Texas Flood: ಟೆಕ್ಸಾಸ್‌ನಲ್ಲಿ ಭಾರೀ ಪ್ರವಾಹ; ನೋಡ ನೋಡ್ತಿದ್ದಂಗೆ ಕೊಚ್ಚಿ ಹೋದ ರಸ್ತೆ, ಮುಳುಗಿದ ಅಮೆರಿಕ
ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರೀ ಮಳೆಯಾದ ಪರಿಣಾಮ ದಿಢೀರ್ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸೆಂಟ್ರಲ್ ಟೆಕ್ಸಾಸ್ನಲ್ಲೇ ಇಪ್ಪತ್ತಕ್ಕೂ ಹೆಚ್ಚು ಅಧಿಕ ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದಿಂದ 28 ಮಕ್ಕಳು ಸೇರಿದಂತೆ 80 ಮಂದಿ ಜೀವ ಬಿಟ್ಟಿದ್ದಾರೆ. ಟೆಕ್ಸಾಸ್‌ನಲ್ಲಿ ಇನ್ನೂ ಹೆಚ್ಚಿನ ಮಳೆಯಾಗಲಿದ್ದು, ಹಾನಿ ಮತ್ತಷ್ಟು ಹೆಚ್ಚಾಗಬಹುದು ಎಂದು ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರೀ ಮಳೆಯಾದ ಪರಿಣಾಮ ದಿಢೀರ್ ಪ್ರವಾಹದ ಸ್ಥಿತಿ (Texas Flood) ನಿರ್ಮಾಣವಾಗಿದೆ. ಸೆಂಟ್ರಲ್ ಟೆಕ್ಸಾಸ್ನಲ್ಲೇ ಇಪ್ಪತ್ತಕ್ಕೂ ಹೆಚ್ಚು ಅಧಿಕ ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದಿಂದ 28 ಮಕ್ಕಳು ಸೇರಿದಂತೆ 80 ಮಂದಿ ಜೀವ ಬಿಟ್ಟಿದ್ದಾರೆ. ಟೆಕ್ಸಾಸ್‌ನಲ್ಲಿ ಇನ್ನೂ ಹೆಚ್ಚಿನ ಮಳೆಯಾಗಲಿದ್ದು, ಹಾನಿ ಮತ್ತಷ್ಟು ಹೆಚ್ಚಾಗಬಹುದು ಎಂದು ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ 17 ಹೆಲಿಕಾಪ್ಟರ್, ಡ್ರೋನ್ಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ತಂಡಗಳು ಕೂಡ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಟೆಕ್ಸಾಸ್‌ನಲ್ಲಿ ಇದುವರೆಗೂ 850 ಮಂದಿಯನ್ನು ರಕ್ಷಿಸಲಾಗಿದೆ. ಎಮರ್ಜೆನ್ಸಿ ಸೇವೆಗಳು, ಬೋಟ್, ಹೆಲಿಕಾಪ್ಟರ್ಗಳು, ಡ್ರೋನ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಅವಶೇಷಗಳಡಿ ಜನರು, ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹೆಚ್ಚಾಗುತ್ತಿರುವ ಉಷ್ಣಾಂಶದ ಮಧ್ಯೆಯೂ ಹಾವಿನ ಕಾಟದ ಮಧ್ಯೆಯೂ ರಕ್ಷಣಾ ತಂಡಗಳು ನಾಪತ್ತೆ ಆದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
A timelapse video shows the speed at which deadly floodwaters rose over a causeway in Texas. The video recorded the scene for around 50 minutes, according to the timecode https://t.co/qqaiRP5TR6 pic.twitter.com/4oKX3xHr5e
— Reuters (@Reuters) July 7, 2025
ಟೆಕ್ಸಾಸ್‌ನ ಕಿಂಗ್ಸ್‌ಲ್ಯಾಂಡ್‌ನಲ್ಲಿ ಪ್ರವಾಹದ ನೀರು ಒಂದು ಗಂಟೆಯೊಳಗೆ ಕಾಸ್‌ವೇಯನ್ನು ಆವರಿಸಿದ ವೇಗವನ್ನು ಟೈಮ್‌ಲ್ಯಾಪ್ಸ್ ವೀಡಿಯೊ ಸೆರೆಹಿಡಿದಿದೆ. ಜುಲೈ 4 ರ ವಾರಾಂತ್ಯದ ದುರಂತದ ಸಮಯದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಚಿತ್ರೀಕರಿಸಿದ್ದಾರೆ. ವೀಡಿಯೊದಲ್ಲಿ ಪ್ರವಾಹದ ನೀರು ವೇಗವಾಗಿ ಏರುತ್ತಿರುವುದನ್ನು ಮತ್ತು ಅಂತಿಮವಾಗಿ ಎತ್ತರದ ರಸ್ತೆಯನ್ನು ಮುಳುಗಿಸುವುದನ್ನು ತೋರಿಸಲಾಗಿದೆ. ಮೊದಲಿಗೆ ಕೆಲವು ವೀಕ್ಷಕರು ಗೋಚರಿಸುತ್ತಾರೆ, ಆದರೆ ನೀರು ಏರಲು ಪ್ರಾರಂಭಿಸಿದಾಗ ಅವರು ಆ ಪ್ರದೇಶವನ್ನು ಬಿಟ್ಟು ಹೋಗುತ್ತಾರೆ.
ಈ ಸುದ್ದಿಯನ್ನೂ ಓದಿ; Texas Flood: ಟೆಕ್ಸಾಸ್‌ನಲ್ಲಿ ಭಾರೀ ಪ್ರವಾಹ; ಸಾವಿನ ಸಂಖ್ಯೆ 43ಕ್ಕೆ ಏರಿಕೆ, 27 ಬಾಲಕಿಯರು ನಾಪತ್ತೆ
ಹಿಂದೆಂದೂ ಕಾಣದ ಭಾರೀ ಮಳೆಯಿಂದ ದಿಢೀರ್ ಪ್ರವಾಹದ ಸ್ಥಿತಿ ಎದುರಾಗಿತ್ತು. ಒಂದೇ ಗಂಟೆಯಲ್ಲಿ 15 ಇಂಚು ಮಳೆಯಾಗಿದೆ. ಇದರಿಂದಾಗಿ ಗುಡಲಪೆ ನದಿಯು ಕೆಲವೇ ನಿಮಿಷಗಳಲ್ಲಿ 26 ಅಡಿ ಎತ್ತರ ಹೆಚ್ಚಾಗಿ ಹರಿದಿದೆ. ನದಿಯ ಅಕ್ಕಪಕ್ಕದ ಟೌನ್ಗಳು ನದಿ ನೀರಿನಿಂದ ಜಲಾವೃತ್ತವಾಗಿದ್ದವು. ಸ್ಥಳೀಯ ಮುನ್ನೆಚ್ಚರಿಕೆಯ ವ್ಯವಸ್ಥೆಯನ್ನು ಪುನರ್ ಪರಿಶೀಲಿಸಬೇಕು, ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡುವ ನಿಖರತೆಯನ್ನು ಪುನರ್ ಪರಿಶೀಲಿಸಬೇಕು ಎಂದು ಟೆಕ್ಸಾಸ್ ಗರ್ವನರ್ ಅಬೌಟ್ ಹೇಳಿದ್ದಾರೆ. ಈ ಬಾರಿ ಮಳೆ, ದಿಢೀರ್ ಪ್ರವಾಹದ ಬಗ್ಗೆ ಸರಿಯಾದ, ನಿಖರ ಮುನ್ನೆಚ್ಚರಿಕೆಯನ್ನು ನೀಡುವಲ್ಲಿ ಅಮೆರಿಕಾದ ಹವಾಮಾನ ಇಲಾಖೆಯು ವಿಫಲವಾಗಿದೆ. ಇನ್ನೂ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಾವು ಮುಂದಿನ ಶುಕ್ರವಾರ ಟೆಕ್ಸಾಸ್‌ನ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ.