Physical abuse: ಚಾಕೊಲೇಟ್ ಆಸೆ ತೋರಿಸಿ 4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ!
Physical abuse: ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಬಾಲಕಿ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತ ಮಗುವಿನ ಪೋಷಕರು ಬಿಹಾರ ಮೂಲದವರೆಂದು ತಿಳಿದುಬಂದಿದೆ. ಪ್ರಕರಣ ಸಂಬಂಧ 21 ವರ್ಷದ ಆರೋಪಿಯನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.


ಮಂಡ್ಯ: ಚಾಕೊಲೇಟ್ ಕೊಡಿಸುವುದಾಗಿ ಹೇಳಿ 4 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ (Physical abuse) ಎಸಗಿರುವುದು ಮಂಡ್ಯದಲ್ಲಿ ನಡೆದಿದೆ. ಈ ಸಂಬಂಧ 21 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಕೋಲೇಟ್ ಆಸೆ ತೋರಿಸಿ ಮಗುವನ್ನು ಪುಸಲಾಯಿಸಿ ಕಾಮುಕ ಕರೆದೊಯ್ದ ಅತ್ಯಾಚಾರವೆಸಗಿದ್ದಾನೆ.
ಸಂತ್ರಸ್ತ ಮಗುವಿನ ಪೋಷಕರು ಬಿಹಾರ ಮೂಲದವರೆಂದು ತಿಳಿದುಬಂದಿದೆ. ಇವರು ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕಳೆದೊಂದು ವರ್ಷದಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಮಹಿಳೆಯರು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ ವಿಕೃತನ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ (Bengaluru crime news) ಮಹಿಳೆಯರು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ಮಾಡುತ್ತಿದ್ದ (videotaping) ಮತ್ತೊಬ್ಬ ವಿಕೃತ ಕಾಮುಕನನ್ನು (Pervert) ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ಪೊಲೀಸರು ಹಾಜ ಮೊಯಿನುದ್ದಿನ್ ಎಂಬಾತನನ್ನು ಬಂಧಿಸಿದ್ದಾರೆ. ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಚನ್ನಸಂದ್ರ ಮೂಲದ ಮೊಯಿನುದ್ದಿನ್, ಮಹಿಳೆಯರು ಸ್ನಾನ ಮಾಡುವುದನ್ನು ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ.
ಕಳೆದ ಮಂಗಳವಾರ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ತಾಯಿ- ಮಗಳು ಬಾತ್‌ರೂಮ್‌ಗೆ ಸ್ನಾನಕ್ಕೆ ತೆರಳಿದ್ದರು. ಇದನ್ನು ಗಮನಿಸಿದ ಕಾಮುಕ ಮೊಯಿನುದ್ದಿನ್ ಕಿಟಕಿ ಮೂಲಕ ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಈತ ವಿಡಿಯೋ ಮಾಡುವುದನ್ನು ಮಗಳು ಗಮನಿಸಿದ್ದಾಳೆ. ಬಳಿಕ ಹೊರಗೆ ಬಂದು ತಂದೆಗೆ ಹೇಳಿದ್ದಾಳೆ. ತಂದೆ ಹೋಗಿ ನೋಡುವಷ್ಟರಲ್ಲಿ ಕಾಮುಕ ಅಲ್ಲಿಂದ ಎಸ್ಕೇಪ್ ಆಗಿದ್ದ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ.