Bangalore News: "ಸೂರ್ಯರಾಧನೆ' ಕಾರ್ಯಕ್ರಮದಲ್ಲಿ ನೂರಾರು ಜನರು 108 ಸುತ್ತುಗಳ "ಸೂರ್ಯ ನಮಸ್ಕಾರ'
ನಿರಾಕಾರ ಯೋಗ ಶಾಲೆ ಸಹಯೋಗದೊಂದಿಗೆ ಫಿಡೆಲಿಟಸ್ ಗ್ಯಾಲರಿ, ರಥಸಪ್ತಮಿ ನಿಮಿತ್ತ ಭಾನುವಾರ ಬನಶಂಕರಿಯಲ್ಲಿ ಆಯೋಜಿಸಿದ್ದ "ಸೂರ್ಯರಾಧನೆ' ಕಾರ್ಯಕ್ರಮದಲ್ಲಿ ನೂರಾರು ಜನರು 108 ಸುತ್ತುಗಳ "ಸೂರ್ಯ ನಮಸ್ಕಾರ' ಮಾಡುವ ಮೂಲಕ ಗಮನ ಸೆಳೆದರು. ಯೋಗ ಬೋಧಕ ಚೇತನ್ ಕುಮಾರ್ ಮಾತನಾಡಿ, ಮಾನಸಿಕ ಒತ್ತಡದಿಂದ ಹೊರಬರಲು ಸೂರ್ಯ ನಮಸ್ಕಾರ ಸಹಕಾರಿ.
![ಫಿಡೆಲಿಟಸ್ ಗ್ಯಾಲರಿಯಲ್ಲಿ ಗಮನ ಸೆಳೆದ ಸೂರ್ಯ ನಮಸ್ಕಾರ](https://cdn-vishwavani-prod.hindverse.com/media/original_images/Yoga_1.jpg)
![Profile](https://vishwavani.news/static/img/user.png)
ಬೆಂಗಳೂರು: ನಿರಾಕಾರ ಯೋಗ ಶಾಲೆ ಸಹಯೋಗದೊಂದಿಗೆ ಫಿಡೆಲಿಟಸ್ ಗ್ಯಾಲರಿ, ರಥಸಪ್ತಮಿ ನಿಮಿತ್ತ ಭಾನುವಾರ ಬನಶಂಕರಿಯಲ್ಲಿ ಆಯೋಜಿಸಿದ್ದ "ಸೂರ್ಯರಾಧನೆ' ಕಾರ್ಯಕ್ರಮದಲ್ಲಿ ನೂರಾರು ಜನರು 108 ಸುತ್ತುಗಳ "ಸೂರ್ಯ ನಮಸ್ಕಾರ' ಮಾಡುವ ಮೂಲಕ ಗಮನ ಸೆಳೆದರು. ಯೋಗ ಬೋಧಕ ಚೇತನ್ ಕುಮಾರ್ ಮಾತನಾಡಿ, ಮಾನಸಿಕ ಒತ್ತಡದಿಂದ ಹೊರಬರಲು ಸೂರ್ಯ ನಮಸ್ಕಾರ ಸಹಕಾರಿ. ಪ್ರತಿ ನಿತ್ಯ ಬೆಳಗ್ಗೆ ಇದನ್ನು ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ ಜೊತೆಗೆ ದೇಹ, ಉಸಿರಾಟ, ಮನಸ್ಸಿನಲ್ಲಿ ಸಾಮರಸ್ಯ ಮೂಡಲಿದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚಿಸುತ್ತದೆ. ದೈನಂದಿನ ಜೀವನದಲ್ಲಿ "ಸೂರ್ಯ ನಮಸ್ಕಾರ' ಅಳವಡಿಸಿಕೊಳ್ಳ ಬೇಕೆಂದು ಸಲಹೆ ನೀಡಿದರು.
ಇದನ್ನೂ ಓದಿ: Bangalore news: ಫೆ. 12 ರಂದು ಶ್ರೀ ಲಕ್ಷ್ಮೀ ನರಸಿಂಹ ವ್ರತ ಮಹೋತ್ಸವ
ಫಿಡೆಲಿಟಸ್ ಗ್ಯಾಲರಿ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಚ್ಯುತ್ಗೌಡ ಮಾತನಾಡಿ, ದಿನ ನಿತ್ಯದ ಒತ್ತಡದ ಜೀವನದ ನಡುವೆ ಸೂರ್ಯ ನಮಸ್ಕಾರ ಅನುಸರಿಸುವುದರಿಂದ ಮಾನಸಿಕ ವೇದನೆಗಳಿಂದ ಮುಕ್ತಿ ಹೊಂದಬಹುದು.
![Yago 2](https://cdn-vishwavani-prod.hindverse.com/media/images/Yago_2.max-1200x800.jpg)
ದೇಹದ ಶುದ್ಧೀಕರಣ ಮತ್ತು ಸದೃಢತೆಗೆ ಯೋಗಾಭ್ಯಾಸ ರಾಮಬಾಣ. ಪ್ರಾಚಿನ ಭಾರತೀಯ ತತ್ತ್ವಶಾಸ್ತ್ರದಲ್ಲಿ ಬೇರೂರಿರುವ ಯೋಗವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಗಮನಾರ್ಹ ಪ್ರಯೋಜನಗಳಿಂದಾಗಿ ಜಗತ್ತಿನಾದ್ಯಂತ ಜನಪ್ರಿಯತೆ ಹೊಂದಿದೆ ಎಂದರು. ಕಲಾವಿದ ಕೋಟೆಗದ್ದೆ ರವಿ ಮತ್ತಿತರರಿದ್ದರು.