Bihar Encounter: ಬಿಹಾರ ಉದ್ಯಮಿ ಖೇಮ್ಕಾ ಹತ್ಯೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಬಲಿ
ಬಿಹಾರದ ಕೈಗಾರಿಕೋದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಜುಲೈ 4 ರಂದು ಶುಕ್ರವಾರ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಆರೋಪಿ ರಾಜಾನ ಬಂಧನಕ್ಕೆ ಪೊಲೀಸರು ತೆರಳಿದ್ದ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಉಮೇಶ್ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಪಟನಾ: ಬಿಹಾರದ ಉದ್ಯಮಿ ಗೋಪಾಲ್ ಖೇಮ್ಕಾ ಅವರ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್ ಕೌಂಟರ್‌ನಲ್ಲಿ(Bihar Encounter) ಸೋಮವಾರ ರಾತ್ರಿ ಹತ್ಯೆ ಮಾಡಿದ್ದಾರೆ. ಖೇಮ್ಕಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಸೋಮವಾರ ಬಂಧಿಸಲಾಗಿತ್ತು. ಇದರಲ್ಲಿ ಒಬ್ಬನನ್ನು ಎನ್ ಕೌಂಟರ್ ನಲ್ಲಿ ರಾತ್ರಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಆರೋಪಿಯನ್ನು ಉಮೇಶ್ ಎಂದು ಗುರುತಿಸಲಾಗಿದೆ. ಈ ಘಟನೆ ವೇಳೆ ಇನ್ನೊಬ್ಬ ಆರೋಪಿ ವಿಕಾಸ್ ಕೂಡ ಜೊತೆಗಿದ್ದ ಎನ್ನಲಾಗಿದೆ.
ಬಿಹಾರದ ಕೈಗಾರಿಕೋದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಜುಲೈ 4 ರಂದು ಶುಕ್ರವಾರ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಆರೋಪಿ ರಾಜಾನ ಬಂಧನಕ್ಕೆ ಪೊಲೀಸರು ತೆರಳಿದ್ದ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಉಮೇಶ್ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖೇಮ್ಕಾ ಅವರ ಹತ್ಯೆಗೆ ಉಮೇಶ್ ಆಯುಧಗಳನ್ನು ಪೂರೈಕೆ ಮಾಡಿದ್ದ. ಖೇಮ್ಕಾ ಅವರ ಹತ್ಯೆಯ ವೇಳೆ ವಿಕಾಸ್ ಗುಂಡು ಹಾರಿಸಿದ್ದು ಉಮೇಶ್ ಆತನ ಜೊತೆಗಿದ್ದನು ಎನ್ನಲಾಗಿದೆ. ಬಿಹಾರ ರಾಜಧಾನಿಯ ಮಲ್ಸಲಾಮಿ ಪ್ರದೇಶದಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿ ವೇಳೆ ಉಮೇಶ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ.
ಉದ್ಯಮಿ ಖೇಮ್ಕಾ ಅವರನ್ನು ಶುಕ್ರವಾರ ತಡರಾತ್ರಿ ಹತ್ಯೆ ಮಾಡಲಾಗಿತು. ಅವರು ಮನೆಯ ಗೇಟ್ ಹೊರಗೆ ತಮ್ಮ ಕಾರಿನಲ್ಲಿದ್ದಾಗ ಅವರ ವಾಹನದ ಬಳಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಖೇಮ್ಕಾ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರು ಅದಾಗಲೇ ಅವರು ಸಾವನ್ನಪ್ಪಿದ್ದರು.
ಈ ಸುದ್ದಿಯನ್ನೂ ಓದಿ: Murder Case: ಕಲಬುರಗಿಯಲ್ಲೂ ರೇಣುಕಾಸ್ವಾಮಿ ರೀತಿಯ ಕೊಲೆ: ಪ್ರೇಯಸಿಗೆ ಕಿರುಕುಳ ನೀಡಿದಾತನ ಗುಪ್ತಾಂಗಕ್ಕೆ ಒದ್ದು ಹತ್ಯೆ
ಏಳು ವರ್ಷಗಳ ಹಿಂದೆ ಹಾಜಿಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿ ಅವರ ಮಗನನ್ನು ಕೊಲೆ ಮಾಡಲಾಗಿತ್ತು. ಈ ಹೈ ಪ್ರೊಫೈಲ್ ಖೇಮ್ಕಾ ಅವರ ಕೊಲೆ ಪ್ರಕರಣವು ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ನಿತೀಶ್ ಕುಮಾರ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ವಿರೋಧ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಇದನ್ನು ಚುನಾವಣೆ ಪ್ರಚಾರದ ಸರಕನ್ನಾಗಿಸುವ ಸಾಧ್ಯತೆ ಇದೆ. ತಮ್ಮ ಪ್ರಚಾರದ ವೇಳೆ ಬಿಹಾರದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರದ ಮೇಲೆ ದಾಳಿ ನಡೆಸುತ್ತಿವೆ.
ಉದ್ಯಮಿಯ ಹತ್ಯೆಯ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಪೊಲೀಸರಿಗೆ ಸೂಚಿಸಿದ್ದು, ಕಾನೂನಿನ ಸುವ್ಯವಸ್ಥೆ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.