Saturday, 14th December 2024

ಪ್ರಿಯತಮನನ್ನು ಕೊಲೆ ಮಾಡಿಸಿದ ಪ್ರಿಯತಮೆ

Murder
ತುಮಕೂರು: ಮೇ.೨೦ರಂದು ರಾತ್ರಿ ಯಲ್ಲಾಪುರದಲ್ಲಿನ ಟೈಲ್ಸ್ ಅಂಗಡಿಯಲ್ಲಿದ್ದ ಚಿಕ್ಕಮಗಳೂರು ಮೂಲದ ಝಾಕೀರ್ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣ ಬೇದಿಸಿದ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕುಬ್ರಾನ್, ರುಬಾನಿ ಹಾಗೂ ವಿಕಾಸ್ ಬಂಧಿತ ಆರೋಪಿಗಳು. ದ್ವೇಷಕ್ಕೆ ಕೊಲೆ : ಚಿಕ್ಕಮಗಳೂರು ಮೂಲದ ಝಾಕೀರ್, ಕುಬ್ರಾನ್ ಈಕೆಯ ಮಗಳು ರಬಾನಿ ನಡುವೆ ಕ್ಷುಲ್ಲಕ ಕಾರಣಕ್ಕೆ ವರ್ಷದ ಹಿಂದೆ ಜಗಳವಾಗಿದ್ದು, ಕುಬ್ರಾನ್ ಹಾಗೂ ರಬಾನಿ ಇಬ್ಬರು ಸೇರಿ, ರಬಾನಿ ಪ್ರಿಯತಮ ವಿಕಾಸ್ ಮೂಲಕ ಝಾಕೀರ್‌ನನ್ನು ಕೊಲೆ ಮಾಡಿ ಸಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಕುಬ್ರಾನ್, ರಬಾನಿ ಮತ್ತು ಕೊಲೆಯಾಗಿರುವ ಝಾಕೀರ್ ನಡುವೆ ವ್ಯವಹಾರ ಹಾಗೂ ಅಕ್ರಮ ಸಂಬ0ಧವಿದ್ದು, ಈ ವಿಚಾರದಲ್ಲಿಯೇ ಮನಸ್ತಾಪವಾಗಿ ಝಾಕೀರ್ ಕುಬ್ರಾನ್ ಮತ್ತು ರಬಾನಿಯಿಂದ ದೂರವಾಗಿ ತುಮಕೂರಿಗೆ ಬಂದು ಟೈಲ್ಸ್ ವ್ಯವಹಾರ ನಡೆಸುತ್ತಿದ್ದನು. ಇದರಿಂದ ಸಿಟ್ಟಿಗೆದ್ದ ಕುಬ್ರಾನ್ ಹಾಗೂ ರಬಾನಿ ಆತನ ಮೇಲೆ ಹಗೆ ಸಾಧಿಸಲು ಕೆ.ಬಿ.ಕ್ರಾಸ್ ಮೂಲದ ವಿಕಾಸ್ ವಿಕಾಸ್ ಮೂಲಕವೇ ಝಾಕೀರ್ ಹತ್ಯೆ ಮಾಡಲು ಯೋಜನೆ ರೂಪಿಸಿ ಕೊಲೆ ಮಾಡಿದ್ದರು.