Sunday, 28th April 2024

ಕೊಳಕು ಭಾಷೆ ಪ್ರಮಾದಕ್ಕೆ ಅಂತ್ಯ ಹಾಡಿದ ಗೂಗಲ್‌

ಬೆಂಗಳೂರು: ನಾಡು, ನುಡಿಯ ವಿಚಾರದಲ್ಲಿ ಕನ್ನಡಿಗರು ಎಂದಿಗೂ ಸ್ವಾಭಿಮಾನಿಗಳು. ಅಂತಹ ಸ್ವಾಭಿಮಾನವನ್ನು ಕೆಣಕು ವಂತಹ ಕೆಲಸವನ್ನು ಗುರುವಾರ ಗೂಗಲ್​ ಮಾಡಿತು. ಆದರೆ, ಗೂಗಲ್​ನ ಈ ಕಾರ್ಯದ ವಿರುದ್ಧ ತಿರುಗಿಬಿದ್ದ ಕನ್ನಡಿಗರು ಅದಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಇದರ ಪ್ರತಿಫಲವಾಗಿ ಗೂಗಲ್​ ಈಗ ತನ್ನ ಪ್ರಮಾದ ಅರಿತು, ತಪ್ಪು ತಿದ್ದುಕೊಂಡಿದೆ.

ಕಳೆದ ಎರಡು ಮೂರು ಗಂಟೆಗಳಲ್ಲಿ ದೇಶದಲ್ಲಿ ಅದರಲ್ಲಿಯೂ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಗೂಗಲ್​ಗೆ ಕನ್ನಡಿಗರು ತಕ್ಕ ಉತ್ತರ ನೀಡಿ ಫೀಡ್​ ಬ್ಯಾಕ್​ (feedback) ನೀಡಿದ್ದಾರೆ. ಕನ್ನಡಿಗರು ನಿರಂತರ ವಾಗಿ ಇದಕ್ಕೆ ಫೀಡ್​ಬ್ಯಾಕ್​ ನೀಡಿದ ಹಿನ್ನಲೆ ಗೂಗಲ್​ನ ತನ್ನ ಪ್ರಮಾದ ಅರಿತು ತಪ್ಪು ಸರಿಪಡಿಸಿದೆ.

ಭಾರತದ ಕೊಳಕು ಭಾಷೆ (ugliest language in inda) ಯಾವುದು ಎಂಬ ಪ್ರಶ್ನೆಯನ್ನು ಗೂಗಲ್​ನಲ್ಲಿ ಸರ್ಚ್​ ಮಾಡಿದಾಕ್ಷಣ ಅದು ಕನ್ನಡ (Kannada) ಎಂದು ತೋರಿಸುತ್ತಿತ್ತು. ಈ ವಿಚಾರ ಕನ್ನಡಿಗರ ರೋಷವನ್ನು ಬಡಿದೆಬ್ಬಿಸಿತು.

ಇದಕ್ಕೆ ಪರ್ಯಾಯವಾಗಿ ಗೂಗಲ್​ನಲ್ಲಿ ಕ್ವೀನ್​ ಆಫ್​​ ಲಾಂಗ್ವೇಜ್​., ಭಾಷೆಯ ರಾಣಿ ಎಂಬ ಹುಡುಕಾಟ ಕೂಡ ಹೆಚ್ಚಾಗಿ ನಡೆಯಿತು. ಅತಿ ಹೆಚ್ಚು ವರ್ಣಮಾಲೆ, ಸಾಹಿತ್ಯ, ಭಾಷಾ ಸೊಗಡನ್ನು ಹೊಂದಿರುವ ಬಗ್ಗೆ ಕೂಡ ಹುಡುಕಾಟ ನಡೆಸಲಾಯಿತು.

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಅರಿವಿಗೆ ಬಂದ ಗೂಗಲ್​ ಇದನ್ನು ಸರಿಪಡಿಸಿದೆ. ಇದೀಗ ಯಾವುದು ಕೊಳಕು ಭಾಷೆ ಎಂದು ಗೂಗಲ್​ನಲ್ಲಿ ಟೈಪ್​ ಮಾಡಿದರೆ, ಪ್ರತಿಯೊಂದು ಭಾಷೆಯೂ ತನ್ನದೇ ಆದ ಗೌರವವಿದೆ ಎಂಬ ಅಭಿಪ್ರಾಯ ಕಾಣಿಸುತ್ತಿದೆ.

ಗೂಗಲ್​ ನಲ್ಲಿ ಮಾಹಿತಿ ಕುರಿತು ಬಳಕೆದಾರರು ನೀಡಿದ ಫೀಡ್​ ಬ್ಯಾಕ್​ ಆಧಾರ ಅದು ಫಲಿತಾಂಶವನ್ನು ಅದು ತೋರಿಸುತ್ತದೆ. ಇದೇ ಹಿನ್ನಲೆ ಕನ್ನಡಿಗರು ಸ್ವಯಂ ಆಗಿ ಈ ತಪ್ಪನ್ನು ಅಳಿಸಲು ಮುಂದಾದರು. ಗೂಗಲ್​ನಲ್ಲಿ Ugliest Language in India ಎಂದು ಸರ್ಚ್​ ಮಾಡಿದಾಕ್ಷಣ ಬಂದ ಉತ್ತರದ ಕೆಳಗೆ ಫೀಡ್​ಬ್ಯಾಕ್ (feed back)​ ಎಂದು ಕ್ಲಿಕ್​ ಮಾಡಿದರೆ, ಅದರಲ್ಲಿ ಬರುವ ಆಯ್ಕೆಗಳನ್ನು ಸೆಲೆಕ್ಟ್​ ಮಾಡಿದಾಕ್ಷಣ ಮೂಡುವ ಆಯ್ಕೆಯಲ್ಲಿ ಇದು ಅಪರಾಧ (its hateful ) ಎಂಬ ಆಯ್ಕೆಯನ್ನು ಕ್ಲಿಕ್​ ಮಾಡಿ ಅಭಿಪ್ರಾಯ ತಿಳಿಸುವ ಆಯ್ಕೆ ಇದೆ. ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಇದಕ್ಕೆ ವರದಿ ಮಾಡಿದ ಹಿನ್ನೆಲೆ ಗೂಗಲ್​ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!