಣ ಸಂಸ್ಥೆಗಳು ನಗದು ಮಾಡಿಕೊಳ್ಳುತ್ತಿವೆ. ರಿಫ್ರೆಷರ್ ಗಳನ್ನು ಪ್ರಕಟಿಸುವವರು ಚೆನ್ನಾಗಿ ದುಡ್ಡು ಮಾಡುತ್ತಿದ್ದಾರೆ. ಪೋಷಕರು ಬಗೆಬಗೆಯ ಪುಸ್ತಕಗಳನ್ನು ತಂದು ತಮ್ಮ ಮಕ್ಕಳ ಮುಂದೆ ಗುಡ್ಡದಂತೆ ಪೇರಿಸಿ ಇಡುತ್ತಾರೆ. ಅದನ್ನೆಲ್ಲಾ ಓದುವಷ್ಟು ಸಮಯವೇ ಮಕ್ಕಳಿಗೆ ಇರುವುದಿಲ್ಲ. ಎಲ್ಲಿಂದ ಶುರುಮಾಡಲಿ?’ ಎನ್ನುವ ಗೊಂದಲವಷ್ಟೇ ಮಕ್ಕಳ ಪಾಲಿಗೆ ಗಟ್ಟಿ!
ಹೋ! ಸರಿ ಸರಿ. ಈಗ ವಿಷಯಕ್ಕೆ ಬರೋಣ. ಯಾವ ರಿಫ್ರೆಷರ್ ಓದಲಿ ಎಂದು ಕೇಳಿದ ವಿದ್ಯಾರ್ಥಿಗೆ, “ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸು, ಅರ್ಥವಾಗದ ಪ್ರಶ್ನೆಗಳನ್ನು ನನ್ನ ಬಳಿ ಬಂದು ಕೇಳು" ಎಂದು ಹೇಳಿಕಳುಹಿಸಿದೆ. ಪರೀಕ್ಷೆಗೆ ಕಮ್ಮಿ ಸಮಯವಿದ್ದಾಗ ಎಲ್ಲಾ ಪಾಠಗಳನ್ನೂ ಮೆಲುಕುಹಾಕಲು ಸಹಕಾರಿಯಾಗಿರುವುದು ಹಳೆಯ ಪ್ರಶ್ನೆಪತ್ರಿಕೆಗಳು. ಇಂಥ ಪ್ರಶ್ನೆಪತ್ರಿಕೆಗಳ ಗೊಂಚಲನ್ನು ತಯಾರು ಮಾಡಿಟ್ಟುಕೊಳ್ಳಿ ಮುಂದಿನ ವರ್ಷ ಪಬ್ಲಿಕ್ ಪರೀಕ್ಷೆ ಬರೆಯುವ ಮಕ್ಕಳೇ.... ನಿಮಗೆ ಶುಭವಾಗಲಿ.
(ಲೇಖಕಿ ಶಿಕ್ಷಕಿ)