ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

"ಸಾಕು ಎಂಬುದೇ ಇಲ್ಲ": 60% ಭಾರತೀಯ ಸ್ಯಾಂಡ್‌ವಿಚ್‌ ತಲೆಮಾರಿಗೆ ಭವಿಷ್ಯದ ಆರ್ಥಿಕ ಭದ್ರತೆಯ ಬಗ್ಗೆ ಆತಂಕ - ಎಡಲ್ವೈಝ್ ಲೈಫ್ ಅಧ್ಯಯನ

ಎಡಲ್ವೈಝ್ ಲೈಫ್ ಇನ್ಶುರೆನ್ಸ್‌ನ ಎಮ್‌ಡಿ ಮತ್ತು ಸಿಇಒ ಸುಮಿತ್ ರೈ ಮಾತನಾಡಿ "ಕಳೆದ ಹಲವು ವರ್ಷಗಳಿಂದ ನಮ್ಮ ಗ್ರಾಹರಕ ಸಂವಾದಗಳ ಮೂಲಕ ತಮ್ಮ ಪಾಲಕರು ಮತ್ತು ಮಕ್ಕಳ ಕಾಳಜಿ ವಹಿಸುವ ನಿಟ್ಟಿನಲ್ಲಿ ಸ್ಯಾಂಡ್‌ವಿಚ್ ತಲೆಮಾರಿನ ಜನರು ಬಳಲುತ್ತಿದ್ದಾರೆ ಎಂಬುದನ್ನು ನಾವು ನಿಕಟವಾಗಿ ಗಮನಿಸಿದ್ದೇವೆ. ಬಯಕೆಗಳ ಬದಲಿಗೆ ಅಗತ್ಯಗಳಿಗೆ ಆದ್ಯತೆ ನೀಡುವ ಇವರು, ಆರೋಗ್ಯ ಸೇವೆ ಮತ್ತು ಶಿಕ್ಷಣದಂತಹ ಅಗತ್ಯಗಳನ್ನು ಅವರು ಪೂರೈಸ ಬೇಕಿರುತ್ತದೆ

ಯುಗವ್‌ ಸಹ ಭಾಗಿತ್ವದಲ್ಲಿ ಈ ತಲೆಮಾರಿನ 4005 ಪ್ರತಿಕ್ರಿಯೆದಾರರ ಸಮೀಕ್ಷೆ

Profile Ashok Nayak Feb 25, 2025 8:54 PM

ಭಾರತದ ಸ್ಯಾಂಡ್‌ವಿಚ್‌ ತಲೆಮಾರು ತಮ್ಮ ಸ್ವಂತ ಭವಿಷ್ಯದ ಸಿದ್ಧತೆ ಮಾಡಿಕೊಂಡಿಲ್ಲ ಎಂಬುದು ತಿಳಿದುಬಂದಿದೆ. ಎಡಲ್ವೈಝ್ ಲೈಫ್ ಇನ್ಶುರೆನ್ಸ್ ಅಧ್ಯಯನದಲ್ಲಿ "ನಾನು ಎಷ್ಟು ಉಳಿಸಿದರೂ ಅಥವಾ ಹೂಡಿಕೆ ಮಾಡಿದರೂ ಭವಿಷ್ಯಕ್ಕೆ ಸಾಲುತ್ತದೆ ಎಂದು ಅನಿಸುವುದೇ ಇಲ್ಲ" ಎಂದು 60% ಜನರ ಅಭಿಪ್ರಾಯಪಟ್ಟಿದ್ದಾರೆ. ಸ್ಯಾಂಡ್‌ವಿಚ್ ತಲೆಮಾ ರನ್ನು 35 - 54 ವರ್ಷಗಳ ಅವಧಿಯ ವ್ಯಕ್ತಿಗಳು ಎಂದು ಪರಿಗಣಿಸ ಲಾಗಿದ್ದು, ತಮ್ಮ ವಯ ಸ್ಸಾದ ಪಾಲಕರು ಮತ್ತು ಬೆಳೆಯುತ್ತಿರುವ ಮಕ್ಕಳನ್ನು ಒಳಗೊಂಡ ಎರಡು ತಲೆಮಾರಿನ ಜನರು ಇವರ ಮೇಲೆ ಅವಲಂಬಿತರಾಗಿರುತ್ತಾರೆ. ಯುಗವ್‌ ಸಹ ಭಾಗಿತ್ವದಲ್ಲಿ ಕಂಪನಿ ಯು ಈ ತಲೆಮಾರಿನ 4005 ಪ್ರತಿಕ್ರಿಯೆದಾರರ ಸಮೀಕ್ಷೆಯನ್ನು ನಡೆಸಿದ್ದು, ಇದನ್ನು 12 ನಗರಗಳಲ್ಲಿ ನಡೆಸಲಾಗಿದೆ. ಈ ತಲೆಮಾರಿನ ಜನರ ವರ್ತನೆಗಳು, ನಂಬಿಕೆಗಳು ಮತ್ತು ಆರ್ಥಿಕ ಸಿದ್ಧತೆಯ ಮಟ್ಟವನ್ನು ಅರ್ಥ ಮಾಡಿಕೊಳ್ಳುವುದು ಇದರ ಗುರಿಯಾಗಿದೆ.

ಇದನ್ನೂ ಓದಿ: Bangalore News: ಮೊಬೈಲ್‌ ನೋಡಬೇಡ ಎಂದಿದ್ದಕ್ಕೆ 20ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಎಡಲ್ವೈಝ್ ಲೈಫ್ ಇನ್ಶುರೆನ್ಸ್‌ನ ಎಮ್‌ಡಿ ಮತ್ತು ಸಿಇಒ ಸುಮಿತ್ ರೈ ಮಾತನಾಡಿ "ಕಳೆದ ಹಲವು ವರ್ಷಗಳಿಂದ ನಮ್ಮ ಗ್ರಾಹರಕ ಸಂವಾದಗಳ ಮೂಲಕ ತಮ್ಮ ಪಾಲಕರು ಮತ್ತು ಮಕ್ಕಳ ಕಾಳಜಿ ವಹಿಸುವ ನಿಟ್ಟಿನಲ್ಲಿ ಸ್ಯಾಂಡ್‌ವಿಚ್ ತಲೆಮಾರಿನ ಜನರು ಬಳಲುತ್ತಿದ್ದಾರೆ ಎಂಬುದನ್ನು ನಾವು ನಿಕಟವಾಗಿ ಗಮನಿಸಿದ್ದೇವೆ. ಬಯಕೆಗಳ ಬದಲಿಗೆ ಅಗತ್ಯಗಳಿಗೆ ಆದ್ಯತೆ ನೀಡುವ ಇವರು, ಆರೋಗ್ಯ ಸೇವೆ ಮತ್ತು ಶಿಕ್ಷಣದಂತಹ ಅಗತ್ಯಗಳನ್ನು ಅವರು ಪೂರೈಸಬೇಕಿರುತ್ತದೆ. ಇದು ಅವರ ಒಟ್ಟಾರೆ ಆರ್ಥಿಕ ನಿರ್ಧಾರ ಮಾಡುವಿಕೆಯಲ್ಲಿ ಮಹ ತ್ವದ ಪಾತ್ರ ವಹಿಸುತ್ತದೆ. ಹಾಗೂ ಈ ಪ್ರಕ್ರಿಯೆಯಲ್ಲಿ, ಅವರ ಕನಸುಗಳನ್ನು ಪೂರೈಸುವ ವಿಷಯದಲ್ಲಿ ಹಿಂದೆ ಬೀಳುತ್ತಾರೆ ಮತ್ತು ಭವಿಷ್ಯಕ್ಕೆ ತಾವು ಸಿದ್ಧವಾಗಿಲ್ಲ ಎಂಬ ಭಾವ ಅವರನ್ನು ಕಾಡುತ್ತದೆ."

ಕುಟುಂಬದ ಮೇಲಿನ ಪ್ರೀತಿಯೇ ಅವರ ಆರ್ಥಿಕ ನಿರ್ಧಾರಗಳನ್ನು ಪ್ರಚೋದಿಸುತ್ತಿರುತ್ತದೆ. ಹೀಗಾಗಿ, ಆರ್ಥಿಕ ಆಯೋಜನೆಯಲ್ಲಿ ಸಮಸ್ಯೆ ಅಥವಾ ಹಣಕಾಸಿನ ಸ್ಥಿತಿಯ ಬಗ್ಗೆ ಅಸಂ ತೃಪ್ತಿಯನ್ನು ಈ ತಲೆಮಾರಿನ ಜನರು ಎದುರಿಸುತ್ತಿದ್ದಾರೆ ಎಂಬುದನ್ನು ನಮ್ಮ ಅಧ್ಯಯನವು ಸೂಚಿಸುತ್ತಿದೆ. ಹಣ ಖಾಲಿಯಾಗುವ ಬಗ್ಗೆ ಚಿಂತೆ, ಹಿಂದೆ ಬಿದ್ದಿರುವ ಹಾಗೆ ಭಾವಿಸುವುದು ಮತ್ತು ಉತ್ತಮ ಸಾಧನೆ ಮಾಡುತ್ತಿಲ್ಲ ಎಂಬ ಭಾವನೆಯಂತಹ ವಿವಿಧ ಹೇಳಿಕೆಗಳನ್ನು 50% ಕ್ಕೂ ಹೆಚ್ಚು ಜನರು ನೀಡಿದ್ದಾರೆ.

