Celebrity Fashion 2025: ರೇಷ್ಮೆಯ ಪ್ಯಾಂಟ್ ಸೂಟ್ನಲ್ಲಿ ನಟಿ ವಾಣಿ ಶ್ರೀ ಅತ್ಯಾಕರ್ಷಕ ಲುಕ್
Celebrity Fashion 2025: ನಟಿ ವಾಣಿ ಶ್ರೀ ಧರಿಸಿದ್ದ ಬ್ರೋಕೆಡ್ ಪ್ರಿಂಟೆಡ್ ಪ್ಯಾಂಟ್ ಸೂಟ್ ಅವರನ್ನು ಅತ್ಯಾಕರ್ಷಕವಾಗಿಸಿದೆ. ಹಾಗಾದಲ್ಲಿ ಅವರು ಧರಿಸಿದ್ದ ಈ ಔಟ್ಫಿಟ್ ವಿಶೇಷತೆಯೇನು? ಡಿಸೈನರ್ ಯಾರು? ಈ ಕುರಿತಂತೆ ಖುದ್ದು ನಟಿ ವಾಣಿ ಶ್ರೀ ವಿವರಿಸಿದ್ದಾರೆ.

ಚಿತ್ರಗಳು: ವಾಣಿ ಶ್ರೀ, ನಟಿ


ಬ್ರೋಕೆಡ್ ಪ್ರಿಂಟೆಡ್ ಪ್ಯಾಂಟ್ ಸೂಟ್ನಲ್ಲಿ ನಟಿ ವಾಣಿ ಶ್ರೀ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸ್ಪೋರ್ಟ್ಸ್ ಇವೆಂಟ್ವೊಂದರಲ್ಲಿ ಈ ಸ್ಪೆಷಲ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡ ವಾಣಿ ಶ್ರೀಯವರ ಈ ಲುಕ್ಕನ್ನು ಸಾಕಷ್ಟು ಫಾಲೋವರ್ಸ್ ಇಷ್ಟಪಟ್ಟಿದ್ದಾರೆ.

ಫ್ಯಾಷನೇಬಲ್ ಲುಕ್ನಲ್ಲಿ ವಾಣಿಶ್ರೀ
ಕಿರುತೆರೆಯಲ್ಲಿ ಸದ್ಯ ಬ್ಯುಸಿಯಾಗಿರುವ ನಟಿ ವಾಣಿ ಶ್ರೀ, ಸಾಕಷ್ಟು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಂತೂ ಇವೆಂಟ್ಗಳಲ್ಲಿ ಸಖತ್ ಫ್ಯಾಷೆನಬಲ್ ಲುಕ್ನಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಅವರ ಫ್ಯಾಷನ್ ಸೆನ್ಸ್ ಕೂಡ ಅವರ ಪರ್ಸನಾಲಿಟಿಗೆ ಕೈ ಹಿಡಿದ ಕನ್ನಡಿಯಂತಿದೆ ಎನ್ನುತ್ತಾರೆ ಅವರ ಫ್ಯಾಷನ್ ಅಭಿಮಾನಿಗಳು.

