ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಮುಖಂಡರು, ಸಂಘಟನೆಗಳಿಂದ ಶಾಸಕರಿಗೆ ಅಭಿನಂದನೆಗಳ ಮಹಾಪೂರ

ಮೊದಲಿಗೆ ಪಾತಪಾಳ್ಯ ಹೋಬಳಿಯ ಮುಖಂಡರು, ರೈತರು ಶಾಸಕರನ್ನು ಸನ್ಮಾನಿಸಿ ಗಂಟ್ಲ ಮಲ್ಲಮ್ಮ ಕಣಿವೆಯಲ್ಲಿ 189 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

189 ಕೋಟಿ ಗಂಟ್ಲಮಲ್ಲಮ್ಮ ಡ್ಯಾಂ, ಭಾಗ್ಯನಗರ ಘೋಷಣೆ ಹಿನ್ನಲೆ

Profile Ashok Nayak Jul 6, 2025 10:09 PM

ಬಾಗೇಪಲ್ಲಿ: ತಾಲ್ಲೂಕಿನ ಪಾತಪಾಳ್ಯ ಸಮೀಪದ ಗಂಟ್ಲಮಲ್ಲಮ್ಮ ಕಣಿವೆ ಬಳಿ 189 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಿರುವ ಬೃಹತ್ ನೀರಾವರಿ ಯೋಜನೆ ‘ಗಂಟ್ಲಮಲ್ಲಮ್ಮ ಡ್ಯಾಂ’ ಮಂಜೂರು ಮಾಡಿಸಿದ್ದೇ ಅಲ್ಲದೆ ಬಾಗೇಪಲ್ಲಿ ಹೆಸರನ್ನು ‘ಭಾಗ್ಯನಗರ’ವನ್ನಾಗಿ ಬದಲಾ ಯಿಸಲು ಶ್ರಮಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರನ್ನು ವಿವಿದ ಸಂಘಟನೆಗಳ ಪದಾಧಿ ಕಾರಿಗಳು, ಮುಖಂಡರು, ರೈತರು, ಕನ್ನಡಪರ ಸಂಘಟನೆಗಳ ಮುಖಂಡರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತು.

ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಬೃಹತ್ ಯೋಜನೆಗಳನ್ನು ಮಂಜೂರು ಮಾಡಿಸಿದ ನಂತರ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಗೃಹ ಕಚೇರಿಗೆ ಆಗಮಿಸಿ ಶಾಸಕರಿಗೆ ಹಾರಗಳನ್ನು ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು. 

ಮೊದಲಿಗೆ ಪಾತಪಾಳ್ಯ ಹೋಬಳಿಯ ಮುಖಂಡರು, ರೈತರು ಶಾಸಕರನ್ನು ಸನ್ಮಾನಿಸಿ ಗಂಟ್ಲ ಮಲ್ಲಮ್ಮ ಕಣಿವೆಯಲ್ಲಿ 189 ಕೋಟಿ ರೂಗಳ ವೆಚ್ಚದಲ್ಲಿ ಡ್ಯಾಂ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಇದನ್ನೂ ಓದಿ: Chikkaballapur News: ರಾಜ್ಯ ವ್ಯಾಪ್ತಿ ಜು.9ರಂದು ಬಿಸಿಯೂಟ ನೌಕರರು ತಮ್ಮ ಕೆಲಸಗಳ ಬಂದ್‌ ಮಾಡಿ, ಮುಷ್ಕರ

ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ ಮತ್ತು ಪದಾಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್.ಹರೀಶ್ ಮತ್ತು ಪದಾಧಿಕಾರಿಗಳು, ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಬಿಟಿಸಿ ಶ್ರೀನಿವಾಸ್ ಮತ್ತು ಪದಾಧಿಕಾರಿಗಳು, ಕೆಡಿಪಿ ಸದಸ್ಯರು, ಪುರಸಭೆ ಸದಸ್ಯರು, ರೈತ ಮುಖಂಡರು, ವಿವಿದ ಸಂಘಟನೆಗಳ ಮುಖಂಡರು ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆಡಿಪಿ ಸದಸ್ಯ ಹಾಗು ರೈತ ಮುಖಂಡ ಪಿ.ಮಂಜುನಾಥ ರೆಡ್ಡಿಯವರು, ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ನಿರಂತರ ಪ್ರಯತ್ನ ಹಾಗು ಶ್ರಮದ ಫಲವಾಗಿ 189 ಕೋಟಿ ವೆಚ್ಚದ ಗಂಟ್ಲಮಲ್ಲಮ್ಮ ಡ್ಯಾಂ ಮಂಜೂರಾಗಿದ್ದು ಇದು ವಿಶೇಷವಾಗಿ ಪಾತಪಾಳ್ಯ, ಚೇಳೂರು, ಗೂಳೂರು, ಕಸಬಾ ಮತ್ತು ಮಿಟ್ಟೇಮರಿ ಹೋಬಳಿಗಳ ಪ್ರಗತಿಯ ಚಿತ್ರಣವನ್ನೇ ಬದಲಾಯಿಸಲಿದೆ. ಇದೊಂದು ಐತಿಹಾಸಿಕ ದೊಡ್ಡ ಸಾಧನೆಯಾಗಿದ್ದು ಇಡೀ ಕ್ಷೇತ್ರದ ಜನತೆಯಷ್ಠೆ ಅಲ್ಲ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮುಖಂಡರು ಭಾಗ್ಯನಗರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಸಾಧನೆಯನ್ನು ಶ್ಲಾಘಿಸುತ್ತಿದ್ದಾರೆ.

