#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

2025ರಲ್ಲಿಯೂ ಮಾರಾಟ ಬೆಳವಣಿಗೆ ಮುಂದುವರಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಹೊಸ ವರ್ಷವನ್ನು ಸಕಾರಾತ್ಮಕವಾಗಿ ಆರಂಭಿಸಿದ್ದೇವೆ. ಕಳೆದ ವರ್ಷದ ಟ್ರೆಂಡ್ ಈ ವರ್ಷವೂ ಮುಂದುವರಿದಿದ್ದು, 2025 ರಲ್ಲಿಯೂ ಬೆಳವಣಿಗೆ ಸಾಧಿಸುವುದು ಮುಂದುವರಿಸಿದ್ದೇವೆ. ಹೊಸದಾಗಿ ಬಿಡುಗಡೆ ಮಾಡಲಾದ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಸೇರಿದಂತೆ ನಮ್ಮ ಎಲ್ಲಾ ಉತ್ಪನ್ನ ಶ್ರೇಣಿಗೆ ನಮ್ಮ ಗ್ರಾಹಕರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ

ಕಳೆದ ವರ್ಷದ ಜನವರಿಗಿಂತ ಈ ವರ್ಷದ ಜನವರಿಯಲ್ಲಿ ಶೇ.19ರಷ್ಟು ಮಾರಾಟ ಹೆಚ್ಚಳ

Profile Ashok Nayak Feb 1, 2025 4:24 PM

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) 2025ರಲ್ಲಿಯೂ ತನ್ನ ಮಾರಾಟ ಸಾಧನೆ ಮುಂದುವರಿಸಿದ್ದು, 2024ರ ಜನವರಿಯಲ್ಲಿ ಮಾರಾಟವಾದ 24,609 ಯುನಿಟ್‌ ಗಳಿಗೆ ಹೋಲಿಸಿದರೆ ಜನವರಿ 2025ರಲ್ಲಿ 29,371 ಯುನಿಟ್‌ ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಶೇ.19ರಷ್ಟು ಮಾರಾಟ ಬೆಳವಣಿಗೆ ದಾಖಲಿಸಿದೆ. ಕಂಪನಿಯು ಒಟ್ಟಾರೆ ದೇಶೀಯ ಮಾರುಕಟ್ಟೆಯಲ್ಲಿ 26,178 ಯುನಿಟ್‌ ಗಳನ್ನು ಮಾರಾಟ ಮಾಡಿದೆ ಮತ್ತು 3,193 ಯುನಿಟ್‌ ಗಳನ್ನು ರಫ್ತು ಮಾಡಿದೆ.

ಇದನ್ನೂ ಓದಿ: Toyota Kirloskar: ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಸಮಗ್ರ ಸಾರಿಗೆ ಉತ್ಪನ್ನಗಳನ್ನು ಪ್ರದರ್ಶಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಈ ಮಾರಾಟ ಸಾಧನೆಯು ಟಿಕೆಎಂ ಸಂಸ್ಥೆಯ ಗ್ರಾಹಕ ಕೇಂದ್ರಿತ ವಿಧಾನ, ದೇಶಾದ್ಯಂತ ಇರುವ ಗ್ರಾಹಕರಿಗೆ ಹೆಚ್ಚಿದ ಲಭ್ಯತೆ ಮತ್ತು ನವೀನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೆಚ್ಚಿರುವ ಬೇಡಿಕೆಗೆ ಸಾಕ್ಷಿಯಾಗಿದೆ.

ಈ ಕುರಿತು ಮಾತನಾಡಿರುವ ಟಿಕೆಎಂನ ಸೇಲ್ಸ್ ಸರ್ವೀಸ್ ಯೂಸ್ಡ್ ಕಾರ್ ಬಿಸಿನೆಸಿ ಮತ್ತು ಲಾಭ ವರ್ಧನೆ ವಿಭಾಗದ ಉಪಾಧ್ಯಕ್ಷರಾದ ವರೀಂದರ್ ವಾಧ್ವಾ ಅವರು, “ಹೊಸ ವರ್ಷವನ್ನು ಸಕಾರಾ ತ್ಮಕವಾಗಿ ಆರಂಭಿಸಿದ್ದೇವೆ. ಕಳೆದ ವರ್ಷದ ಟ್ರೆಂಡ್ ಈ ವರ್ಷವೂ ಮುಂದುವರಿದಿದ್ದು, 2025 ರಲ್ಲಿಯೂ ಬೆಳವಣಿಗೆ ಸಾಧಿಸುವುದು ಮುಂದುವರಿಸಿದ್ದೇವೆ. ಹೊಸದಾಗಿ ಬಿಡುಗಡೆ ಮಾಡಲಾದ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಸೇರಿದಂತೆ ನಮ್ಮ ಎಲ್ಲಾ ಉತ್ಪನ್ನ ಶ್ರೇಣಿಗೆ ನಮ್ಮ ಗ್ರಾಹಕರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅದಕ್ಕಾಗಿ ನಾನು ನಾನು ಗ್ರಾಹಕರಿಗೆ ಕೃತಜ್ಞನಾಗಿ ದ್ದೇನೆ" ಎಂದು ಹೇಳಿದರು.

