#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ದ್ವೇಷ ಬಿಟ್ಟು ಪಕ್ಷ ಕಟ್ಟಿದರೆ ಉನ್ನತ ಸ್ಥಾನ ದೊರೆಯಲಿದೆ: ಡಾ ಕೆ.ಸುಧಾಕರ್ ಕಿವಿ ಹಿಂಡಿದ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು

ಡಾ ಕೆ.ಸುಧಾಕರ್ ಬಿಜೆಪಿಗೆ ಬಂದ ನಂತರ ವೈಯಕ್ತಿಕವಾಗಿ ಅವರು ಬೆಳವಣಿಗೆ ಆಗಿದ್ದಾರೆಯೇ ವಿನಃ ಪಕ್ಷದ ಬೆಳವಣಿಗೆ ಆಗಿಲ್ಲ.ನಿಜ ಹೇಳಬೇಕೆಂದರೆ ಅವರು ಯಾರ ಬೆಳವಣಿಗೆಯನ್ನು ಕೂಡ ಸಹಿಸೋ ದಿಲ್ಲ.ಸಂದೀಪ್‌ರೆಡ್ಡಿಯಿAದ ಬಿಜೆಪಿ ಬೆಳವಣಿಗೆ ಸಾಧ್ಯವಿಲ್ಲ ಎನ್ನುವ ನಿನ್ನಿಂದ ಯಾರು ಕೂಡ ಪಾಠ ಕಲಿಯಬೇಕಿಲ್ಲ ಎಂದು ಖಾರವಾಗಿಯೆ ಟಾಂಗ್ ನೀಡಿದರು

ಪಕ್ಷದ ಆಯ್ಕೆ ಗೌರವಿಸಿ : ಸಂದೀಪ್‌ರೆಡ್ಡಿಗೆ ಆಶೀರ್ವದಿಸಿ

ಚಿಕ್ಕಬಳ್ಳಾಪುರ ನಗರದ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿದರು

Profile Ashok Nayak Feb 1, 2025 3:20 PM

ಚಿಕ್ಕಬಳ್ಳಾಪುರ : ಪಕ್ಷದ ಆಯ್ಕೆಯನ್ನು ಗೌರವಿಸಿ ಯುವಶಕ್ತಿಯ ಪ್ರತಿರೂಪ ಸಂದೀಪ್‌ರೆಡ್ಡಿ ಅವರನ್ನು ಆಶೀರ್ವದಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿ. ಜಿಲ್ಲಾ ಕೇಂದ್ರ ದಲ್ಲಿಯೇ ಪಕ್ಷಕ್ಕೆ ಸುಸಜ್ಜಿತ ಕಟ್ಟಡವಿಲ್ಲ.ಕಾಂಗ್ರೆಸ್ ವಿರುದ್ಧ ಸಮರ ಸಾರುವ ಹೊತ್ತಿನಲ್ಲಿ ಪಕ್ಷದ ವಿರುದ್ಧ ಯುದ್ಧ ಸರಿಯಲ್ಲ. ಇನ್ನಾದರೂ ಸರಿಯೇ ಧ್ವೇಷ ಬಿಟ್ಟು ಪಕ್ಷದ ಬಲವರ್ಧನೆಗೆ ಶ್ರಮಿಸಿ ದರೆ ಭವಿಷ್ಯದಲ್ಲಿ ಇನ್ನೂ ಉತ್ತಮ ಅವಕಾಶಗಳು ನಿಮಗಿರಲಿವೆ ಎಂದು ಸಂಸದ ಡಾ.ಕೆ.ಸುಧಾಕರ್ ಅವರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಕಿವಿ ಹಿಂಡಿದರು.

ನಗರದ ವಾಪಸಂದ್ರದಲ್ಲಿರುವ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ನಡೆಸಿದ ಸುದ್ದಿ ಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Chikkaballapur News: 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ: ಯಮನ ವೇಷಧಾರಿ ಮೂಲಕ ಜಾಗೃತಿ

ಡಾ ಕೆ.ಸುಧಾಕರ್ ಬಿಜೆಪಿಗೆ ಬಂದ ನಂತರ ವೈಯಕ್ತಿಕವಾಗಿ ಅವರು ಬೆಳವಣಿಗೆ ಆಗಿದ್ದಾರೆಯೇ ವಿನಃ ಪಕ್ಷದ ಬೆಳವಣಿಗೆ ಆಗಿಲ್ಲ.ನಿಜ ಹೇಳಬೇಕೆಂದರೆ ಅವರು ಯಾರ ಬೆಳವಣಿಗೆಯನ್ನು ಕೂಡ ಸಹಿಸೋ ದಿಲ್ಲ.ಸಂದೀಪ್‌ರೆಡ್ಡಿಯಿAದ ಬಿಜೆಪಿ ಬೆಳವಣಿಗೆ ಸಾಧ್ಯವಿಲ್ಲ ಎನ್ನುವ ನಿನ್ನಿಂದ ಯಾರು ಕೂಡ ಪಾಠ ಕಲಿಯಬೇಕಿಲ್ಲ ಎಂದು ಖಾರವಾಗಿಯೆ ಟಾಂಗ್ ನೀಡಿದರು.

