Wednesday, 11th December 2024

ಆರೋಗ್ಯ ಕ್ಷೇತ್ರ ಮೂಲ ಸೌಲಭ್ಯಕ್ಕೆ 64,180 ಕೋಟಿ ರೂ. ಘೋಷಣೆ

ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಅವರು ಆರೋಗ್ಯ ಕ್ಷೇತ್ರ ಮೂಲ ಸೌಲಭ್ಯಕ್ಕೆ 64,180 ಕೋಟಿ ರೂ. ಘೋಷಣೆ ಮಾಡಿದರು.

ಕೊರೊನಾ ಮಹಾಮಾರಿ ನಡುವೆ ಬಜೆಟ್ ಮಂಡನೆ ತಯಾರಿ ನಡೆದಿದೆ. ನಮ್ಮ ದೇಶದಲ್ಲಿ ಹಲವರು ಮನೆ ಕಳೆದುಕೊಂಡಿದ್ದಾರೆ. ಲಾಕ್ ಡೌನ್ ಬಳಿಕ ಗರೀಬ್ ಕಲ್ಯಾಣ್ ಯೋಜನೆ ಘೋಷಣೆ ಮಾಡಲಾಗಿದೆ. ದೇಶ ಸಂಕಷ್ಟದಲ್ಲಿದ್ದಾಗ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ.

ಕೊರೊನಾಗೆ ಎರಡು ಲಸಿಕೆಗಳು ಬಳಕೆಯಲ್ಲಿದ್ದು, ಮತ್ತೆರಡು ಲಸಿಕೆಗಳು ಶೀಘ್ರವೇ ಲಭ್ಯವಾಗಲಿದೆ. ಕೇಂದ್ರ ಸರ್ಕಾರ ಬಡವರು, ದಲಿತರು, ಬುಡಕಟ್ಟು ಸಮುದಾಯಕ್ಕೆ ನೆರವಾಗಿದೆ ಎಂದರು.

ಐದು ಆಧಾರ ಸ್ತಂಬಗಳ ಮೇಲೆ ಬಜೆಟ್ ಮಂಡನೆಯಾಗಲಿದೆ. 17 ಸಾವಿರ ಗ್ರಾಮೀಣಾ ವೆನಲ್ ನೆಸ್ ಸೆಂಟರ್ ಗಳಿಗೆ ಬೆಂಬಲ, ಎಲ್ಲ ಜಿಲ್ಲೆಗಳಲ್ಲಿ ಉನ್ನತ ಮಟ್ಟದ ಲ್ಯಾಬ್ ಗಳ ಸ್ಥಾಪನೆ 112 ಜಿಲ್ಲೆಗಳಲ್ಲಿ ಪೌಷ್ಠಿಕ ವೃದ್ಧಿಗೆ ಆಧ್ಯತೆ. ಜನರಿಗೆ ಶುದ್ದಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.

ಮೂಲಸೌಕರ್ಯ ವಲಯಕ್ಕೆ ಮುಂದಿನ 3 ವರ್ಷಗಳಲ್ಲಿ 5 ಲಕ್ಷ ಕೋಟಿ ನೆರವು ನೀಡಲು ನಿರ್ಧರಿಸಲಾಗಿದೆ