ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಶಾಪಿಂಗ್‌ ಹೋಗಿದ್ದಕ್ಕೆ ಪತ್ನಿಯ ಕುತ್ತಿಗೆ ತುಳಿದು, ಉಸಿರುಗಟ್ಟಿಸಿ ಕೊಂದ ಪತಿ!

Murder Case: ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶಾಪಿಂಗ್‌ಗೆ ಹೋಗಿ ಬಂದಿದ್ದಕ್ಕೆ ಪತ್ನಿ ಜತೆಗೆ ಗಂಡ ಜಗಳ ತೆಗೆದಿದ್ದಾನೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಹೆಂಡತಿಯ ಕುತ್ತಿಗೆಯ ಮೇಲೆ ಕಾಲಿಟ್ಟು, ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಶಾಪಿಂಗ್‌ ಹೋಗಿದ್ದಕ್ಕೆ ಪತ್ನಿಯ ಕುತ್ತಿಗೆ ತುಳಿದು ಕೊಂದ ಪತಿ!

Profile Prabhakara R Jul 9, 2025 3:24 PM

ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. ಶಾಪಿಂಗ್‌ಗೆ ಹೋಗಿದ್ದಕ್ಕೆ ಪತ್ನಿಯನ್ನು ಪತಿಯೊಬ್ಬ ಬರ್ಬರ ಕೊಲೆ (Murder Case) ಮಾಡಿರುವುದು ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿ ಪದ್ಮಜ (29) ಕೊಲೆಯಾದವರು. ಪರಿ ಹರೀಶ್ ಕೊಲೆ ಆರೋಪಿ. ಶಾಪಿಂಗ್ ಹೋಗಿದ್ದಕ್ಕೆ ಕುತ್ತಿಗೆಯನ್ನು ಕಾಲಿನಿಂದ ತುಳಿದು ಉಸಿರು ಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಇವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ದಂಪತಿ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಬಿಇ ಮುಗಿಸಿಕೊಂಡಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಕೆಲ ತಿಂಗಳಿನಿಂದ ಗಂಡ ಹರೀಶ್ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಪತ್ನಿಯ ಜತೆಗೆ ನಿತ್ಯ ಗಲಾಟೆ ಮಾಡುತ್ತಿದ್ದ. ಆದರೆ ನೆನ್ನೆ ಶಾಪಿಂಗ್‌ಗೆ ಹೋಗಿ ಬಂದಿದ್ದಕ್ಕೆ ಪತ್ನಿ ಜತೆಗೆ ಹರೀಶ್ ಜಗಳ ತೆಗೆದಿದ್ದಾನೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಹೆಂಡತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಈ ಸುದ್ದಿಯನ್ನೂ ಓದಿ | DK Suresh: ಐಶ್ವರ್ಯ ಗೌಡ ವಂಚನೆ ಪ್ರಕರಣ: ಇಡಿ ಕೇಳಿದ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದ ಡಿ.ಕೆ.ಸುರೇಶ್

ಸಿಎಂ, ಡಿಸಿಎಂ ಹೆಸರಲ್ಲಿ ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದ ಮಹಿಳೆ ಅರೆಸ್ಟ್

_Fraud Case

ಬೆಂಗಳೂರು: ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. 20ಕ್ಕೂ ಹೆಚ್ಚು ಮಹಿಳೆಯರಿಗೆ 30 ಕೋಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಬಸವೇಶ್ವರನಗರ ಪೊಲೀಸರಿಂದ ಸವಿತಾ ಎಂಬಾಕೆಯನ್ನು ಬಂಧಿಸಲಾಗಿದೆ. ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು. ಸಿಎಂ, ಡಿಸಿಎಂ, ಸಚಿವ ಎಂ.ಬಿ. ಪಾಟಿಲ್ ಹೆಸರೇಳಿ ಗಾಳ ಹಾಕುತ್ತಿದ್ದ ಸವಿತಾ, ನಿಧಾನವಾಗಿ ಹೂಡಿಕೆ ನೆಪದಲ್ಲಿ ಹಣ ಪಡೆದುಕೊಳ್ತಿದ್ದಳು.

ಈ ಸುದ್ದಿಯನ್ನೂ ಓದಿ | Murder Case: ಕಲಬುರಗಿಯಲ್ಲೂ ರೇಣುಕಾಸ್ವಾಮಿ ರೀತಿಯ ಕೊಲೆ: ಪ್ರೇಯಸಿಗೆ ಕಿರುಕುಳ ನೀಡಿದಾತನ ಗುಪ್ತಾಂಗಕ್ಕೆ ಒದ್ದು ಹತ್ಯೆ

ಅಮೆರಿಕದಿಂದ ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಮಾಡಿದ್ದಾಳೆ. ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ನೀಡದೇ ನೆಪ ಹೇಳಿ ತಪ್ಪಿಸಿಕೊಳ್ತಿದ್ದಳು. ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಬಂಧನವಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಸವಿತಾ, ಮತ್ತದೇ ಚಾಳಿ ಮುಂದುವರಿಸಿ ಈಗ ಬಸವೇಶ್ವರ ನಗರ ಪೊಲೀಸರ ಅತಿಥಿಯಾಗಿದ್ದಾಳೆ.