ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ISIS Chief Assassination: ಇರಾಕ್‌, ಅಮೆರಿಕದಿಂದ ಜಂಟಿ ವೈಮಾನಿಕ ದಾಳಿ ; ISIS ನಾಯಕ ಅಬು ಖದೀಜಾ ಹತ್ಯೆ

ಇರಾಕಿನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಐಸಿಸ್‌ ಭಯೋತ್ಪಾದನೆಯ ಪ್ರಮುಖ ನಾಯಕನಾಗಿದ್ದ ಅಬು ಖದೀಜಾನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಮೆರಿಕ ಭದ್ರತಾ ಪಡೆಗಳ ಸಹಕಾರದೊಂದಿಗೆ ಇರಾಕ್‌ನ ಭದ್ರತಾ ಪಡೆಗಳು ಅಬು ಖದೀಜಾನನ್ನು ಹೊಡೆದುರುಳಿಸಿದ್ದಾರೆ.

ಇರಾಕ್‌, ಸಿರಿಯಾದ  ISIS ನಾಯಕ ಅಬು ಖದೀಜಾ ಹತ್ಯೆ

ಸಾಂದರ್ಭಿಕ ಚಿತ್ರ

Profile Vishakha Bhat Mar 15, 2025 12:52 PM

ಬಾದ್‌ದಾದ್‌ : ಇರಾಕಿನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಐಸಿಸ್‌ ಭಯೋತ್ಪಾದನೆಯ ಪ್ರಮುಖ ನಾಯಕನಾಗಿದ್ದ ಅಬು ಖದೀಜಾನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಮೆರಿಕ ಭದ್ರತಾ ಪಡೆಗಳ ಸಹಕಾರದೊಂದಿಗೆ ಇರಾಕ್‌ನ ಭದ್ರತಾ ಪಡೆಗಳು ಅಬು ಖದೀಜಾನನ್ನು (ISIS Chief Assassination) ಹೊಡೆದುರುಳಿಸಿದ್ದಾರೆ. ಭದ್ರತಾ ಪಡೆಗಳ ಕಾರ್ಯಾಚರಣೆ ಬಗ್ಗೆ ಇರಕ್‌ನ ಪ್ರಧಾನಿ ಮೊಹಮದ್‌ ಶಿಯಾ ಅಲ್‌ ಸುಡಾನಿ ಶುಕ್ರವಾರ ತಿಳಿಸಿದ್ದಾರೆ. ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ ಹಾಗೂ ಜಾಗತಿಕವಾಗಿ ಗುಂಪಿನ ಎರಡನೇ ಕಮಾಂಡರ್ ಎಂದು ಗುರುತಿಸಿಕೊಂಡಿದ್ದ.

ಅಮೆರಿಕದ ಮಿಲಿಟರಿ ಅಧಿಕಾರಿಗಳ ಪ್ರಕಾರ, ಅಬು ಖದೀಜಾ ವಿಶ್ವಾದ್ಯಂತ ಭಯೋತ್ಪಾದಕ ಗುಂಪಿನ ಲಾಜಿಸ್ಟಿಕ್ಸ್, ಯೋಜನೆ ಮತ್ತು ಹಣಕಾಸು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಮಾರ್ಚ್ 13 ರಂದು ನಡೆದ ಈ ದಾಳಿಯಲ್ಲಿ ಮತ್ತೊಬ್ಬ ಐಸಿಸ್ ಕಾರ್ಯಕರ್ತ ಕೂಡ ಹತನಾಗಿದ್ದಾನೆ ಎಂದು ತಿಳಿದು ಬಂದಿದೆ. ವೈಮಾನಿಕ ದಾಳಿಯ ನಂತರ, ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮತ್ತು ಇರಾಕ್‌ನ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ ಅಬು ಖದೀಜಾ ಮತ್ತು ಇನ್ನೊಬ್ಬ ಉಗ್ರನ ಸಾವಿನ ಬಗ್ಗೆ ಖಚಿತಗೊಳಿಸಿವೆ. CENTCOM ಹೇಳಿಕೆಯ ಪ್ರಕಾರ ಇಬ್ಬರೂ ಉಗ್ರರು ಆತ್ಮಾಹುತಿ ದಾಳಿಗೆ ಬಳಸುವ ಜಾಕೆಟ್‌ ಅನ್ನು ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ ಹಾಗೂ ಅವರ ಬಳಿ ಸಾಕಷ್ಟು ಶಸ್ತ್ರಾಸ್ತ್ರಗಳು ಇರುವುದು ಪತ್ತೆಯಾಗಿದೆ. ಅಬು ಖದೀಜಾನ ಗುರುತನ್ನು ಡಿಎನ್‌ಎ ಹೊಂದಾಣಿಕೆಯ ಮೂಲಕ ದೃಢಪಡಿಸಲಾಯಿತು ಎಂದು ಸೇನೆ ತಿಳಿಸಿದೆ.



ಅಬು ಖದೀಜಾ ಇಡೀ ಜಾಗತಿಕ ಐಸಿಸ್ ಸಂಘಟನೆಯಲ್ಲಿ ಪ್ರಮುಖ ಸದಸ್ಯನಾಗಿ ಗುರುತಿಸಿಕೊಂಡಿದ್ದ. ಈ ಕಾರ್ಯಾಚರಣೆಯ ಬಗ್ಗೆ ಇರಕ್‌ನ ಪ್ರಧಾನಿ ಮೊಹಮದ್‌ ಶಿಯಾ ಅಲ್‌ ಸುಡಾನಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಬು ಖದೀಜಾನನ್ನು ಇರಾಕ್ ಮತ್ತು ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕರಲ್ಲಿ ಒಬ್ಬ ಎಂದು ಅವರು ಹೇಳಿದ್ದಾರೆ. ಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅಲ್-ಸುಡಾನಿ, ಅಮೆರಿಕ ನೇತೃತ್ವದ ಭದ್ರತಾ ಪಡೆಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Syria Conflict : ಸಿರಿಯಾದಲ್ಲಿ ಭೀಕರ ಸಂಘರ್ಷ : 2 ದಿನದಲ್ಲಿ 1,000 ಕ್ಕೂ ಅಧಿಕ ಮಂದಿ ಸಾವು

2023 ರಲ್ಲಿ ಅಮೆರಿಕವು ಅಬು ಖದೀಜಾ ಮೇಲೆ ನಿರ್ಬಂಧ ಹೇರಿತ್ತು. ಆತನನ್ನು ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ನಿಯಂತ್ರಿತ ಪ್ರದೇಶಗಳ ಗವರ್ನರ್ ಎಂದು ಗುರುತಿಸಿತ್ತು. ಅಬು ಖದೀಜಾ ಹತ್ಯೆ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಶಿಯಲ್ ಮೀಡಿಯಾದಲ್ಲಿ ಇರಾಕ್‌ನಲ್ಲಿ ಅವಿತಿದ್ದ ಐಸಿಸ್ ನಾಯಕನನ್ನು ಕೊಲ್ಲಲಾಯಿತು. ನಮ್ಮ ನಿರ್ಭೀತ ಯೋಧರು ಆತನ ಹತ್ಯೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.