ವಾಣಿಶ್ರೀಯವರು ಹೇಳುವುದೇನು?
ಡಿಸೈನರ್ ಲಕ್ಷ್ಮಿ ಕೃಷ್ಣ ಲೆಬೆಲ್ನ ಈ ರೇಷ್ಮೆಯ ಔಟ್ಫಿಟ್ನ ವಿನ್ಯಾಸ ನನಗಂತೂ ಸಖತ್ ಇಷ್ಟವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಔಟ್ಫಿಟ್ ನನ್ನನ್ನು ಇರುವುದಕ್ಕಿಂತ ಮತ್ತಷ್ಟು ಸ್ಲಿಮ್ ಆಗಿ ಬಿಂಬಿಸಿದೆ. ಇನ್ನು, ಈ ಔಟ್ಫಿಟ್ಗೆ ನನ್ನ ಸ್ಟೈಲಿಂಗ್ ಕೂಡ ಸಖತ್ ಆಗಿದೆ. ಈ ಡ್ರೆಸ್ನ ವೈಬ್ರೆಂಟ್ ಕಲರ್ ಹಾಗೂ ಡಿಸೈನ್ ನನ್ನ ಪರ್ಸನಾಲಿಟಿಗೆ ಹೊಂದುವಂತಿದೆ. ನಾನು ಬ್ಯೂಟಿಫುಲ್ ಆಗಿ ಕಾಣಿಸುವಂತೆ ಮಾಡಿದ ಈ ರೇಷ್ಮೆಯ ಪ್ಯಾಂಟ್ ಸೂಟ್ ನನಗೆ ಇಷ್ಟವಾದ ಔಟ್ಗಳ ಲಿಸ್ಟ್ಗೆ ಸೇರಿದೆ. ಇನ್ನು, ಲಕ್ಷ್ಮಿಕೃಷ್ಣ ಅವರ ಡಿಸೈನ್ಗಳು ಸ್ಪೆಷಲ್ ಆಗಿ ಬಿಂಬಿಸುತ್ತದೆ. ಅವರ ಕ್ರಿಯೇಟಿವಿಟಿ ಔಟ್ಫಿಟ್ನಲ್ಲಿ ನೋಡಬಹುದು. ಹಾಗಾಗಿ ಎಲ್ಲಾ ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಎನ್ನುತ್ತಾರೆ ವಾಣಿ ಶ್ರೀ.

ರೇಷ್ಮೆಯ ಪ್ಯಾಂಟ್ ಸೂಟ್ ವಿಶೇಷತೆ
ಇಂಡೋ-ವೆಸ್ಟರ್ನ್ ಔಟ್ಫಿಟ್ ಲಿಸ್ಟ್ಗೆ ಸೇರುವ ವಾಣಿ ಶ್ರೀಯವರ ಈ ಔಟ್ಫಿಟ್ ಗ್ರಾಂಡ್ ಲುಕ್ ನೀಡುತ್ತದೆ. ರೇಷ್ಮೆಯ ಫ್ಯಾಬ್ರಿಕ್ನಿಂದ ಸಿದ್ಧಪಡಿಸಲಾದ ಈ ಕೋ ಆರ್ಡ್ ಸೆಟ್ನಂತೆ ಕಾಣಿಸುವ ಈ ಉಡುಪು ಎಂತಹವರ ಬಾಡಿ ಮಾಸ್ ಇಂಡೆಕ್ಸ್ಗೂ ಮ್ಯಾಚ್ ಆಗುತ್ತದೆ. ಅದು ಪಾರ್ಟಿಯಾಗಬಹುದು, ಸಾಮಾನ್ಯವಾದ ಫಂಕ್ಷನ್ ಆಗಬಹುದು. ಒಟ್ಟಾರೆ, ಇದಕ್ಕೆ ತಕ್ಕಂತೆ ಸ್ಟೈಲಿಂಗ್ ಮಾಡಿದಲ್ಲಿ ಪರ್ಫೆಕ್ಟ್ ಲುಕ್ ಧರಿಸಿದವರದ್ದಾಗುತ್ತದೆ. ಹಾಗಾಗಿ ನಟಿ ವಾಣಿ ಶ್ರೀಯವರು ಈ ಔಟ್ಫಿಟ್ನಲ್ಲಿ ಸಖತ್ತಾಗಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿಕೃಷ್ಣ.

ನಟಿ ವಾಣಿ ಶ್ರೀ ಧರಿಸಿದ್ದ ಬ್ರೋಕೆಡ್ ಪ್ರಿಂಟೆಡ್ ಪ್ಯಾಂಟ್ ಸೂಟ್ ಅವರನ್ನು ಅತ್ಯಾಕರ್ಷಕವಾಗಿಸಿದೆ.