Wednesday, 11th December 2024

ಕರೋನಾ ಪ್ರಕರಣ ಹೆಚ್ಚಳ: ಇಂಡೋನೇಷ್ಯಾದಲ್ಲಿ ಲಾಕ್‌ಡೌನ್‌ ಜಾರಿ

ಜಕಾರ್ತ : ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ಹಚ್ಚಳವಾದ ಕಾರಣದಿಂದಾಗಿ ದಕ್ಷಿಣ- ಪೂರ್ವ ಏಷ್ಯಾದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಿದೆ.

ಇಂಡೋನೇಷ್ಯಾದ 21 ಲಕ್ಷಕ್ಕೂ ಹೆಚ್ಚು ಮಂದಿಗೆ ಕೋವಿಡ್ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ, ದೇಶದ ಮುಖ್ಯ ಭೂ ಪ್ರದೇಶ ಜಾವಾ ಹಾಗೂ ಬಾಲಿಯಲ್ಲಿರುವ ಸಾರ್ವಜನಿಕ ಮನರಂಜನಾ ಕೇಂದ್ರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.

ಮೇ 14 ಕ್ಕೆ 2663 ಪ್ರಕರಣಗಳು ದೇಶದಲ್ಲಿ ವರದಿಯಾಗಿತ್ತು. ಆದರೆ, ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿತು.

ಜೂನ್ 29 ರಂದು 20 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಈಗ ಸತತವಾಗಿ ಪ್ರತಿದಿನ 20 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿ ಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಎರಡು ವಾರಗಳ ಲಾಕ್ ಡೌನ್ ಘೋಷಿಸಲಾಗಿದ್ದು, ರೋಗಿಗಳ ಸಂಖ್ಯೆಯಲ್ಲಿ ಇಳಿಕೆ ನಂತರ ಲಾಕ್ ಡೌನ್ ಸಡಿಲಿಕೆ ಬಗ್ಗೆ ನಿರ್ಧಾರ ಕೈಗೊಳ್ಳ ಲಾಗುತ್ತದೆ ಎಂದು ಸರ್ಕಾರ ಹೇಳಿದೆ.ರಾಜಧಾನಿ ಜಕಾರ್ತಾದ ಹೊರ ಭಾಗದಲ್ಲಿ ಎಲ್ಲೂ ಸರಿಯಾದ ಕ್ರಮದಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲ ಎಂದು ವರದಿ ಹೇಳಿದೆ.

58,000 ಮಂದಿ ಇಂಡೋನೇಷ್ಯಾದ ಒಟ್ಟು ಕೋವಿಡ್ ಪೀಡಿತರು. ಕಳೆದ ಮೂರು ದಿನಗಳಿಂದ 400ಕ್ಕೂ ಹೆಚ್ಚು ಪ್ರತಿದಿನ ಸಾವುಗಳು ದಾಖಲಾಗಿವೆ.