Friday, 13th December 2024

ಟೊಮೆಟೊ ರೈತನ ಹತ್ಯೆ: ದರೋಡೆ ಶಂಕೆ..!

ಆಂಧ್ರಪ್ರದೇಶ: ಅನ್ನಮಯ್ಯ ಜಿಲ್ಲೆಯಲ್ಲಿ ಟೊಮೆಟೊ ರೈತನನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಇದು ದರೋಡೆ ಪ್ರಕರಣ ಎಂದು ಪೊಲೀಸರು ಶಂಕಿಸಿ ದ್ದಾರೆ.

ಮದನಪಲ್ಲಿ ಮಂಡಲದ ಬೋಡಿಮಲ್ಲದಿನ್ನೆ ಗ್ರಾಮದಲ್ಲಿ ನರೇಂ ರಾಜಶೇಖರ್ ರೆಡ್ಡಿ (62) ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಟೊಮೇಟೊ ಖರೀದಿಸುವ ನೆಪದಲ್ಲಿ ಅಪರಿಚಿತ ವ್ಯಕ್ತಿಗಳು ಜಮೀನಿಗೆ ಬಂದಿದ್ದರು. ಪತಿ ಊರಿಗೆ ಹೋಗಿರುವುದಾಗಿ ತಿಳಿಸಿದಾಗ ಅವರು ಅಲ್ಲಿಂದ ತೆರಳಿದರು ಎಂದು ರೆಡ್ಡಿ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.

ಟೊಮೇಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಟೊಮೇಟೊ ಮಾರಾಟ ಮಾಡಿ ರೆಡ್ಡಿ 30 ಲಕ್ಷ ರೂ. ಆದಾಯ ಗಳಿಸಿದ್ದ ಎಂದು ವರದಿ ಯಾಗಿದೆ. ಕೊಲೆಗೂ ಇದಕ್ಕೂ ಸಂಬಂಧ ಇರುವ ಶಂಕೆ ವ್ಯಕ್ತವಾಗಿದೆ. ರೈತರು ಹಣ ಸಾಗಿಸು ತ್ತಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.