2025ರಲ್ಲಿ ಭಾರತದಲ್ಲಿ ಕಂಪನಿಯ ನೆಲೆಯನ್ನು ಮತ್ತಷ್ಟು ಬಲಪಡಿಸಲು ನಮ್ಮ ಪ್ರಯತ್ನ ಇರಲಿದೆ. ಮೌಲ್ಯವರ್ಧಿತ ಸೇವೆಗಳು ಮತ್ತು ಅತ್ಯುತ್ತಮವಾದ ಮಾರಾಟ ನಂತರದ ಸೇವೆಯ ಮೂಲಕ ಗ್ರಾಹಕರಿಗೆ ಒಳಿತಾಗುವ ಕ್ರಮಗಳನ್ನು ಮುಂದುವರಿಸಲಿದ್ದೇವೆ. ನಮ್ಮ ಎಲ್ಲಾ ಪ್ರಯತ್ನ ಗಳು ಗ್ರಾಹಕರಿಗೆ ಸಂತೋಷಕರ ಅನುಭವಗಳನ್ನು ಒದಗಿಸುವ ಕಡೆಗೆ ಇರುತ್ತದೆ. ನಮ್ಮ ಉತ್ಪನ್ನ ತಂತ್ರವು ಬಹು ಮಾರ್ಗ ವಿಧಾನದ ಫಿಲಾಸಫಿಯನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಅವರ ಸಾರಿಗೆ ಅಗತ್ಯಗಳಿಗೆ ಅನುಗುಣವಾಗಿ ಉತ್ಪನ್ನ ನೀಡುವ ಕಡೆಗೆ ಗಮನ ಹರಿಸುತ್ತದೆ. ಜೊತೆಗೆ ನಾವು ನಮ್ಮ ಕಂಪನಿಯ ಕಾರ್ಯಾಚರಣೆಗಳಲ್ಲಿ ದಕ್ಷ ಕ್ರಮಗಳನ್ನು ಅನುಸರಿಸುತ್ತೇವೆ ಮತ್ತು ಮಾರು ಕಟ್ಟೆ ಅಗತ್ಯಗಳನ್ನು ಸೂಕ್ತ ರೀತಿಯಲ್ಲಿ ಪೂರೈಸುವ ಗುರಿಯನ್ನು ಹೊಂದಿದ್ದೇವೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ನಮಗೆ ಅಗಾಧ ಪ್ರಕ್ರಿಯೆ ದೊರೆತಿರುವುದು ಸಂತಸ ತಂದಿದೆ. "ಹ್ಯಾಪಿಯರ್ ಪಾಥ್" ಬ್ಯಾನರ್ ಅಡಿಯಲ್ಲಿ ತನ್ನ ಉತ್ಪನ್ನಗಳನ್ನು ಪ್ರದರ್ಶಿಸಿದ ಟೊಯೋಟಾ ಪೆವಿಲಿಯನ್, ಅದರ ಜೊತೆಗೆ ಬಹು ಮಾರ್ಗ ವಿಧಾನಗಳ ಮೂಲಕ ಇಂಗಾಲದ ತಟಸ್ಥತೆ ಸಾಧಿಸುವ ತನ್ನ ಸಮಗ್ರ ದೃಷ್ಟಿಕೋನವನ್ನು ಪ್ರದರ್ಶಿ ಸಿದೆ. ಕಂಪನಿಯು ಸುಸ್ಥಿರ ಬೆಳವಣಿಗೆ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಬದ್ಧವಾಗಿರುವುದಾಗಿ ಈ ಸಂದರ್ಭದಲ್ಲಿ ಸಾರಿದೆ. ಉತ್ಪನ್ನಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದ್ದು, ಇದು ಸುಸ್ಥಿರ ಸಾರಿಗೆ ವ್ಯವಸ್ಥೆಯ ಅಳವಡಿಕೆಗೆ ಮಾರುಕಟ್ಟೆಯು ಹೊಂದಿರುವ ಮನಸ್ಥಿತಿಯನ್ನು ಸಾರಿದೆ.

ಜನವರಿ 2025ರಲ್ಲಿ ಟಿಕೆಎಂ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಟೊಯೋಟಾ ಮೊಬಿಲಿಟಿ ಸೊಲ್ಯೂಷನ್ಸ್ ಆಂಡ್ ಸರ್ವೀಸಸ್ ಲಿಮಿಟೆಡ್ (ಟಿಎಂಎಸ್ಎಸ್) ಇಂಡಿಯಾವನ್ನು ಪ್ರಾರಂಭಿಸಿದೆ. ಈ ಮೂಲಕ ಭಾರತದ ಬಳಸಿದ ಕಾರುಗಳ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡುವ ಉದ್ದೇಶ ಹೊಂದಿದೆ. ಟಿಎಂಎಸ್ಎಸ್ ಟೊಯೋಟಾದ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆಯ ಮೌಲ್ಯಗಳನ್ನು ಎತ್ತಿಹಿಡಿಯಲಿದ್ದು, ಹೊಸ ಮತ್ತು ಬಳಸಿದ ಕಾರುಗಳ ವಿಭಾಗ ಗಳಾದ್ಯಂತ ಅಸಾಧಾರಣ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.