Sunday, 28th April 2024

ಕೋವಿಡ್ ಕಾರ್ಯ, ಪಕ್ಷ ಸಂಘಟನೆ ಕುರಿತು ಶಾಸಕರ ಜೊತೆ ಚರ್ಚೆ: ಅರುಣ್ ಸಿಂಗ್

ಬೆಂಗಳೂರು: ನನ್ನನ್ನು ಭೇಟಿ ಮಾಡಲು ಅಪೇಕ್ಷಿಸಿದ ಕಾರ್ಯಕರ್ತರು ಮತ್ತು ಶಾಸಕರ ಜೊತೆ ಇಂದು ಮಾತನಾಡಿದ್ದೇನೆ. ಕೋವಿಡ್ ಸಂಬಂಧಿತ ಕಾರ್ಯಗಳು ಮತ್ತು ಪಕ್ಷದ ಸಂಘಟನಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿರುವುದು ಇದರಿಂದ ವ್ಯಕ್ತ ವಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕೋವಿಡ್ ನಿರ್ವಹಣೆ ಹಾಗೂ ಶಾಸಕರ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪಕ್ಷದ ಸಂಘಟನೆ ಕುರಿತು ಪ್ರಶ್ನಿಸಿದ್ದು, ಅತ್ಯುತ್ತಮ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಲಭಿಸಿದೆ. ಹಗಲಿರುಳೆನ್ನದೆ ಶಾಸಕರು ಶ್ರಮಿಸಿದ್ದು, ಇದರಿಂದ ಅತ್ಯಂತ ಸಂತುಷ್ಟನಾ ಗಿದ್ದೇನೆ ಎಂದು ತಿಳಿಸಿದರು.

ಶಾಸಕರ ಜೊತೆ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬಂದಿಲ್ಲ ಎಂದ ಅವರು, ಭವಿಷ್ಯದಲ್ಲಿ ನಡೆಸಬೇಕಾದ ಯೋಗ ದಿನಾಚರಣೆ ಹಾಗೂ ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಬಲಿದಾನ ದಿನ ಮತ್ತು ಜನ್ಮ ದಿನಾಚರಣೆ ಯಶಸ್ಸಿಗೆ ಶ್ರಮಿಸಲು ತಿಳಿಸಿದ್ದಾಗಿ ಹೇಳಿದರು. ಪ್ರಧಾನಿಯವರ ಮತ್ತು ಶ್ರೀ ಯಡಿಯೂರಪ್ಪ ಅವರ ಸರಕಾರದ ವಿವಿಧ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಇನ್ನಷ್ಟು ಮಾಹಿತಿ ನೀಡುವಂತೆ ತಿಳಿಸಿದ್ದಾಗಿ ಹೇಳಿದರು. ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಭಾವ ಇಲ್ಲ ಎಂದು ಶಾಸಕರು ತಿಳಿಸಿದ್ದಾಗಿ ವಿವರಿಸಿದರು.

ಪಕ್ಷದ ಕಾರ್ಯಕರ್ತರು ಮತ್ತು ಶಾಸಕರು ಅತ್ಯಂತ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಇದರಿಂದ ಸಂತೋಷವಾಗಿದೆ ಎಂದರು. ಪಕ್ಷದಲ್ಲಿ ಒಂದಿಬ್ಬರು ಶಾಸಕರ ಕೆಲಸಗಳು ಮತ್ತು ಹೇಳಿಕೆಗಳಿಂದ ಪಕ್ಷದ ಹೆಸರು ಹಾಳಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮತ್ತು ಸಂಘಟನಾ ಪದಾಧಿಕಾರಿಗಳು ಅವರ ಹೇಳಿಕೆಗಳ ಬಗ್ಗೆ ಗಮನಿಸುತ್ತಿದ್ದಾರೆ. ಅವರ ಬಗ್ಗೆ ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!