Wednesday, 11th December 2024

ಟೆಸ್ಲಾ ಮೌಲ್ಯದಲ್ಲಿನ ಕುಸಿತ: ಇದಕ್ಕೆ ಕಾರಣ ಒಂದು ಕಮೆಂಟ್‌

ನವದೆಹಲಿ: ಸೆಪ್ಟೆಂಬರ್​ 2020ರ ಬಳಿಕ ಟೆಸ್ಲಾ ಇದೇ ಮೊದಲ ಬಾರಿಗೆ ಅತಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಟೆಸ್ಲಾ ಮೌಲ್ಯದಲ್ಲಿನ ಕುಸಿತವು ಶನಿವಾರ ಮಸ್ಕ್​ ಮಾಡಿದ ಟ್ವೀಟ್‌ ಕಾರಣವಾಗಿದೆ.

ಎಲಾನ್​ ಮಸ್ಕ್​ ಬಿಟ್​ ಕಾಯಿನ್​ಗಳ ಬೆಲೆ 58 ಸಾವಿರ ಡಾಲರ್​ಗೆ ಏರಿಕೆ ಕಂಡಿತ್ತು. ಆದರೆ ಅವರ ಒಂದು ಟ್ವೀಟ್​ನಿಂದಾಗಿ ಈ ಬಿಟ್​ ಕಾಯಿನ್​ ಬೆಲೆ 50 ಸಾವಿರ ಡಾಲರ್​ಗೆ ಕುಸಿತ ಕಂಡಿದೆ. ಮಸ್ಕ್,​ ಬಿಟ್​ಕಾಯಿನ್ ಬೆಲೆ ಹೆಚ್ಚಿದೆ ಎಂದು ಹೇಳುತ್ತಿದ್ದಂತೆಯೇ ಸೋಮವಾರ ಟೆಸ್ಲಾದ ಷೇರುಗಳು ಕುಸಿತ ಕಂಡಿದೆ.

ಈ ಮೂಲಕ ಟೆಸ್ಲಾ ಸಿಇಓ ಎಲಾನ್​ ಮಸ್ಕ್​ ಬ್ಲೂಮ್​ಬರ್ಗ್​ನ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈಗ ಅಮೆಜಾನ್​ ಸಂಸ್ಥಾಪಕ ಜೆಫ್​ ಬೆಜೋಸ್​​ ಬ್ಲೂಮ್​ ಬರ್ಗ್​ ಬಿಲಿಯನೇರ್​ ಸೂಚ್ಯಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.