"ಈ ತಲೆಮಾರಿನ ಜನರು ತಮ್ಮ ನಿರೀಕ್ಷೆಗಳ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ತಮ್ಮ ಆದ್ಯತೆಯ ಉತ್ಪನ್ನ ವಿಭಾಗಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಯೋಜನೆ ಮಾಡಿದ್ದೇವೆ ಎಂದು ಭಾವಿಸುತ್ತಾರೆ. ಆದರೆ, ನಮ್ಮ ಅಧ್ಯಯನವು ಕೆಲವು ಕುತೂಹಲಕರ ಸಂಗತಿಗಳನ್ನು ಅನಾವರಣಗೊಳಿಸಿದೆ. ಮುಂದಿನ 1-2 ವರ್ಷಗಳವರೆಗೆ ಈ ಸಕ್ರಿಯ ಹೂಡಿಕೆಗಳನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಜನರು ಕಡಿಮೆ ಪ್ರಮಾಣದಲ್ಲಿ ತೋರಿಸಿದ್ದಾರೆ. ಮೊದಲೇ ಗುರಿ ಹಾಕಿಕೊಂಡಿದ್ದಕ್ಕೆ ನಿಗದಿ ಮಾಡಿದ್ದ ಹಣವನ್ನು ಸಮಯ ಕ್ಕೂ ಮೊದಲೇ ಅವರು ಪಡೆದುಕೊಂಡಿದ್ದಾರೆ. ಹೀಗಾಗಿ, ತಾವು ನಿಂತಿರುವ ಅಡಿಪಾಯವೇ ಅಲುಗಾಡುತ್ತಿದೆ ಎಂದು ಭಾವಿಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ" ಎಂದು ರೈ ಹೇಳಿದ್ದಾರೆ.

ಜೀವ ವಿಮೆ, ಆರೋಗ್ಯ ವಿಮೆ, ಮ್ಯೂಚುವಲ್ ಫಂಡ್‌ಗಳು, ಈಕ್ವಿಟಿಗಳು ಮತ್ತು ಬ್ಯಾಂಕ್‌ ಎಫ್‌ಡಿಗಳಂತಹ 5 ಮೆಚ್ಚಿನ ಉತ್ಪನ್ನ ವಿಭಾಗಗಳಲ್ಲಿ, ಎಲ್ಲ ವಿಭಾಗಗಳಲ್ಲೂ ಪ್ರಸ್ತುತ 60% ಕ್ಕಿಂತ ಕಡಿಮೆ ಸಕ್ರಿಯ ಹೂಡಿಕೆಯನ್ನು ಹೊಂದಿದ್ದಾರೆ ಮತ್ತು ಮುಂದಿನ 1-2 ವರ್ಷಗಳಲ್ಲಿ ಅದನ್ನು ಮುಂದುವರಿಸುವ ಬಗ್ಗೆ ಇದಕ್ಕೂ ಕಡಿಮೆ ಜನರು ಆಸಕ್ತಿ ತೋರಿಸಿದ್ದಾರೆ. ಇನ್ನೂ ಮುಂದುವರಿದು ಕೇಳಿದಾಗ, ಈ ಎಲ್ಲ ಉತ್ಪನ್ನ ವಿಭಾಗಗಳನ್ನು ಅವಧಿಗೂ ಮೊದಲೇ ಹಿಂಪಡೆಯಲಾಗಿದೆ. ಅಂದರೆ, ಯಾವ ಗುರಿಗೆ ಅವುಗಳನ್ನು ತೆರೆಯಲಾಗಿತ್ತೋ ಆ ಗುರಿ ಸಾಧನೆಯಾಗುವುದಕ್ಕೂ ಮೊದಲೇ ಹಣವನ್ನು ಹಿಂಪಡೆಯ ಲಾಗಿದೆ. ಈ ನಗದಿಕರಣಕ್ಕೆ ಪ್ರಚೋದನೆ ನೀಡಿದ್ದ ಅಗತ್ಯಗಳಾಗಿದ್ದರೂ, ಅತ್ಯಂತ ಅಗತ್ಯದ್ದಲ್ಲದ ವೆಚ್ಚಗಳಾದ ರಜೆ, ಹಬ್ಬದ ಸಮಯದಲ್ಲಿ ಖರ್ಚು ಮಾಡುವುದು ಮತ್ತು ಇತರೆ ಅಂಶಗಳು ಚಾಲಕ ಶಕ್ತಿಗಳಾಗಿವೆ.

