Monday, 16th September 2024

ಸ್ನೇಹಿತನ ಜತೆ ರಾಮಲೀಲಾ ವೀಕ್ಷಿಸಲು ತೆರಳಿದ್ದ ವೇಳೆ ಗುಂಡಿಕ್ಕಿ ಹತ್ಯೆ

ಗುರುಗ್ರಾಮ್: ರಾಮಲೀಲಾ ಪೆಂಡಲ್​ ಹಿಂದೆ ಇಬ್ಬರು ವ್ಯಕ್ತಿಗಳೊಂದಿಗೆ ಜಗಳವಾಡಿದ ಬಳಿಕ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮ ನಗರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಡಿಜೆ ಆಪರೇಟರ್ ಜೊತೆ ಕೆಲಸ ಮಾಡುತ್ತಿದ್ದ ಆಶಿಶ್ (20) ಎಂಬಾತ ಸ್ನೇಹಿತನೊಂದಿಗೆ ರಾಮಲೀಲಾ ವೀಕ್ಷಿಸಲು ತೆರಳಿದ್ದ. ಈ ವೇಳೆ ಕೊಲೆ ಮಾಡಲಾಗಿದ್ದು, ಜಗಳಕ್ಕೆ ಕಾರಣ ತಿಳಿದುಬಂದಿಲ್ಲ, ತನಿಖೆ ಮುಂದುವರೆದಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಶಿಶ್ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದು, ಆಶಿಶ್ ಅವರ ಚಿಕ್ಕಪ್ಪ ಸೂರಜ್ ನೀಡಿದ ದೂರಿನ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ.

ಗುರುವಾರ ರಾತ್ರಿ ರಾಮಲೀಲಾ ವೀಕ್ಷಿಸಲು ಹೋಗಿದ್ದ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಮಗೆ ಗುಂಡು ತಗುಲಿದ ಮಾಹಿತಿ ಲಭಿಸಿತು. ಆಶಿಶ್ ಸ್ನೇಹಿತ ರಾದ ಕರಣ್ ಮತ್ತು ಧೀರಜ್ ಅವರು ನೀಡಿದ ಮಾಹಿತಿ ಪ್ರಕಾರ, ನಿಶಿ ಮತ್ತು ರೋಹನ್ ಎಂಬ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ.

ಸೂರಜ್ ದೂರಿನ ಆಧಾರದ ಮೇಲೆ ನಿಶಿ ಮತ್ತು ರೋಹನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *