Pro Pakistan Writing: ಶೌಚಾಲಯದ ಗೋಡೆಯಲ್ಲಿ ಪಾಕ್ ಪರ ಬರಹ; ಕಿಡಿಗೇಡಿಗಳಿಗಾಗಿ ತಲಾಶ್!
ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನಕ್ಕೆ ಜೈ , ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಗೋಡೆ ಬರಹ ಬರೆಯಲಾಗಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಯಾರೋ ಕಿಡಿಗೇಡಿಗಳು ಈ ಬರಹ ಬರೆದಿರುವ ಶಂಕೆ ವ್ಯಕ್ತವಾಗಿದೆ. ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಘಟನೆ ನಡೆದಿದೆ.


ರಾಮನಗರ : ಕಾರ್ಖಾನೆಯೊಂದರ ಶೌಚಾಲಯದ ಗೋಡೆಯ ಮೇಲೆ ಪಾಕಿಸ್ತಾನ ಪರ ಘೋಷಣೆಗಳನ್ನು(Pro Pakistan Writing) ಬರೆದಿರುವ ಘಟನೆ ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನಕ್ಕೆ ಜೈ , ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಗೋಡೆ ಬರಹ ಬರೆಯಲಾಗಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಯಾರೋ ಕಿಡಿಗೇಡಿಗಳು ಈ ಬರಹ ಬರೆದಿರುವ ಶಂಕೆ ವ್ಯಕ್ತವಾಗಿದೆ. ಇಂತಹ ಕೃತ್ಯ ಕಾರ್ಖಾನೆಯ ಉದ್ಯೋಗಿಗಳ ಮನಸ್ಸಿನಲ್ಲಿ ಅಶಾಂತಿಯನ್ನು ಸೃಷ್ಟಿಸುವುದಲ್ಲದೇ. ದೇಶದ್ರೋಹಿ ಅಪರಾಧವಾಗುತ್ತದೆ. ಅಂತಹ ಕಾರ್ಮಿಕರನ್ನು ಕಾನೂನು ಚೌಕಟ್ಟಿನಲ್ಲಿ ದೇಶದ್ರೋಹಿ ಎಂದು ಪೊಲೀಸರಿಗೆ ಒಪ್ಪಿಸಿ ಜೈಲು ಶಿಕ್ಷೆಯಾಗುವಂತೆ ಕ್ರಮ ವಹಿಸುತ್ತೇವೆ ಎಂದು ಕಾರ್ಖಾನೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗೆ ಹೈಕೋರ್ಟ್ ವಿಶಿಷ್ಟವಾದ ಶಿಕ್ಷೆಯನ್ನು ನೀಡಿತ್ತು. ಇನ್ನು ಮುಂದೆ ಆತನ ಬಾಯಲ್ಲಿ ತಿಂಗಳಲ್ಲಿ ಎರಡು ಕಂತಿನಂತೆ 42 ಬಾರಿ 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆ ಮೊಳಗುವಂತೆ ಮಾಡಿದೆ. ಆರೋಪಿ ಫೈಝಲ್ ಅಲಿಯಾಸ್ ಫೈಜಾನ್ ಎಂಬ ವ್ಯಕ್ತಿ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹದ ಕೃತ್ಯ ಎಸಗಿದ್ದ. ಈತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇದೀಗ ಆತ ಜಾಮೀನು ಕೋರಿ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಪಾಲಿವಾಲ್ ಅವರ ಪೀಠ, ಆರೋಪಿ ತಪ್ಪನ್ನು ಗುರುತಿಸಿದೆ. ಜೊತೆಗೆ, ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು ಪೊಲೀಸ್ ಠಾಣೆಗೆ ತೆರಳಿ, ರಾಷ್ಟ್ರಧ್ವಜಕ್ಕೆ ವಂದಿಸುವ ಶಿಕ್ಷೆ ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಈ ಸುದ್ದಿಯನ್ನೂ ಓದಿ: The Balochistan Story: ಪಾಕ್-ಬಲೂಚ್ ಬಿಕ್ಕಟ್ಟಿನ ಹಿಂದಿದೆ 174 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನದ ರಹಸ್ಯ!
ಆರೋಪಿ ಫೈಝಲ್ ಅಲಿಯಾಸ್ ಫೈಜಾನ್ 50 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಅನ್ನು ಟ್ರಯಲ್ ಕೋರ್ಟ್ಗೆ ಸೂಕ್ತ ಶ್ಯೂರಿಟಿ ಒದಗಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಇಷ್ಟೇ ಅಲ್ಲದೇ, ಫೈಸಲ್ ಭೋಪಾಲ್ ಪೊಲೀಸ್ ಠಾಣೆಗೆ ತಿಂಗಳಿಗೆ ಎರಡು ಬಾರಿ ಹಾಜರಾಗಿ ಅಲ್ಲಿನ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಬೇಕು ಹಾಗೂ 21 ಬಾರಿ 'ಭಾರತ್ ಮಾತಾ ಕಿ ಜೈ' ಘೋಷಣೆ ಕೂಗುವಂತೆ ಸೂಚಿಸಿದೆ.