Saturday, 27th April 2024

ಲಿಂಗ ತಾರತಮ್ಯ: 1.1 ಮಿಲಿಯನ್ ಡಾಲರ್ ಪರಿಹಾರ ನೀಡಲು ಆದೇಶ

ಸ್ಯಾನ್ ಫ್ರಾನ್ಸಿಸ್ಕೋ : ಲಿಂಗ ಆಧಾರಿತ ತಾರತಮ್ಯ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಗೂಗಲ್ ತನ್ನ ಉದ್ಯೋಗಿಯೊಬ್ಬರಿಗೆ 1.1 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಗೂಗಲ್ ಕ್ಲೌಡ್ ಎಂಜಿನಿಯರಿಂಗ್ ನಿರ್ದೇಶಕ ಉಲ್ಕು ರೋವ್ ಎಂಬವರು ತಮ್ಮ ಮೇಲೆ ಲಿಂಗಾಧಾರಿತ ಅಸಮಾನತೆ ಎಸಗಲಾಗಿದೆ ಎಂದು ಮೊಕದ್ದಮೆ ಹೂಡಿದ್ದರು. ತಮಗಿಂತಲೂ ಕಡಿಮೆ ಅನುಭವ ಹೊಂದಿರುವ ಪುರುಷ ಉದ್ಯೋಗಿಗಳಿಗೆ ತಮಗಿಂತ ಹೆಚ್ಚು ವೇತನ ನೀಡಲಾಗುತ್ತಿದೆ ಎಂದು ಆರೋಪಿಸಿ ದ್ದರು.

ಈ ಪ್ರಕರಣದಲ್ಲಿ ದಂಡನಾತ್ಮಕ ಹಾನಿ ಮತ್ತು ನೋವು – ಸಂಕಟ ಎರಡೂ ವಿಷಯಗಳಲ್ಲಿ ದಂಡ ಪಾವತಿಸುವಂತೆ ಗೂಗಲ್​ಗೆ ನ್ಯಾಯಾಧೀಶರು ಆದೇಶಿಸಿದ್ದಾರೆ. ರೋವ್ ಪ್ರಕರಣದಲ್ಲಿ, ಗೂಗಲ್ ಲಿಂಗ ಆಧಾರಿತ ತಾರತಮ್ಯವನ್ನು ಮಾಡಿದೆ ಎಂದು ನ್ಯಾಯಾಧೀಶರು ನಿರ್ಧರಿಸಿದ್ದಾರೆ.

ರೋವ್ ಅವರು 2017 ರಲ್ಲಿ ಗೂಗಲ್​ನಲ್ಲಿ ಕೆಲಸ ಪ್ರಾರಂಭಿಸಿದಾಗ 23 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದರು.

ಲೈಂಗಿಕ ಕಿರುಕುಳ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡದ ಆರೋಪದಲ್ಲಿ 2018ರಲ್ಲಿ ಸುಮಾರು 20 ಸಾವಿರ ಉದ್ಯೋಗಿಗಳು ಕಂಪನಿಯ ವಿರುದ್ಧ ಭಾರಿ ಪ್ರತಿಭಟನೆ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!