ಈ ತಲೆಮಾರಿನ ಪ್ರಮುಖ ನಿರೀಕ್ಷೆಗಳಲ್ಲಿ ಮಕ್ಕಳ ಭವಿಷ್ಯ (ಅವರಿಗೆ ಶಿಕ್ಷಣ ಮತ್ತು ವಿವಾಹ), ಪಾಲಕರ ಆರೋಗ್ಯ ಸೇವೆ ಅಗತ್ಯಗಳು ಮತ್ತು ಕುಟುಂಬದ ಜೀವನ ಮಾನ ದಂಡವನ್ನು ಸುಧಾರಿಸುವುದು ಇತ್ಯಾದಿಯಾಗಿವೆ. ಹಣಕಾಸು ಯೋಜನೆ ಮಾಡುವಾಗ ಅವರು ಸಕಾರಣವಾಗಿ ಉತ್ತಮ ಆತ್ಮವಿಶ್ವಾಸವನ್ನು ತೋರಿಸುತ್ತಾರೆ. ಈ ಪೈಕಿ 94% ಜನರು ತಾವು ವಿವರವಾದ ಯೋಜನೆ ಮಾಡಿದ್ದೇವೆ ಎಂದು ಅಥವಾ ಯಾವುದೋ ಒಂದು ಹಂತದ ಯೋಜನೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಹೆಚ್ಚಿನ 72% ಜನರು ತಮ್ಮ ಹೂಡಿಕೆಗಳನ್ನು ನಿರ್ದಿಷ್ಟ ನಿರೀಕ್ಷೆಗಳಿಗೆ ಸಂಪರ್ಕಗೊಂಡಿದೆ ಎಂದು ಭಾವಿಸಿದ್ದಾರೆ.

ಆದರೂ, 64% ಜನರು ಹೇಳುವಂತೆ, ತಮ್ಮ ಅಲ್ಪಾವಧಿ ಅಗತ್ಯಗಳಿಗೆ ಯಾವುದೋ ಒಂದು ರೀತಿಯ ಸಾಲವನ್ನು ಬಳಸಿದ್ದೇವೆ ಮತ್ತು ಉಳಿದ 49% ಜನರು ಉಳಿತಾಯವನ್ನು ಬಳಸಿ ದ್ದೇವೆ ಎಂದು ಹೇಳಿದ್ದಾರೆ. ನಗದು/ಆದಾಯದ ಜೊತೆಗೆ ಸಾಲದಿಂದ ಅವರು ಆರೋಗ್ಯ ಸೇವೆ ಮತ್ತು ಶಿಕ್ಷಣದಂತಹ ನಿರ್ಣಾಯಕ ಅಗತ್ಯವನ್ನು ಅವರು ಪೂರೈಸಿಕೊಂಡಿದ್ದಾರೆ. ಆದರೆ, ರಜೆ, ಮನೆ ನವೀಕರಣ ಇತ್ಯಾದಿ ಪ್ರಮುಖವಲ್ಲದ ಅಗತ್ಯಗಳನ್ನು ಪೂರೈಸಲೂ ಇದು ಅವರಿಗೆ ಅನುಕೂಲ ಮಾಡಿಕೊಟ್ಟಿದೆ.

ತಮ್ಮ ದೀರ್ಘಾವಧಿ ನಿರೀಕ್ಷೆಗಳನ್ನು ಪೂರೈಸಲು ಹಣಕಾಸು ಸಲಕರಣೆಗಳಿಂದ ಬಂದ ಆದಾಯದ ಮೇಲೆ 79% ಜನರು ಅವಲಂಬಿಸಿದ್ದಾರೆ ಮತ್ತು 71% ಜನರು ತಮ್ಮ ರೆಗ್ಯುಲರ್ ಭವಿಷ್ಯದ ಆದಾಯವನ್ನು ಅವಲಂಬಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ತಮ್ಮ ಪ್ರಮುಖ 3 ದೀರ್ಘಕಾಲೀನ ನಿರೀಕ್ಷೆಗಳಲ್ಲಿ ನಿವೃತ್ತಿಯನ್ನೂ ಈ ತಲೆಮಾರು ಪರಿಗಣಿಸಿದೆ.