ನಾನು  ಬಿಜೆಪಿ ಅಭ್ಯರ್ಥಿಯಾಗುವುದಕ್ಕೂ ಮೊದಲು ನಿಮ್ಮ ಮನೆಗೆ ಭೇಟಿ ನೀಡಿ ನಿಮ್ಮ ಆಶೀ ರ್ವಾದ ಪಡೆಯುವಾಗ ಬೆಂಬಲಿಸುವ ಬದಲು ಅಲ್ಲಿ ನಾಲ್ಕೆöÊದು ಸಾವಿರ ಓಟ್ ಇಲ್ಲ. ಅಂತಹ ಕಡೆ ಹೋಗಿ ಯಾಕೆ ಹಣ ಕಳೆದುಕೊಳ್ಳುತ್ತೀಯಾ ಎಂದು ನಿರಾಸೆಯ ಮಾತುಗಳನ್ನಾಡಿದ ಮಹಾನ್ ನಾಯಕ ನೀವು.ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಸೌಜನ್ಯಕ್ಕೂ ಬಂದು ಪ್ರಚಾರ ಮಾಡಲಿಲ್ಲ. ನಿಮ್ಮ ಕಾಲಿಗೆ ಬಿದ್ದಷ್ಟು ನನ್ನ ತಂದೆತಾಯಿ ಕಾಲಿಗೂ ಬಿದ್ದಿಲ್ಲ. ಜೆ.ಪಿನಡ್ಡಾ ಬಂದು ಪ್ರಚಾರ ಮಾಡಿದರೂ ನೀವು ಬರಲಿಲ್ಲ,ಆದರೂ 65 ಸಾವಿರ ಓಟು ಪಡೆದು ಕೂದಲೆಳೆ ಅಂತರದಲ್ಲಿ ಸೋತಿದ್ದೇನೆ ಎಂದು ಕಿಡಿ ಕಾರಿದರು.

ನಾನು ಬಾಗೇಪಲ್ಲಿ ಆಕಾಂಕ್ಷಿಯಾಗಿದ್ದರೂ ಜೆಡಿಎಸ್‌ನಲ್ಲಿದ್ದ ಕೋನಪ್ಪರೆಡ್ಡಿಯನ್ನು ಕರೆತಂದು ನಿಮ್ಮ ಬಾಲ ಅಲ್ಲಾಡಿಸಿದಿರಿ. ಇದೆಲ್ಲವೂ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೂ ಗೊತ್ತು. ನೀವು ಜೆ.ಪಿ ನಡ್ಡಾಗೆ ಮೆಸೇಜ್ ಮಾಡಿದಾಕ್ಷಣ ಅವರು ನಿಮಗೆ ರೆಸ್ಪಾನ್ಸ್ ಮಾಡ್ತಾರೆ ಅಂದ್ರಲ್ಲಾ. ನಿಮ್ಮ ಎಲ್ಲ ಬಂಡವಾಳ ಅವರಿಗೂ ಗೊತ್ತು ಎಂದು ಸುಧಾಕರ್‌ಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಿಂದ ಸೀಕಲ್ ರಾಮಚಂದ್ರಗೌಡ,ತಳಗವಾರ ಗೋಪಾಲ್ ಹಾಗೂ ಸಂದೀಪರೆಡ್ಡಿ ಹೆಸರು ಮಾತ್ರ ಹೈ ಕಮಾಂಡ್‌ಗೆ ಕಳುಹಿಸಲಾಗಿತ್ತು. ಆದರೆ ಕೊನೇ ಗಳಿಗೆಯಲ್ಲಿ ಮರಳುಕುಂಟೆ ಕೃಷ್ಣಮೂರ್ತಿ ಹೆಸರು ಸೇರಿಸಿದರು.ಇವರಲ್ಲಿ ಪಕ್ಷ ಯಾರಿಗೇ ಜವಾಬ್ದಾರಿ ನೀಡಿ ದರೂ ನಾವು ಅದಕ್ಕೆ ಬದ್ಧವಾಗಿರಬೇಕು.ಅದನ್ನು ಬಿಟ್ಟು ಬಹಿರಂಗವಾಗಿ ರಾಜ್ಯಾಧ್ಯಕ್ಷರ ವಿರುದ್ಧ ಸಮರ ಸಾರುವುದಲ್ಲ.ಪಕ್ಷವು ಅಳೆದು ತೂಗಿ ಸಂದೀಪ್‌ರೆಡ್ಡಿ ಆಯ್ಕೆ ಮಾಡಿದೆ. ಅವರ ನಾಯಕತ್ವ ದಲ್ಲಿ ಜಿಲ್ಲೆಯಲ್ಲಿ ಪಕ್ಷವು ಮುನ್ನಡೆಯಲಿ. ಹಿರಿಯರಾಗಿ ನೀವು ಮಾರ್ಗದರ್ಶನ ಮಾಡುವುದು ಒಳಿತು ಎಂದು ಹೇಳಿದರು.

ನಿಮ್ಮ ಉದ್ಧಟತನ, ದ್ವೇಷದ ರಾಜಕಾರಣಕ್ಕೆ ಬೇಸತ್ತ ಜನತೆ 2023ರಲ್ಲಿ ರಾಜಕಾರಣವೆಂದರೆ ಏನು ಅನ್ನೋದೆ ಗೊತ್ತಿಲ್ಲದ ಹುಡುಗನ ಎದುರು ಸೋಲುಣಿಸಿದರು. ಆದರೂ ಪಕ್ಷ ನಿಮಗೆ ಮತ್ತೆ ಸಂಸ ದನ ಟಿಕೇಟ್ ಕೊಟ್ಟು ಗೆಲ್ಲಿಸಿದೆ.ಅದಕ್ಕೆ ತಕ್ಕಂತೆ ಪಕ್ಷದ ಆದೇಶವನ್ನು ಪಾಲಿಸಿ ಯುವಕರನ್ನು ಬೆಂಬಲಿಸಿ ಎಂದು ತಾಕೀತು ಮಾಡಿದರು.

ನೀವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಕೆಲಸವನ್ನೇ ಹೆಚ್ಚಾಗಿ ಮಾಡಿದ್ದೀರಿ. ಬಾಗೇಪಲ್ಲಿಯಲ್ಲಿ ಸುಬ್ಬಾರೆಡ್ಡಿಗೆ ಸಹಾಯ ಮಾಡಿದಿರಿ. ಗೌರಿ ಬಿದನೂರಿನಲ್ಲಿ ಪುಟ್ಟಸ್ವಾಮಿಗೌಡರಿಗೆ ಸಹಾಯ, ಚಿಂತಾಮಣಿಯಲ್ಲಿ ಜೆ.ಕೆ.ಕೃಷ್ಣಾರೆಡ್ಡಿಗೆ, ಶಿಡ್ಲ ಘಟ್ಟದಲ್ಲಿ ಜೆಡಿಎಸ್‌ನ ಮೇಲೂರು ರವಿಕುಮಾರ್‌ಗೆ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ದೊಡ್ಡಬಳ್ಳಾಪುರದಲ್ಲಿ ವೆಂಕಟರಮಣಯ್ಯ, ಮಾಲೂರಿನಲ್ಲಿ ವಿಜಯ್‌ಕುಮಾರ್ ಬದಲಿಗೆ ಮಂಜು ನಾಥ್‌ಗೆ ಸಹಾಯ ಮಾಡಿದ್ದು ಪಕ್ಷಕ್ಕೆ ಗೊತ್ತಿದೆ. ಎಂಟಿಬಿ ಪಕ್ಷದ ಸಭೆಯಲ್ಲಿಯೇ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತಿಲ್ಲವೆ? ನಿಮ್ಮದು ಇಷ್ಟೆಲ್ಲಾ ತಪ್ಪಿಟ್ಟುಕೊಂಡು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮಾತನಾಡಲು ನಿಮಗೆ ನೈತಿಕತೆಯಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ನೂತನ ಅಧ್ಯಕ್ಷರಿಗೆ ಶುಭಕೋರಿ ಸಿಹಿ ತಿನ್ನಿಸಿದ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಅವರು ನಿಮ್ಮ ಸಾರಥ್ಯದಲ್ಲಿ ಜಿಲ್ಲೆಯಲ್ಲಿ ಪಕ್ಷವು ಸದೃಢವಾಗಿ ಬೆಳೆಯಲಿ,ಸ್ಥಳಿಯ ಸಂಸ್ಥೆಯ ಚುನಾವಣೆ ಸೇರಿ ಎಲ್ಲಾ ಚುನಾವಣೆಗಲ್ಲಿ ಪಕ್ಷವು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಕಾಣಲಿ ಎಂದು ಆಶೀರ್ವದಿಸಿದರು.

ಈ ವೇಳೆ ಸಂದೀಪ್‌ ರೆಡ್ಡಿ ಸುಹಾಸ್,ರಘು,ಯುವ ಘಟಕದ ಪದಾಧಿಕಾರಿಗಳು ಹಾಜರಿದ್ದರು.