Saturday, 14th December 2024

ಆಧುನಿಕ ಜಗತ್ತಿನಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿವೆ: ಡಾ.ನಿರ್ಮಲಾ ಕೆಳಮನಿ

ಕಲಬುರಗಿ: ಮಹಿಳೆ ಜೀವನದ ಎಲ್ಲ ಕ್ಷೇತ್ರದಲ್ಲಿಯೂ ಬಲಿಷ್ಠಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ತನ್ನ ಜವಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ಸಾಗಿಸುತ್ತಿದ್ದಾಳೆ. ಹೆಣ್ಣು ಎಲ್ಲ ರೀತಿಯಲ್ಲೂ ಸಮರ್ಥಳಾದರೂ, ಅವಳ ಮೇಲಿನ ದೌರ್ಜನ್ಯ, ಹಿಂಸೆ ಕಡಿಮೆಯಾಗುತ್ತಿಲ್ಲ. ಈ ಆಧುನಿಕ ಜಗತ್ತಿನಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ಮತ್ತು ಹಿಂಸೆ ದಿನಕ್ರಮೇಣ ಹೆಚ್ಚಾಗುತ್ತಿವೆ ಎಂದು ಹಿಂಗು ಲಾಂಬಿಕಾ ಆಯುರ್ವೇದ ವೈದ್ಯಕೀಯ ಕಾಲೇಜನ ಪ್ರಾಧ್ಯಾಪಕರಾದ ಡಾ.ನಿರ್ಮಲಾ ಕೆಳಮನಿ ಅಭಿಪ್ರಾಯವ್ಯಕ್ತಪಡಿಸಿದರು.

ಶರಣಬಸವ ವಿಶ್ವವಿದ್ಯಾಲಯದ ಕಂಪ್ಯೂಟರ ಸೈನ್ಸ್ ಇಂಜಿನಿಯರಿಂಗ್ ಮಹಿಳೆಯರ ವಿಭಾಗದ ಸಭಾಂಗಣದಲ್ಲಿ ಆಂತರಿಕ ದೂರು ಸಮಿತಿಯ ಅಡಿಯಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ಜಾಗೃತಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸ ಪುಟಗಳನ್ನು ಮೆಲಕು ಹಾಕಿದಾಗ ಹೆಣ್ಣಿಗೆ ಶ್ರೇಷ್ಠ ಸ್ಥಾನವಿತ್ತು. ಉತ್ತಮ ಸಂಸ್ಕೃತಿ ಇತ್ತು ಆ ಸಂಸ್ಕೃತಿ ಇಂದು ಮರೆಯಾಗು ತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಹಿಳೆಯರು ತಮ್ಮ ವ್ಯಕ್ತಿತ್ವವನ್ನು ಸದಾಕಾಪಾಡಿಕೊಳ್ಳಬೇಕು ತಮ್ಮ ಜೀವನದ ಮೌಲ್ಯಗಳನ್ನು ಅರಿತುಕೊಂಡು ಜೀವನ ನಡೆಸಬೇಕು. ಯುವಜನತೆ  ಜೀವನದ ಉತ್ಸಾಹ ಕಳೆದುಕೊಳ್ಳಬಾರದು. ಉತ್ತಮ ಸಂಸ್ಕೃತಿ ಬೆಳಸಿಕೊಳ್ಳಬೇಕು. ತಮ್ಮ ಜೀವನದ ಜವಬ್ದಾರಿಗಳನ್ನು ಅರಿತುಕೊಂಡು ಜೀವನ ಸಾಗಿಸಬೇಕು ಆಗ ಮಾತ್ರ ದೌರ್ಜನ್ಯಗಳನ್ನು ನಿರ್ಮೂಲನೆಗೊಳಿಸಲು ಸಾಧ್ಯ ಎಂದರು.

ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷಿö್ಮ ಪಾಟೀಲ ಮಾಕಾ, ಐಸಿಸಿ ಕಮಿಟಿ ಚೆರಮನ್ ಡಾ. ಸುಜತಾ ಮಲ್ಲಾಪೂರೆ, sಸಂಚಾಲಕ ಡಾ. ಸ್ವಾತಿ ಕಲಶೆಟ್ಟಿ, ಸದಸ್ಯರಾದ ಡಾ. ಸುನಿತಾ ಬಿ ಪಾಟೀಲ, ಡಾ. ಜಗದೇವ ಕುಮಾರ ಪಾಟೀಲ, ಪ್ರೊ. ವೀರಶೆಟ್ಟಿ, ಅಮೃತಾ ವಿದ್ಯಾರ್ಥಿ ಅಭಿಷೇಕ ಸೇರಿದಂತೆ ಇತರರು ಇದ್ದರು. ಪ್ರೊ. ಸೃಷ್ಠಿ ನಿರೂಪಿಸಿದರು. ವಿದ್ಯಾರ್ಥಿನಿ ಉಷಾ ಪ್ರಾರ್ಥನೆ ಗೀತೆ ಹಾಡಿದರು.