Bangladesh Unrest: ಬಾಂಗ್ಲಾದೇಶದಲ್ಲಿ ಶೀಘ್ರವೇ ಎಮರ್ಜೆನ್ಸಿ ಜಾರಿ? ಸೇನೆಯಿಂದ ತುರ್ತು ಸಭೆ
Bangladesh Unrest: ಕಳೆದೊಂದು ವರ್ಷದಿಂದ ದಂಗೆಗೆ ಸಾಕ್ಷಿಯಾಗಿರುವ ಬಾಂಗ್ಲಾದೇಶದಲ್ಲಿ ಶೀಘ್ರವೇ ಸೇನೆ ಆಡಳಿತವನ್ನುಕೈಗೆತ್ತಕೊಳ್ಳುವ ಭೀತಿ ಎದುರಾಗಿದೆ. ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ದೇಶ ಬಿಟ್ಟು ಪಲಾಯನ ಮಾಡಿದ ನಂತರ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಮೊಹಮ್ಮದ್ ಯೂನಸ್ ವಿರುದ್ಧವೂ ಇದೀಗ ದಂಗೆ ಭುಗಿಲೆದ್ದಿದೆ.


ಢಾಕಾ: ಬಾಂಗ್ಲಾದೇಶದಲ್ಲಿ ಕಳೆದೊಂದು ವರ್ಷದಿಂದ ಭುಗಿಲೆದ್ದಿರುವ ದಂಗೆ(Bangladesh Unrest) ದಿನೇ ದಿನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಶೇಖ್ ಹಸೀನಾ ಸರ್ಕಾರ ಪದಚ್ಯುತಿಗೊಂಡು ಇದೀಗ ಹಂಗಾಮಿ ಸರ್ಕಾರದ ನೇತೃತ್ವ ವಹಿಸಿರುವ ಮೊಹಮ್ಮದ್ ಯೂನಸ್ ವಿರುದ್ಧವೂ ದಂಗೆ ಶುರುವಾಗಿದೆ. ಈ ನಡುವೆ ಬಾಂಗ್ಲಾದೇಶದ ಸೇನೆ ತುರ್ತು ಸಭೆ ನಡೆಸಿದ್ದು, ಇನ್ಮುಂದೆ ದೇಶದಲ್ಲಿ ಮಿಲಿಟರಿ ಆಳ್ವಿಕೆ ಆರಂಭವಾಗುತ್ತಾ ಎಂಬ ಆತಂಕ ಎದುರಾಗಿದೆ. ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ನೇತೃತ್ವದಲ್ಲಿ ಸೇನೆಯು ಸೋಮವಾರ ತುರ್ತು ಸಭೆ ನಡೆಸಿತ್ತು. ಸಭೆಯಲ್ಲಿ ಐವರು ಲೆಫ್ಟಿನೆಂಟ್ ಜನರಲ್‌ಗಳು, ಎಂಟು ಮೇಜರ್ ಜನರಲ್‌ಗಳು(GOC), ಸ್ವತಂತ್ರ ಬ್ರಿಗೇಡ್‌ಗಳ ಕಮಾಂಡಿಂಗ್ ಅಧಿಕಾರಿಗಳು ಮತ್ತು ಸೇನಾ ಪ್ರಧಾನ ಕಚೇರಿಯ ಅಧಿಕಾರಿಗಳು ಸೇರಿದಂತೆ ಉನ್ನತ ಸೇನಾ ಅಧಿಕಾರಿಗಳು ಭಾಗವಹಿಸಿದ್ದರು.
