Chikkaballapur News: ಕೈವಾರ ತಾತಯ್ಯ ಬರೆದಿರುವ ಕಾಲಜ್ಞಾನ ಎಂದೆಂದಿಗೂ ಅಜರಾಮರ: ತಹಸೀಲ್ದಾರ್ ಮಹೇಶ್ ಪತ್ರಿ
ಕೈವಾರ ಪುಣ್ಯಕ್ಷೇತ್ರ ನಾಲ್ಕು ಯುಗದಲ್ಲಿ ಖ್ಯಾತಿ ಪಡೆದಿದೆ. ರಾಮಾಯಣದಲ್ಲಿ ರಾಮ ಸೀತೆ ಲಕ್ಷ್ಮಣ ಬಂದು ಇಲ್ಲಿ ನೆಲಸಿರುವ ಪುರಾವೆ ನಾವು ಕಾಣಬಹುದು. ಹಾಗೆ ಮಹಾಭಾರತದಲ್ಲಿ ಪಾಂಡವರು ಇಲ್ಲಿ ಬಂದು ನೆಲೆಸಿದ್ದರು. ಆಗ ಇಲ್ಲಿ ಬಕಾಸುರ ಎಂಬ ರಾಕ್ಷಸ ನೆಲಸಿದ್ದ ಅವ ನನ್ನು ಭೀಮ ವಧೆ ಮಾಡಿರುವುದು ನಾವು ಕಾಣಬಹುದು

ಗೌರಿಬಿದನೂರಿನಲ್ಲಿ ನಡೆದ ತಾತಯ್ಯ ಜಯಂತಿಯಲ್ಲಿ ತಹಶೀಲ್ದಾರ್ ಮಹೇಶ್ ಪತ್ರಿ ಮಾತನಾಡಿದರು.

ಗೌರಿಬಿದನೂರು: ಕೈವಾರ ತಾತಯ್ಯನವರ ಬರೆದಿರುವ ಕಾಲಜ್ಞಾನ ಪ್ರಕಾರ, ಎಲ್ಲ ರೀತಿ ಯ ಪವಾಡಗಳು ನಡೆಯುತ್ತಿವೆ,ಈ ನಿಟ್ಟಿನಲ್ಲಿ ತಾತಯ್ಯನವರು ದೈವ ಪುರುಷ ಎಂದು ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ತಹಶೀಲ್ದಾರ್ ಮಹೇಶ್ ಪತ್ರಿ ತಿಳಿಸಿದರು. ನಗರದ ಹೊರವಲಯದಲ್ಲಿರುವ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ಯತಿಂದ್ರ ಯೋಗಿನಾರಾಯಣ ತಾತಯ್ಯನವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಕೈವಾರ ಪುಣ್ಯಕ್ಷೇತ್ರ ನಾಲ್ಕು ಯುಗದಲ್ಲಿ ಖ್ಯಾತಿ ಪಡೆದಿದೆ. ರಾಮಾಯಣದಲ್ಲಿ ರಾಮ ಸೀತೆ ಲಕ್ಷ್ಮಣ ಬಂದು ಇಲ್ಲಿ ನೆಲಸಿರುವ ಪುರಾವೆ ನಾವು ಕಾಣಬಹುದು. ಹಾಗೆ ಮಹಾಭಾರತದಲ್ಲಿ ಪಾಂಡವರು ಇಲ್ಲಿ ಬಂದು ನೆಲೆಸಿದ್ದರು. ಆಗ ಇಲ್ಲಿ ಬಕಾಸುರ ಎಂಬ ರಾಕ್ಷಸ ನೆಲಸಿದ್ದ ಅವನನ್ನು ಭೀಮ ವಧೆ ಮಾಡಿರುವುದು ನಾವು ಕಾಣಬಹುದು. ಇಂತಹ ಕ್ಷೇತ್ರದಲ್ಲಿ ತಾತ ಯ್ಯನವರು ಜನಿಸಿದ್ದರು. ಇವರು ಮೂಲತಃ ಬಳೆಗಾರ ವ್ಯಾಪಾರ ಮಾಡಿಕೊಂಡಿದ್ದರು. ಸಂಸಾರದಲ್ಲಿ ವಿರಕ್ತಿಗೊಂಡು ಇವರು ಸನ್ಯಾಸತ್ವವನ್ನು ಸ್ವೀಕರಿಸಿದರು. ಶ್ರೀಮನ್ನಾ ರಾಯಣ ಅವರ ಕೃಪೆಯಿಂದ ಕಾಲಜ್ಞಾನ ಬರೆದರು ಎಂದರು.
ಇದನ್ನೂ ಓದಿ: ISIS Chief Assassination: ಇರಾಕ್, ಅಮೆರಿಕದಿಂದ ಜಂಟಿ ವೈಮಾನಿಕ ದಾಳಿ ; ISIS ನಾಯಕ ಅಬು ಖದೀಜಾ ಹತ್ಯೆ
ಜೊತೆಗೆ ಅನೇಕ ಪವಾಡಗಳನ್ನು ಮಾಡಿ ಜನರಿಗೆ ಧಾರ್ಮಿಕ ದಾರಿ ತೋರಿಸಿದರು. ಇವರು ಭಜನೆಗಳ ಮುಖಂತರ ಖ್ಯಾತಿಗೊಂಡರು. ಇವರು ರಚಿಸಿರುವ ಕಾಲಜ್ಞಾನದಲ್ಲಿ ಘಟಿಸ ಲಿರುವ ಬರಗಾಲ, ರೋಗ ರುಜಿನಗಳು, ಪ್ರವಾಹಗಳ ಪರಿಣಾಮಗಳನ್ನು ಉಲ್ಲೇಖಿಸಿ ತಮ್ಮ ಕಾಲಜ್ಞಾನದಲ್ಲಿ ವಿವರವಾಗಿ ತಿಳಿಸಿದ್ದಾರೆ. ಇವರು ಹೇಳಿರುವಂತೆ ಭಕ್ತಿ ಮಾರ್ಗಗಳ ಮೂಲಕ ಸಾಗಿದರೆ ಜೀವನ ಸಾರ್ಥಕವಾಗಲಿದೆ ಎಂದರು.
ಮುಖ್ಯ ಭಾಷಣಕಾರ ವೆಂಕಟೇಶ್ ಮಾತನಾಡಿ ತಾತಯ್ಯನವರು ಮೂಲತಃ ಬಳೆ ವ್ಯಾಪಾರ ಮಾಡುವ ಕುಟುಂಬದವರು. ಇವರು ಬಹಳ ಮೃದು ಸ್ವಭಾವದವರು ಅಗಿದ್ದರು. ವ್ಯಾಪಾರ ದಲ್ಲಿ ಕಠಿಣವಾಗಿರದೆ ಎಲ್ಲರಿಗೂ ಸಾಲ ನೀಡಿದರು. ಅದು ನಷ್ಟ ಅಗಿ ಅವರು ಮನೆಯಲ್ಲಿ ನಿಂದೆನೆಗೆ ಒಳಗಾದವರು. ಕೊನೆಗೆ ಅವರು ಸನ್ಯಾಸತ್ವಸ ಸ್ವೀಕರಿಸಿ ಸಂಸಾರ ಒಂದು ಕಷ್ಟದ ದಾರಿ ಎಂದು ಸಾರಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಸ್ವಾಮಿಜೀ ಮಾರುತಿ ಸ್ವಾಮಿ,ಮಾಜಿ ಅಧ್ಯಕ್ಷೆ ರೂಪಾ ಅನಂತರಾಮ್,ಮುಖAಡರಾದ ಜಿಎಲ್,ಆಶ್ವಥನಾರಾಯಣ, ನಗರಸಭೆ ಸದಸ್ಯರಾದ ಮಾರ್ಕೆಟ್ ಮೋಹನ್, ರಾಜಕುಮಾರ್,ಪದ್ಮಾವತಿ ಹಿರಿಯ ಸದಸ್ಯ ವಿ,ರಮೇಶ್, ಎಚ್, ವಿ.ವೆಂಕಟೇಶ್, ಅನಿಲ್ ನದಿಗಡ್ಡೆ ಪರಮೇಶ್, ಮಾಳಪ್ಪ ಮುಂತಾದವರು ಹಾಜರಿದ್ದರು.