ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಮಂಡ್ಯದಲ್ಲಿ ಸೇತುವೆಗೆ ಬೈಕ್‌ ಡಿಕ್ಕಿಯಾಗಿ ಕಾಲುವೆಗೆ ಬಿದ್ದು ಇಬ್ಬರು ಸಾವು

ಪೊಲೀಸರ ಪ್ರಕಾರ, ಮೋಟಾರ್ ಸೈಕಲ್‌ನಲ್ಲಿ ಇಬ್ಬರು ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಸೇತುವೆ ದಾಟುವಾಗ ಸವಾರನ ನಿಯಂತ್ರಣ ತಪ್ಪಿ ಬೈಕ್ ರೇಲಿಂಗ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರೂ ಕಾಲುವೆಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮಂಡ್ಯದಲ್ಲಿ ಸೇತುವೆಗೆ ಬೈಕ್‌ ಡಿಕ್ಕಿಯಾಗಿ ಕಾಲುವೆಗೆ ಬಿದ್ದು ಇಬ್ಬರು ಸಾವು

ಹರೀಶ್‌ ಕೇರ ಹರೀಶ್‌ ಕೇರ Jul 8, 2025 7:01 AM

ಮಂಡ್ಯ: ವಿಶ್ವೇಶ್ವರಯ್ಯ ಕಾಲುವೆಯ ಸೇತುವೆಗೆ ಬೈಕ್‌ ಡಿಕ್ಕಿ (Road Accident) ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ (bke accident) ಇಬ್ಬರು ವ್ಯಕ್ತಿಗಳು ಕಾಲುವೆಗೆ ಬಿದ್ದು (death) ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮಂಡ್ಯ (Mandya news) ಜಿಲ್ಲೆಯ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮೋಟಾರ್ ಸೈಕಲ್‌ನಲ್ಲಿ ಇಬ್ಬರು ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಸೇತುವೆ ದಾಟುವಾಗ ಸವಾರನ ನಿಯಂತ್ರಣ ತಪ್ಪಿ ಬೈಕ್ ರೇಲಿಂಗ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರೂ ಕಾಲುವೆಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೃತರ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಮಹಿಳೆಯ ಮೈಮೇಲಿನ ದೆವ್ವ ಬಿಡಿಸಲು ಯದ್ವಾತದ್ವಾ ಹೊಡೆತ, ಸಾವು

ಶಿವಮೊಗ್ಗ: ಮಹಿಳೆಯ ಮೈಗೆ ದೆವ್ವ ಮೆಟ್ಕೊಂಡಿದೆ ಎಂದು ಮನಸೋಯಿಚ್ಛೆ ಥಳಿಸಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿರುವಂತಹ (woman death) ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ. ಗೀತಮ್ಮ(53) ಮೃತ ಮಹಿಳೆ. ಗೀತಮ್ಮ ಮೇಲೆ ಹಲ್ಲೆ ಮಾಡಿದ ಆಶಾ ವಿರುದ್ಧ ಕೊಲೆ ಕೇಸ್ (murder case) ದಾಖಲಾಗಿದ್ದು, ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಶಾ ಎಂಬ ಮಹಿಳೆ ತಮ್ಮ ಮೇಲೆ ಚೌಡಮ್ಮ ದೇವಿ ಬರುತ್ತಾಳೆ ಎಂದು ಊರವರಲ್ಲಿ ಮೌಢ್ಯ ಹಬ್ಬಿಸಿದ್ದಳು. ಇದನ್ನೇ ನಂಬಿದ್ದ ಗೀತಮ್ಮ ಕುಟುಂಬಸ್ಥರು ದೆವ್ವ ಬಂದಿದೆ ಎಂದು ಅವರನ್ನು ಆಶಾ ಬಳಿ ಕರೆದುಕೊಂಡು ಹೋಗಿದ್ದಾರೆ. ನಿನ್ನೆ ರಾತ್ರಿ 9 ಗಂಟೆಯಿಂದ ತಡರಾತ್ರಿ 3 ಗಂಟೆಯವರೆಗೂ ಆಶಾ ಗೀತಮ್ಮಳನ್ನು ಮನಸೋಯಿಚ್ಛೆ ತಳಿಸಿದ್ದಾರೆ. ಥಳಿತಕ್ಕೊಳಗಾದ ಗೀತಮ್ಮ ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಗೀತಮ್ಮ ಇಂದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: Infant Dies: ಕೇರಳದಲ್ಲಿ ದಾರುಣ ಘಟನೆ; ಮುಂಜಿ ವೇಳೆ ಎರಡು ತಿಂಗಳ ಮಗು ಸಾವು