Bank Holidays: ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಭರ್ಜರಿ ರಜೆ, ಗ್ರಾಹಕರು ಗಮನಿಸಿ
ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ರಜಾ ದಿನಗಳಿವೆ. ರಾಜ್ಯ ಸರ್ಕಾರ ಘೋಷಿಸಿರುವ ರಜೆಗಳು ಹಾಗೂ ಆರ್‌ಬಿಐ ಹಾಲಿಡೇ ಕ್ಯಾಲೆಂಡರ್ ಪ್ರಕಾರ ನೋಡುವುದಾದರೆ ಈ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ರಜೆ ಇದೆ. ಬ್ಯಾಂಕ್‌ಗಳಿಗೆ ಯಾವಾಗ, ಯಾವ ಕಾರಣಕ್ಕೆ ರಜೆ ಎಂಬ ಪಟ್ಟಿ ಇಲ್ಲಿದೆ ನೋಡಿ.


ಬೆಂಗಳೂರು: ಏಪ್ರಿಲ್ (April) ತಿಂಗಳಲ್ಲಿ ಬ್ಯಾಂಕ್ ಗ್ರಾಹಕರು (Bank customers) ತಮ್ಮ ಬ್ಯಾಂಕ್‌ಗಳು ಯಾವ ದಿನಗಳಂದು ಕಾರ್ಯಾಚರಿಸುತ್ತವೆ ಎಂಬ ಬಗ್ಗೆ ಒಂದು ಗಮನ ಹರಿಸುವುದು ಸೂಕ್ತ. ಯಾಕೆಂದರೆ ಈ ತಿಂಗಳಲ್ಲಿ ಸಾಕಷ್ಟು ರಜೆಗಳು (Bank holidays) ಇವೆ. ಸರ್ಕಾರ ಘೋಷಿಸಿರುವ ರಜೆಗಳು, ಆರ್ ಬಿಐ ಹಾಲಿಡೇ ಕ್ಯಾಲೆಂಡರ್ ಪ್ರಕಾರ ನೋಡುವುದಾದರೆ ಈ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ರಜೆ ಇದೆ. ಬ್ಯಾಂಕ್ ಗಳಿಗೆ ಯಾವಾಗ, ಯಾವ ಕಾರಣಕ್ಕೆ ರಜೆ ಎಂಬ ಪಟ್ಟಿ ಇಲ್ಲಿದೆ ನೋಡಿ.
ಆರ್ ಬಿಐ ಹಾಲಿಡೇ ಕ್ಯಾಲೆಂಡರ್ ಪ್ರಕಾರ, ಶನಿವಾರ ಹಾಗೂ ಭಾನುವಾರವೂ ಸೇರಿ ಕರ್ನಾಟಕದಲ್ಲಿ ಮುಂಬರುವ ತಿಂಗಳಲ್ಲಿ ಒಟ್ಟು 10 ರಜೆಗಳಿದ್ದು, ಅವುಗಳ ಪಟ್ಟಿ ಇಲ್ಲಿದೆ.
ಏಪ್ರಿಲ್ 6- ಭಾನುವಾರ ರಜೆ
ಏಪ್ರಿಲ್ 10 ಗುರುವಾರ- ಮಹಾವೀರ ಜಯಂತಿ
ಏಪ್ರಿಲ್ 12- ಎರಡನೇ ಶನಿವಾರದ ರಜೆ
ಏಪ್ರಿಲ್ 13- ಭಾನುವಾರದ ರಜೆ
ಏಪ್ರಿಲ್ 14- ಸೋಮವಾರ- ಅಂಬೇಡ್ಕರ್ ಜಯಂತಿ
ಏಪ್ರಿಲ್ 18- ಶುಕ್ರವಾರ- ಗುಡ್ ಫ್ರೈಡೆ
ಏಪ್ರಿಲ್ 20- ಭಾನುವಾರದ ರಜೆ
ಏಪ್ರಿಲ್ 26- ನಾಲ್ಕನೇ ಶನಿವಾರದ ರಜೆ
ಏಪ್ರಿಲ್ 27- ಭಾನುವಾರ ರಜೆ
ಏಪ್ರಿಲ್ 30 ಬುಧವಾರ- ಬಸವ ಜಯಂತಿ
ದೇಶದಾದ್ಯಂತ ಇರುವ ಬ್ಯಾಂಕ್‌ಗಳ ರಜಾ ದಿನಗಳು
2025ರ ಏಪ್ರಿಲ್ ತಿಂಗಳಲ್ಲಿ ದೇಶದಾದ್ಯಂತ ಬ್ಯಾಂಕ್‌ಗಳಿಗೆ ಒಟ್ಟು 15 ದಿನಗಳವರೆಗೆ ರಜೆ ಇದೆ. ಆ ಪಟ್ಟಿ ಇಲ್ಲಿದೆ.
