Saturday, 27th April 2024

ಬೆಳ್ತಂಗಡಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ನಿಧನ

ಬೆಳ್ತಂಗಡಿ: ತಾಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರ ಬೆಳ್ತಂಗಡಿಯ ಪಡಂಗಡಿ ಗ್ರಾಮದ ಪಡಂಗಡಿ ಭೋಜರಾಜ ಹೆಗ್ಡೆ(98) ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಅಪ್ಪಟ ಗಾಂಧಿವಾದಿ, ಸದಾ ಖಾದಿ ವಸ್ತ್ರಧಾರಿ, ಸರಳ ಜೀವನ, ನಿತ್ಯಜೀವನದಲ್ಲಿ ಧರ್ಮದ ಅನುಷ್ಠಾನ, ಸದಾ ಪರರ ಹಿತಕ್ಕಾಗಿ ಶ್ರಮಿಸುವ ಭೋಜರಾಜ ಹೆಗ್ಡೆ ಅವರು 1923ರ ಫೆಬ್ರವರಿ 13 ರಂದು ಪಡಂಗಡಿಯಲ್ಲಿ ಶಾಂತಿರಾಜ ಶೆಟ್ಟಿ ಮತ್ತು ಲಕ್ಷ್ಮೀಮತಿ ದಂಪತಿ ಮಗನಾಗಿ ಜನಿಸಿದ್ದರು.

ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ 1942 ರಲ್ಲಿ ಆಯೋಜಿಸಿದ ಭಾರತ ಬಿಟ್ಟುತೊಲಗಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮಂಗಳೂರಿ ನಲ್ಲಿ ಗಾಂಧಿಪಾರ್ಕ್‌ನಲ್ಲಿ ನಡೆದ ಚಳುವಳಿಗೆ ಪಡಂಗಡಿಯಿಂದ ತನ್ನ ಶಿಕ್ಷಕ ಕುಂಞಣ್ಣ ರೈ ಅವರ ಸೈಕಲ್‌ನಲ್ಲಿ ಏರಿ ಮಂಗಳೂರಿಗೆ ತೆರಳಿ ಧರಣಿ ಕುಳಿತಿದ್ದರು.

ಹೋರಾಟದಲ್ಲಿ ಧೋತಿ ಹರಿದಾಗ ಅಂದು ಖಾದಿ ಬಟ್ಟೆ ಖರೀದಿಸಿ ಧರಿಸಿದವರು ಇಂದಿನವರೆಗೆ ಖಾದಿ ದಿರಿಸನ್ನೇ ತೊಡುತ್ತಿದ್ದರು. ಅಹ್ಮದಾಬಾದ್‌ನಲ್ಲಿ ಮೊರಾರ್ಜಿ ದೇಸಾಯಿ ಅವರ ಸೇವೆಯನ್ನು ಗುರುತಿಸಿ ಗ್ರಾಮೋದ್ಧಾರಕ ಪ್ರಶಸ್ತಿ ನೀಡಿ ಗೌರವಿಸಿತ್ತು.

 

Leave a Reply

Your email address will not be published. Required fields are marked *

error: Content is protected !!