Thursday, 19th September 2024

ನನಗೆ ಇನ್ನೂ 10-15 ವರ್ಷ ಬದುಕಿದೆ ಅಷ್ಟೇ, ಕಿರಿಯರಿಗೆ ಲಸಿಕೆ ನೀಡಿ: ಖರ್ಗೆ

ನವದೆಹಲಿ : ಕೊರೋನಾ ಲಸಿಕೆ ಅಭಿಯಾನದ ಮುಂದಿನ ಭಾಗವಾಗಿ ಇಂದಿನಿಂದ ಹಿರಿಯ ನಾಗರಿಕರಿಗೆ ಸರ್ಕಾರ ಲಸಿಕೆ ನೀಡಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ , ಮೊದಲು ಕಿರಿಯರಿಗೆ ಈ ಲಸಿಕೆ ನೀಡ ಬೇಕು ಎಂದು ಹೇಳಿದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ’ನಾನು 70 ವರ್ಷ ಮೇಲ್ಪಟ್ಟವಯಸ್ಸಿನವನಾಗಿದ್ದೇನೆ. ನನ್ನ ಬದಲಾಗಿ, ಇನ್ನು ಹಲವು ಕಾಲ ಬಾಳಿ ಬದುಕಬೇಕಾದ ಕಿರಿಯರಿಗೆ ನೀವು ಅದನ್ನು (Covid-19 ಲಸಿಕೆ) ನೀಡಬೇಕು. ನನಗೆ ಇನ್ನೂ 10-15 ವರ್ಷ ಬದುಕಿದೆ ಅಷ್ಟೇ’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ರಾಜಕಾರಣಿಗಳು ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಸ್ವೀಕರಿಸಿದರು. ಏಮ್ಸ್ ನಲ್ಲಿ ಭಾರತ್ ಬಯೋಟೆಕ್ ನಿಂದ ಸ್ವದೇಶಿ ನಿರ್ಮಿತ ಕೊವಾಕ್ಸಿನ್ ಅನ್ನು ಪಿಎಂ ಮೋದಿ ಸ್ವಾಗತಿಸಿದ್ದು, ಇನ್ನೋಕ್ಯುಲೇಟೆಡ್ ಗೆ ಅರ್ಹರಾದ ಎಲ್ಲರಿಗೂ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *