Friday, 20th September 2024

ʼಇಂಡಿಯಾ ಬ್ಲಾಕ್‌ʼ ಒಕ್ಕೂಟದ ಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ: ʼಇಂಡಿಯಾ ಬ್ಲಾಕ್‌ʼ ಒಕ್ಕೂಟದ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂರು ರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಕರೆದಿದ್ದ ಸಭೆಯು ಬಹುತೇಕ ರದ್ದಾಗಿದೆ.

ಇತರ ಪ್ರಮುಖ ಪಕ್ಷಗಳ ನಾಯಕರು ಮೀಟಿಂಗ್‌ಗೆ ಬರುವುದನ್ನು ರದ್ದುಪಡಿಸಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ – ಮೂವರೂ ಸಭೆಗೆ ತಾವು ಬರುವುದಿಲ್ಲ ಎಂದು ತಿಳಿಸಿದ್ದರು.

ಈ ಮೂವರೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸಬೇಕಿದ್ದ ಬಣದ ಹಿರಿಯ ಸದಸ್ಯರಾಗಿರುವವರು.

“ಮಿತ್ರಪಕ್ಷಗಳೊಂದಿಗೆ ಸೀಟುಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿದ್ದರೆ ಕಾಂಗ್ರೆಸ್‌ ಪಕ್ಷದ ಸೋಲಿನ ಅಂತರವು ಚಿಕ್ಕದಾಗಿರುತ್ತಿತ್ತು ಅಥವಾ ತಡೆಯ ಬಹುದಿತ್ತು. ಅದು ಒಪ್ಪಿಕೊಳ್ಳದ್ದರಿಂದ ಮತಗಳು ಒಡೆದುಹೋದವುʼʼ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. “ನನಗೆ ಮೀಟಿಂಗ್‌ನ ವಿಷಯವೇ ಗೊತ್ತಿಲ್ಲ. ನನಗೆ ಉತ್ತರ ಬಂಗಾಳದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮವಿದೆ. ಆದ್ದರಿಂದ ನಾನು ಬರಲು ಆಗುವುದಿಲ್ಲ” ಎಂದಿದ್ದಾರೆ ಅವರು.