ಏ.1- ಮಂಗಳವಾರ- ಸರಹುಲ್ ಹಬ್ಬ (ಜಾರ್ಖಂಡ್‌ನಲ್ಲಿ ರಜೆ)
ಏ.6- ಭಾನುವಾರ
ಏ.10- ಗುರವಾರ- ಮಹಾವೀರ ಜಯಂತಿ (ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಯುಪಿ, ಪ.ಬಂಗಾಳದಲ್ಲಿ ರಜೆ)
ಏ.12- ಎರಡನೇ ಶನಿವಾರ
ಏಪ್ರಿಲ್ 13- ಭಾನುವಾರದ ರಜೆ
ಏಪ್ರಿಲ್ 14- ಸೋಮವಾರ- ಅಂಬೇಡ್ಕರ್ ಜಯಂತಿ, ವಿಷು, ಬಿಹು, ತಮಿಳು ಹೊಸ ವರ್ಷ, (ಕರ್ನಾಟಕ, ತಮಿಳುನಾಡು, ಸೇರಿ ಹೆಚ್ಚಿನ ರಾಜ್ಯಗಳಲ್ಲಿ ರಜೆ)
ಏಪ್ರಿಲ್ 18- ಶುಕ್ರವಾರ- ಗುಡ್ ಫ್ರೈಡೆ
ಏಪ್ರಿಲ್ 20- ಭಾನುವಾರದ ರಜೆ
ಏ.21- ಸೋಮವಾರ- ಗರಿಯಾ ಪೂಜೆ (ತ್ರಿಪುರಾ ರಜೆ)
ಏಪ್ರಿಲ್ 26- ನಾಲ್ಕನೇ ಶನಿವಾರದ ರಜೆ
ಏಪ್ರಿಲ್ 27- ಭಾನುವಾರ ರಜೆ
ಏಪ್ರಿಲ್. 29 ಮಂಗಳವಾರ- ಭಗವಾನ್ ಶ್ರೀ ಪರಷುರಾಮ್ ಜಯಂತಿ (ಹಿಮಾಚಲ ಪ್ರದೇಶದಲ್ಲಿ ರಜೆ)
ಏಪ್ರಿಲ್ 30 ಬುಧವಾರ- ಬಸವ ಜಯಂತಿ ( ಕರ್ನಾಟಕದಲ್ಲಿ ರಜೆ)
ಬ್ಯಾಂಕ್ ಗಳು ಸೇವೆ ಬಂದ್ ಮಾಡಿದ್ದರೂ, ಆನ್ ಲೈನ್ ಬ್ಯಾಂಕಿಂಗ್, ಎಟಿಎಂ, ನೆಟ್ ಬ್ಯಾಂಕಿಂಗ್, ಫೋನ್ ಪೇ ರೀತಿಯ ವಿವಿಧ ಆಪ್ ಗಳು ವರ್ಷದ 365 ದಿನಗಳೂ ಕಾರ್ಯನಿರ್ವಹಿಸುತ್ತವೆ. ಬ್ಯಾಂಕ್ ಗೆ ತೆರಳಿ ಖುದ್ದು ತೆರಳಿ ಕೆಲಸ ಆಗಬೇಕಾದವರು, ಮೊದಲೇ ಈ ರಜಾಪಟ್ಟಿಯನ್ನು ನೋಡಿಕೊಳ್ಳೋದು ಉತ್ತಮ.
ಇದನ್ನೂ ಓದಿ: Mid Day Meal: ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ: ಸರ್ಕಾರ ಆದೇಶ