Saturday, 14th December 2024

ನದಿ ಸ್ವಚ್ಛತೆಗಾಗಿ ತೆರಳಿದ್ದ 11 ವಿದ್ಯಾರ್ಥಿಗಳು ನೀರು ಪಾಲು

ಜಕಾರ್ತ: ಇಂಡೊನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ನದಿ ಸ್ವಚ್ಛತೆಗಾಗಿ ತೆರಳಿದ್ದವರಲ್ಲಿ 11 ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. 10 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಇಸ್ಲಾಮಿಕ್‌ ಜೂನಿಯರ್‌ ಪ್ರೌಢಶಾಲೆಯ 150 ವಿದ್ಯಾರ್ಥಿಗಳು ಶುಕ್ರವಾರ ಸಿಲಿಯೂರ್‌ ನದಿ ತೀರದ ಉದ್ದಕ್ಕೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿ ಸಿದ್ದರು. ಈ ವೇಳೆ 21 ಮಕ್ಕಳು ನದಿಯಲ್ಲಿ ಜಾರಿ ಬಿದ್ದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.

ನದಿಯಲ್ಲಿ ಪ್ರವಾಹ ಇರಲಿಲ್ಲ. ನೀರಿನಲ್ಲಿ ಮುಳುಗಿದ ಮಕ್ಕಳು ಪರಸ್ಪರ ಕೈಗಳನ್ನು ಹಿಡಿದಿದ್ದರು. ಈ ವೇಳೆ ಒಬ್ಬ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ದ್ದಾನೆ. ಉಳಿದವರೂ ಅವನ ಜೊತೆ ನೀರು ಪಾಲಾಗಿದ್ದಾರೆ’ ಎಂದು ಬಾಂಡುಂಗ್‌ ಶೋಧ ಮತ್ತು ರಕ್ಷಣಾ ಕಚೇರಿಯ ಮುಖ್ಯಸ್ಥ ಹೇಳಿದರು.

ಹತ್ತಿರದ ಜನರು ಮತ್ತು ರಕ್ಷಣಾ ಸಿಬ್ಬಂದಿ 10 ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.