ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Educational Fair: ಏ. 12, 13ರಂದು ಪುತ್ತೂರಿನಲ್ಲಿ ಶೈಕ್ಷಣಿಕ ಮೇಳ 2025

Educational Fair: ಪುತ್ತೂರಿನ ಸುದಾನ ರೆಸಿಡೆನ್ಶಿಯಲ್‌ ಸ್ಕೂಲ್‌ನ ಎಡ್ವರ್ಡ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಏಪ್ರಿಲ್‌ 12 ಮತ್ತು 13 ರಂದು ಎರಡು ದಿನಗಳ ಕಾಲ ʼಶೈಕ್ಷಣಿಕ ಮೇಳ 2025ʼ ಆಯೋಜಿಸಲಾಗಿದೆ. ಈ ಶೈಕ್ಷಣಿಕ ಮೇಳ 2025 ಕ್ಕೆ ಉಚಿತ ಪ್ರವೇಶವಿದ್ದು, ನೋಂದಣಿಗೆ ಏ.10 ಕೊನೆಯ ದಿನಾಂಕವಾಗಿದೆ. ಈ ಕುರಿತ ವಿವರ ಇಲ್ಲಿದೆ.

ಏ.12, 13ರಂದು ಪುತ್ತೂರಿನಲ್ಲಿ ಶೈಕ್ಷಣಿಕ ಮೇಳ 2025

ಸಾಂದರ್ಭಿಕ ಚಿತ್ರ.

Profile Siddalinga Swamy Mar 12, 2025 10:28 PM

ಪುತ್ತೂರು: ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ, ಸುದ್ದಿ ಮಾಹಿತಿ ಟ್ರಸ್ಟ್‌, ಎ.ವಿ.ಜಿ. ಎಜುಕೇಶನ್‌ ಆ್ಯಂಡ್‌ ಚಾರಿಟಬಲ್‌ ಟ್ರಸ್ಟ್‌ ಪುತ್ತೂರು ಹಾಗೂ ಸುದಾನ ರೆಸಿಡೆನ್ಶಿಯಲ್‌ ಸ್ಕೂಲ್‌ನ ಸಹಯೋಗದಲ್ಲಿ ಏಪ್ರಿಲ್‌ 12, 13ರಂದು 2 ದಿನಗಳ ಕಾಲ ಪುತ್ತೂರಿನ ಸುದಾನ ರೆಸಿಡೆನ್ಶಿಯಲ್‌ ಸ್ಕೂಲ್‌ನ ಎಡ್ವರ್ಡ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ʼಶೈಕ್ಷಣಿಕ ಮೇಳ 2025ʼ (Educational Fair) ಏರ್ಪಡಿಸಲಾಗಿದೆ. ಈ ಶೈಕ್ಷಣಿಕ ಮೇಳ 2025ಕ್ಕೆ ಉಚಿತ ಪ್ರವೇಶವಿದ್ದು, ನೋಂದಣಿಗೆ ಏ. 10 ಕೊನೆಯ ದಿನಾಂಕ. ಈ ಶೈಕ್ಷಣಿಕ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಮುಂದೇನು?, ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು?, ಬಹುವೃತ್ತಿ ಜೀವನದ ವಿಷಯಗಳ ಕುರಿತು ಮಾರ್ಗದರ್ಶನ, ನುರಿತ ತಜ್ಞರಿಂದ ಮಕ್ಕಳಿಗೆ, ಪೋಷಕರಿಗೆ ಕೌನ್ಸಿಲಿಂಗ್‌, ಸಿಇಟಿ, ನೀಟ್‌ ಪರೀಕ್ಷೆ ತಯಾರಿ ಹೇಗೆ? ಎಂಬ ವಿಷಯಗಳ ಬಗ್ಗೆ ಪರಿಣಿತರಿಂದ 2 ದಿನಗಳ ಕಾಲ ಉಚಿತ ಮಾರ್ಗದರ್ಶನ ನೀಡಲಾಗುತ್ತದೆ.

Puttur News

ಶೈಕ್ಷಣಿಕ ಮೇಳದಲ್ಲಿ 50ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿದ್ದು, ಪ್ರಮುಖವಾಗಿ ಪರಿಶ್ರಮ ನೀಟ್ ಅಕಾಡೆಮಿ, ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್, ಯೂನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್, KVG ಎಜುಕೇಶನ್ ಇನ್‌ಸ್ಟಿಟ್ಯೂಟ್, GTDC, ಪ್ಯಾರಮೌಂಟ್ ಗ್ಲೋಬಲ್ ಎಜುಕೇಶನ್, ಮಣಿಪಾಲ ಗ್ಲೋಬಲ್ ಎಜುಕೇಶನ್ ಹಾಗೂ ಮತ್ತಿತರ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 8197130607, 6364570737 ಗೆ ಸಂಪರ್ಕಿಸಬಹುದಾಗಿದೆ ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | SSLC Exam Preparation Tips: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಈ ಟಿಪ್ಸ್‌ ಫಾಲೋ ಮಾಡಿ