Sunday, 28th April 2024

ಮಣಿಕಂಠಗೆ ಪೊಲೀಸ್ ಭದ್ರತೆ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ: ದಿನೇದಿನೇ ಬಿಜೆಪಿ ಮುಖಂಡ ‌ಮಣಿಕಂಠ ರಾಠೋಡ್‌ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ನಡುವಣ ಕೊಲೆ ಬೆದರಿಕೆ ಆರೋಪ ಪ್ರತ್ಯಾರೋಪ ಗಳ ಕಾವು ಏರುತ್ತಲೇ ಇದೆ. ಇದೀಗ ಪೊಲೀಸ್ ಭದ್ರತೆ ಒದಗಿಸುವಂತೆ ಆಗ್ರಹಿಸಿ ಮಣಿಕಂಠ ರಾಠೋಡ್ ಅಭಿಮಾನಿ ಬಳಗದಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿರುವ ಘಟನೆ ಕಂಡುಬಂತ್ತು.

ನಗರದ ಎಸ್.ವಿ.ಪಿ.ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬಹೃತ್ ಪ್ರತಿಭಟನೆ ನಡೆದ ಪ್ರತಿಭಟನಕಾರರು ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗ್ಗಿ ಆಕ್ರೋಶ ವ್ಯಕ್ತಪಡಿಸಿದರು.

ನನ್ನನ್ನು ಕೊಲೆ ಮಾಡಲು ರಾಜು ಕಪನೂರ ಗನ್ ಖರೀದಿ ಮಾಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ  ಬಿಜೆಪಿ ಮುಖಂಡ, ಉದ್ಯಮಿ ಮಣಿಕಂಠ ರಾಠೋಡ್ ಸುದ್ದಿಗೋಷ್ಠಿಯಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದರು. ವಿಡಿಯೋ ರಿಲೀಸ್ ಆದ ಬಳಿಕ ಕಪನೂರ ನನ್ನು ಅರೆಸ್ಟ್ ಸಹ ಮಾಡಗಿದೆ. ಶಾಸಕ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕುನಿಂದ ಮಣಿಕಂಠ ರಾಠೋಡ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಆದರಿಂದ, ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ತನಿಖೆಗೆ ಒಳಪಡಿಸಿ ಶಾಸಕ ಖರ್ಗೆ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನಿಂದ ಮಣಿಕಂಠ ರಾಠೋಡ್ ಅಭಿಮಾನಿಗಳು ಭಾಗಿಯಾಗಿದ್ದರಿಂದ ಸರ್ದಾರ್ ವಲ್ಲಭ ಭಾಯ್ ಪಟೇಲ್ ವೃತ್ತ ದಿಂದ ಮಾರ್ಕೆಟ್ ಗೆ ತೆರಳುವ ಮುಖ್ಯರಸ್ತೆ ಸುಮಾರು ಹೊತ್ತು ಬಂದಾಗಿ, ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಸಾರ್ವಜನಿಕರು ಪರದಾಟ ನಡೆಸಿದ ಘಟನೆ ನಡೆಯಿತು.
error: Content is protected !!