Saturday, 27th April 2024

ಕನಕದಾಸರು ದಾಸ ಸಾಹಿತ್ಯದ ಗೌರಿಶಂಕರ: ಪಾಟೀಲ

ಹಾರೂಗೇರಿ: ದಾಸ ಸಾಹಿತ್ಯವು ಕನ್ನಡ ಸಾಹಿತ್ಯದ ಹೇಮಬೆಟ್ಟ. ಹೇಮಬೆಟ್ಟದನೆತ್ತಿಯ ಮೇಲೆ ಹಾರಾಡುವ ಕನ್ನಡ ಬಾವುಟ ಕನಕದಾಸರೆಂದು ಮುಖ್ಯೋಪಾಧ್ಯಾಯ ಆರ್.ಎಮ್.ಪಾಟೀಲ ಹೇಳಿದರು.

ಅವರು ಸನಿಹದ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತ ನಾಡುತ್ತ ಕನಕದಾಸರು ಜನಮನಮಡಿ ಮಾಡಲು ಅವಿರತ ಶ್ರಮಿಸಿದ ಸಮಾಜಮುಖಿ ಸಂತ ಶಿರೋಮಣಿಗಳಾಗಿದ್ದಾರೆಂದು ಅಭಿಮತ ಹಂಚಿಕೊoಡರು.

ಹಿರಿಯ ಶಿಕ್ಷಕ ಸಾವನಕುಮಾರ ಗಸ್ತಿ ಮಾತನಾಡಿ ಜಾತಿ ಪದ್ಧತಿಯನ್ನು ಖಡಾಖಂಡಿತವಾಗಿ ಖಂಡಿಸಿದ ಜನಾನುರಾಗಿ ಕೀರ್ತನ ಕಾರ ಕನಕದಾಸರು ನಾಡಿಗೆ ನೀಡಿದ ಕೊಡುಗೆ ಅನುಪಮˌಅನನ್ಯವೆಂದು ಹೇಳಿದರು.

ಸಮಾಜ ವಿಜ್ಞಾನ ಶಿಕ್ಷಕ ಎಸ್.ಎಸ್.ಕಾಂಬಳೆ, ದೈಹಿಕ ಶಿಕ್ಷಣ ಶಿಕ್ಷಕ ಎಮ್.ಕೆ.ಕಳ್ಳಿಗುದ್ದಿ, ವಿಜ್ಞಾನ ಶಿಕ್ಷಕಿ ಎಸ್.ಪಿ.ಮಗೆಣ್ಣವರ, ಎಲ್.ಎಸ್.ಮಗದುಮ್ ಉಪಸ್ಥಿತರಿದ್ದರು.ಕುಶಲಕರ್ಮಿ ಎನ್.ಎಸ್.ಕಾಂಬಳೆ ನಿರೂಪಿಸಿದರು. ಕಾರ್ಯಕ್ರಮ ಸಂಘಟಕ ಎಸ್.ಬಿ.ಹಳ್ಳೂರ ಸ್ವಾಗತಿಸಿದರು. ಅಕ್ಷರದ ವ್ವಜೆ.ಎಸ್.ಮಹಾಬಳಶೆಟ್ಟಿ ಶರಣು ಸಮರ್ಪಿಸಿದರು.

 

Leave a Reply

Your email address will not be published. Required fields are marked *

error: Content is protected !!