ರೈತಪರವಾದ ಹೆಜ್ಜೆಯಿಂದಾಗಿ ರೈತರ ಮುಖದಲ್ಲಿ ನಗು ಮೂಡುವಂತಾಗಿದೆ. ಸಾರ್ವಜನಿಕ ಆಸ್ಪತ್ರೆಗೆ 16.25 ಕೋಟಿಗಳನ್ನು ಮಂಜೂರು ಮಾಡಿಸಿದ್ದು ಹೈಟೆಕ್ ಆಸ್ಪತ್ರೆ ನಿರ್ಮಾಣವಾಗಲಿದ್ದು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಕಾರಣವಾಗಲಿದೆ. ಚೇಳೂರಿಗೂ ಸಮುದಾಯ ಆರೋಗ್ಯ ಕೇಂದ್ರ ವನ್ನು ಮಂಜೂರು ಮಾಡಿಸಿದ್ದು ನೂತನ ತಾಲ್ಲೂಕಿನ ಜನತೆಗೆ ವರದಾನವಾಗಲಿದೆ.

ಸುಮಾರು 42 ಕೋಟಿ ವೆಚ್ಚದಲ್ಲಿ ಜಿಲ್ಲೆಗೊಂದರಂತೆ ನಿರ್ಮಿಸಲಿದ್ದೇಶಿಸಿರುವ ಕಾರ್ಮಿಕರ ಮಕ್ಕಳ ವಸತಿ ಶಾಲೆಯನ್ನು ಭಾಗ್ಯನಗರ ತಾಲ್ಲೂಕಿಗೆ ಮಂಜೂರು ಮಾಡಿಸಿರುವುದು ಶ್ಲಾಘನೀಯವಾಗಿದೆ. ಮತ್ತೂ ವಿಶೇಷವೆಂದರೆ ಹಲವು ದಶಕಗಳ ಭಾಗ್ಯನಗರದ ಬೇಡಿಕೆಯನ್ನು ಶಾಸಕರು ಈಡೇರಿಸಿರು ವುದು ಸಂಭ್ರಮಪಡುವುದಕ್ಕೆ ಕಾರಣವಾಗಿದೆ. ಬಾಗೇಪಲ್ಲಿ ಹೆಸರನ್ನು ಭಾಗ್ಯನಗರವನ್ನಾಗಿ ಬದಲಾಯಿಸಿರುವುದು ಇಡೀ ರಾಜ್ಯದ ಗಮನವನ್ನು ಸೆಳೆಯುವಂತಾಗಿದ್ದು ಕನ್ನಡದ ಮನಸ್ಸು ಗಳಿಗೆ ತಂಪು ತಂದಿದೆ. ಇನ್ನು ಹೆಚ್ಚಿನ ಸಾಧನೆ ಶಾಸಕರಿಂದ ಬರಲಿದೆ ಎಂದರು.

ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಜಿ. ರಾಮಕೃಷ್ಣ ಹೆಗಡೆ, ಸಿ.ಎನ್.ರಾಮರೆಡ್ಡಿ ವೆಂಕಟರಾಮ್ ರೆಡ್ಡಿ, ಗೋಪಾ¯ರೆಡ್ಡಿ, ಮುರಳಿ, ಗುಜ್ಜೇಪಲ್ಲಿ ಬೈರೆಡ್ಡಿ, ವೆಂಕಟಸುಬ್ಬಾರೆಡ್ಡಿ, ಜಬೀವುಲ್ಲಾ, ಡಿ.ಎನ್.ಶಿವರಾಮರೆಡ್ಡಿ, ಜಿ.ಎಂ.ರಾಮಕೃಷ್ಣಪ್ಪ, ಇನ್ನು ಮುಂತಾದವರು ಇದ್ದರು.