ಇನ್ನು ಸಭೆ ಬೆನ್ನಲ್ಲೇ ದೇಶದಲ್ಲಿ ಯೂನಸ್ ವಿರುದ್ಧ ದಂಗೆ ಭುಗಿಲೆದ್ದು, ತುರ್ತು ಪರಿಸ್ಥಿತಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಜಾಪ್ರಭುತ್ವ ಆಳ್ವಿಕೆಗೆ ಸಂಪೂರ್ಣವಾಗಿ ಕೊನೆಗೊಳಿಸಿ ಸೇನೆಯೇ ದೇಶದ ಆಡಳಿತ ಕೈಗೆತ್ತಿಕೊಳ್ಳುವ ಆತಂಕ ಸೃಷ್ಟಿಯಾಗಿದೆ. ಇಲ್ಲವಾದಲ್ಲಿ ಪಾಕಿಸ್ತಾನದಂತೆ ನಾಮ್‌ಕಾವಸ್ತೆ ಸರ್ಕಾರ ಅಧಿಕಾರ ಪೂರ್ತಿ ಸೇನೆ ಕೈಯಲ್ಲಿ ಎನ್ನುವಂತಹ ಸ್ಥಿತಿ ನಿರ್ಮಾಣವಾಗಬಹುದು. ಅದೂ ಅಲ್ಲದೇ ಈಗಾಗಲೇ ಸೇನೆಯ ಭಾಗಶಃ ಆಡಳಿತವನ್ನು ಕೈಗೆತ್ತಿಕೊಂಡಿರುವುದು ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ಮುಖಂಡರು ಸೈನ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಇದು ಸೇನೆಯ ಅಸಮಾಧಾನಕ್ಕೆ ಕಾರಣವಾಗಿದೆ ಮತ್ತು ಈ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಒಂದು ದೊಡ್ಡ ಮಟ್ಟದ ಯೋಜನೆಯನ್ನೇ ಸೇನೆ ರೂಪಿಸುತ್ತಿದೆ ಎನ್ನಲಾಗಿದೆ. ಯೋಜನೆಯನ್ನು ರೂಪಿಸಲು ಅದನ್ನು ಪ್ರಚೋದಿಸಿದೆ. ಸರಣಿ ಪ್ರತಿಭಟನಾ ಮೆರವಣಿಗೆಗಳ ನಂತರ ಬಾಂಗ್ಲಾದೇಶ ಸೇನೆಯು ದೇಶಾದ್ಯಂತ ತನ್ನ ಸೇನಾ ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತಿದೆ. ಶುಕ್ರವಾರ ಬೆಳಿಗ್ಗೆಯಿಂದ ಜಂಟಿ ಭದ್ರತಾ ಪಡೆಗಳು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದ್ದು, ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿವೆ.
ಈ ಸುದ್ದಿಯನ್ನೂ ಓದಿ: Bangladesh Textbook: ಬಾಂಗ್ಲಾದೇಶ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ; ಮುಜಿಬುರ್ ರೆಹಮಾನ್, ಸೇರಿದಂತೆ ಹಲವರ ಹೆಸರು ಮಾಯ
ಈ ಎಲ್ಲಾ ಬೆಳವಣಿಗೆ ನಡುವೆ, ಯೂನಸ್ ಶೀಘ್ರದಲ್ಲೇ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಚೀನಾ-ಬಾಂಗ್ಲಾದೇಶ ಸಂಬಂಧದಲ್ಲಿ ಬದಲಾವಣೆಗೆ ಈ ಭೇಟಿ ಕಾರಣವಾಗಬಹುದು ಎಂದು ಅನೇಕರು ಹೇಳುತ್ತಿದ್ದಾರೆ. ಫ್ರಾನ್ಸ್ ಮೂಲದ ಬಾಂಗ್ಲಾದೇಶದ ಸಾಮಾಜಿಕ ಮಾಧ್ಯಮ ಪ್ರಭಾವಿ ಪಿನಾಕಿ ಭಟ್ಟಾಚಾರ್ಯ ಅವರು ಸೇನಾ ಮುಖ್ಯಸ್ಥರ (CAS) ವಿರುದ್ಧ ಪ್ರತಿಭಟಿಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದ ನಂತರ ಇತ್ತೀಚಿನ ವಾರಗಳಲ್ಲಿ ಸೇನೆಯ ವಿರುದ್ಧ ವ್ಯಾಪಕ ಸಾಮಾಜಿಕ ಮಾಧ್ಯಮ ಅಭಿಯಾನವೂ ನಡೆದಿದೆ.