ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US-Iran War: ಅಮೆರಿಕ ವಿರುದ್ಧ ನ್ಯೂಕ್ಲಿಯರ್‌ ಬಾಂಬ್‌ ದಾಳಿಗೆ ಇರಾನ್‌ ರೆಡಿ? ಟ್ರಂಪ್‌ಗೆ ಬಂತು ಎಚ್ಚರಿಕೆ ಸಂದೇಶ!

US-Iran War: ಅಮೆರಿಕ ಮತ್ತು ಇರಾನ್‌ನಡುವಿನ ಉದ್ವಿಗ್ನತೆಯು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಲೇ ಇದೆ. ಈಗ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಸಲಹೆಗಾರ ನೀಡಿದ ಹೇಳಿಕೆಯು ಪೂರ್ಣ ಪ್ರಮಾಣದ ಯುದ್ದಕ್ಕೂ ಇರಾನ್‌ ಸಿದ್ದವಾಗಿದೆ ಎಂಬ ಸಂದೇಶವನ್ನು ಅಮೆರಿಕಕ್ಕೆ ರವಾನಿಸಿದೆ.

ನ್ಯೂಕ್ಲಿಯರ್‌ ಬಾಂಬ್‌ ಅಟ್ಯಾಕ್‌ ಮಾಡ್ತೇವೆ- ಟ್ರಂಪ್‌ಗೆ ಇರಾನ್ ಟಕ್ಕರ್!

ಅಯತೊಲ್ಲಾ ಅಲಿ ಖಮೇನಿಯ - ಟ್ರಂಪ್

Profile Sushmitha Jain Apr 1, 2025 1:40 PM

ವಾಷಿಂಗ್ಟನ್: ಅಮೆರಿಕ(America) ಮತ್ತು ಇರಾನ್‌(Iran) ನಡುವಿನ ಉದ್ವಿಗ್ನತೆಯು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಲೇ ಇದೆ. ಈಗ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ(Ayatollah Ali Khamenei)ವರ ಸಲಹೆಗಾರ ನೀಡಿದ ಹೇಳಿಕೆಯು ಪೂರ್ಣ ಪ್ರಮಾಣದ ಯುದ್ದಕ್ಕೂ ಇರಾನ್‌ ಸಿದ್ದವಾಗಿದೆ ಎಂಬ ಸಂದೇಶವನ್ನು ಅಮೆರಿಕಕ್ಕೆ ರವಾನಿಸಿದೆ. ಮಾತ್ರವಲ್ಲದೇ, ಈ ಯುದ್ಧದಲ್ಲಿ ಪರಮಾಣು ಬಾಂಬ್‌(Nuclear Weapons)ಗಳ ಬಳಕೆಯ ಕುರಿತು ಪ್ರಸ್ತಾಪವಾಗಿದ್ದು, ಎರಡು ದೇಶಗಳ ನಡುವಿನ ಜಗಳ ಈಗ ಜಾಗತಿಕ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ಸೋಮವಾರ ಸರ್ಕಾರಿ ಸ್ವಾಮ್ಯದ ಚಾನಲ್‌ಗೆ ಸಂದರ್ಶನ ನೀಡಿದ ಖಮೇನಿಯವರ ಸಲಹೆಗಾರ ಅಲಿ ಲಾರಿಜಾನಿ, ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳು ದಾಳಿ ಮಾಡಿದರೆ, ಇರಾನ್‌ ತನ್ನ ರಕ್ಷಣೆಗಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್ ತನ್ನ ಪರಮಾಣು ಬಾಂಬ್‌ ಯೋಜನೆಯನ್ನು ಸ್ಥಗಿತಗೊಳಿಸಲು ಒಪ್ಪದಿದ್ದರೆ, ಅಮೆರಿಕ ಬಾಂಬ್‌ ದಾಳಿ ಮಾಡಲಿದೆ ಎಂಬ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆಗೆ ಪ್ರತಿಕ್ರಿಯಿಸಿದ್ದ ಖಮೇನಿ, ಅಮೆರಿಕವೇನಾದರೂ ದಾಳಿ ನಡೆಸಿದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. ಈ ಪ್ರತಿಜ್ಞೆ ಮಾಡಿದ ಬೆಳವಣಿಗೆ ನಡೆದ ಬೆನ್ನಲ್ಲೇ, ಇರಾನ್‌ ಈಗ ಪರಮಾಣು ಬಾಂಬ್‌ ದಾಳಿಯ ಬೆದರಿಕೆ ಹಾಕಿದೆ.

ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸುತ್ತಿಲ್ಲ. ಆದರೆ, ನೀವು ಇರಾನ್‌ನ ಪರಮಾಣು ಯೋಜನೆಯ ವಿಚಾರದಲ್ಲಿ ಏನಾದರೂ ತಪ್ಪು ಹೆಜ್ಜೆ ಇಟ್ಟರೆ, ಇರಾನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲಿದೆ ಎಂದು ಲಾರಿಜಾನಿ ಅವರು ಹೇಳಿದ್ದಾಗಿ ಫ್ರಾನ್ಸ್ 24 ವರದಿ ಮಾಡಿದೆ. ಈ ರೀತಿ ಮಾಡಲು ನಮಗೆ ನಿಜವಾಗಿಯೂ ಇಷ್ಟವಿಲ್ಲ. ಆದರೆ, ಇದನ್ನು ಬಿಟ್ಟರೆ ನಮಗೆ ಬೇರೆ ಅಯ್ಕೆ ಇಲ್ಲ. ಅಮೆರಿಕಾ ಅಥವಾ ಅಮೆರಿಕದ ಮಿತ್ರ ರಾಷ್ಟ್ರಗಳು ಇರಾನ್‌ ಮೇಲೆ ಬಾಂಬ್‌ ದಾಳಿ ನಡೆಸಿದರೆ, ನಾವು ಕೂಡಾ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಪರಮಾಣು ಬಾಂಬ್‌ ದಾಳಿಯ ಕುರಿತು ಹೇಳಿದರು.

ಈ ಸುದ್ದಿಯನ್ನು ಓದಿ: Donald Trump: ಸಹಿ ಹಾಕ್ಲಿಲ್ಲ ಅಂದ್ರೆ 'ಬಾಂಬ್ ಹಾಕುತ್ತೇವೆ ; ಇರಾನ್‌ಗೆ ಟ್ರಂಪ್‌ ಬೆದರಿಕೆ

ಅಮೆರಿಕದಿಂದ ಸುಂಕ ವಿಧಿಸುವ ಎಚ್ಚರಿಕೆ:

ಒಂದು ವೇಳೆ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲು ಒಪ್ಪದಿದ್ದರೆ ಬಾಂಬ್ ದಾಳಿ ನಡೆಯಲಿದೆ ಎಂದು ಟ್ರಂಪ್ ಶನಿವಾರ ಹೇಳಿದ್ದಾಗಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ. ಮಾತ್ರವಲ್ಲದೇ ಇರಾನ್‌ ಮೇಲೆ "ದ್ವಿತೀಯ ಸುಂಕ"ಗಳನ್ನು ಹೇರಿ ಅದನ್ನು ಶಿಕ್ಷಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ವರದಿ ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಇರಾನ್‌ ಸುಪ್ರೀಂ ಲೀಡರ್‌ ಖಮೇನಿ, ಟ್ರಂಪ್ ಅವರ ಬೆದರಿಕೆ ಹಾಕಿದಂತೆ ಏನಾದರೂ ಇಂತಹ ಕ್ರಮಗಳನ್ನು ಅನುಸರಿಸಿದ್ದಲ್ಲಿ ನಾವು ಬಲವಾದ ಹೊಡೆತ ನೀಡಲಿದ್ದೇವೆ ಎಂದು ಹೇಳಿದರು.

"ಅಮೆರಿಕ ಮತ್ತು ಇಸ್ರೇಲ್ ನಡುವಿನ ದ್ವೇಷ ಯಾವಾಗಲೂ ಇದ್ದಿದ್ದೇ. ಅವರು ನಮ್ಮ ಮೇಲೆ ದಾಳಿ ಮಾಡುವ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ. ಆದರೆ ಅದು ಕಾರ್ಯಸಾಧುವಲ್ಲ ಎಂಬುದು ನಮ್ಮ ಭಾವನೆ. ಅವರು ಯಾವುದೇ ದುಷ್ಕೃತ್ಯ ಎಸಗಲು ಮುಂದಾದರೆ, ಬಲವಾದ ತಿರುಗೇಟು ನೀಡಲಿದ್ದೇವೆ" ಎಂದು ಖಮೇನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.