ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neha Kakkar: ಡ್ರೆಸ್‌ ಮೇಲೆ ಒಳ ಉಡುಪು ತೊಟ್ಟು ಪೋಸ್‌ ಕೊಟ್ಟ ಖ್ಯಾತ ಗಾಯಕಿ- ಛೀ... ಥೂ ಎಂದ ನೆಟ್ಟಿಗರು!

ಸೋಶಿಯಲ್ ಮಿಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಗಾಯಕಿ ನೇಹಾ ಅವರು ತಮ್ಮ ಸಿಂಗಿಂಗ್ ಇವೆಂಟ್ , ಫಾರಿನ್ ಟ್ರಿಪ್ ಬಗ್ಗೆ ಆಗಾಗ ಪೋಸ್ಟ್ ಹಂಚಿಕೊಳ್ಳುತ್ತಲೇ ಇರುತ್ತಾರೆ‌. ಈ ಬಾರಿ ನೇಹಾ ಅವರು ವಿಚಿತ್ರವಾಗಿ ಡ್ರೆಸ್ ತೊಡುವ ಮೂಲಕ ನೆಟ್ಟಿಗರ ಟ್ರೋಲಿಗೆ ಗುರಿಯಾಗಿದ್ದಾರೆ. ಗಾಯನದ ಮೂಲಕ ಜನರನ್ನು ರಂಜಿಸಿದ್ದ ಗಾಯಕಿಯ ವಿಭಿನ್ನ ಲುಕ್ ಕಂಡು ನೆಟ್ಟಿಗರು ಸೋಶಿಯಲ್ ಮಿಡಿ ಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ..

ಡ್ರೆಸ್‌ ಮೇಲೆ ಒಳ ಉಡುಪು! ಖ್ಯಾತ ಸಿಂಗರ್‌ ಔಟ್‌ಫಿಟ್‌ಗೆ ನೆಟ್ಟಿಗರು ಗರಂ

Profile Pushpa Kumari Jul 8, 2025 3:50 PM

ನವದೆಹಲಿ: ಗಾಯಕಿ ನೇಹಾ ಕಕ್ಕರ್ (Neha Kakkar) ಅವರು ಸದಾ ಒಂದಲ್ಲ ಒಂದು ವಿಚಾರ ದಿಂದ ಸುದ್ದಿಯಲ್ಲಿರುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಸಂಗೀತ ಆಸಕ್ತಿ ಹೊಂದಿದ್ದ ಇವರು ಕಡು ಬಡತನದಲ್ಲಿ ಹುಟ್ಟಿ ತಮ್ಮ ಪ್ರತಿಭೆಯಿಂದಲೇ ಜನ ಮನಗೆದ್ದು ಇದೀಗ ಐಶಾರಾಮಿ ಜೀವನ ನಡೆಸಿ ಇತರ ರಿಗೂ ಸ್ಫೂರ್ತಿಯಾಗಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಗಾಯಕಿ ನೇಹಾ ಅವರು ತಮ್ಮ ಸಿಂಗಿಂಗ್ ಇವೆಂಟ್ , ಫಾರಿನ್ ಟ್ರಿಪ್ ಬಗ್ಗೆ ಆಗಾಗ ಪೋಸ್ಟ್ ಹಂಚಿ ಕೊಳ್ಳುತ್ತಲೇ ಇರುತ್ತಾರೆ‌. ಈ ಬಾರಿ ನೇಹಾ ಅವರು ವಿಚಿತ್ರವಾಗಿ ಡ್ರೆಸ್ ತೊಡುವ ಮೂಲಕ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದ್ದಾರೆ. ಗಾಯನದ ಮೂಲಕ ಜನರನ್ನು ರಂಜಿಸಿದ್ದ ಗಾಯಕಿಯ ವಿಭಿನ್ನ ಲುಕ್ ಕಂಡು ನೆಟ್ಟಿಗರು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಬಾಲಿವುಡ್ ನಲ್ಲಿ ಜನಪ್ರಿಯ ಹಾಡನ್ನು ಹಾಡುವ ಜೊತೆಗೆ ರಿಯಾಲಿಟಿ ಶೋನಲ್ಲಿ ಕೂಡ ಜಡ್ಜ್ ಆಗಿ ಖ್ಯಾತಿ ಪಡೆದ ಗಾಯಕಿ ನೇಹಾ ಅವರು ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಟಾಪ್ ಮೇಲೆ ನೀಲಿ ಬಣ್ಣದ ಬ್ರಾ ಒಂದು ಧರಿಸಿದ್ದಾರೆ‌. ಅದರ ಜೊತೆಗೆ ಅದೇ ಡ್ರೆಸ್ ಗೆ ಟ್ರ್ಯಾಕ್ ಪ್ಯಾಂಟ್ ಕೂಡ ಧರಿಸಿದ್ದಾರೆ. ಈ ರೀತಿಯ ವಿಚಿತ್ರ ಕಾಂಬಿನೇಶನ್ ಉಡುಗೆ ತೊಟ್ಟ ಗಾಯಕಿಗೆ ನೆಟ್ಟಿಗರು ಸರಿಯಾಗಿಯೇ ಟ್ರೋಲ್ ಮಾಡುತ್ತಿದ್ದಾರೆ‌.

ಈ ಫೋಟೊಗೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು ಗಾಯಕಿ ನೇಹಾ ಅವರಿಗೆ ಏನಾಗಿದೆ? ನಿಮ್ಮ ವಿಚಿತ್ರ ಕಾಂಬಿನೇಶನ್ ಕಂಡರೆ ನಗು ಬರುತ್ತೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರಸಿದ್ಧ ಗಾಯಕಿಯಾದರೆ ಸಾಲದು, ಕೆಲವು ಕಾಮನ್ ಸೆನ್ಸ್ ಕೂಡ ಬೇಕು ಎಂದು ಮತ್ತೊಬ್ಬ ಬಳಕೆದಾರರು ಫೋಟೊಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ಗಳು ಹಾಕುವ ಬಟ್ಟೆ ಟ್ರೆಂಡ್ ಆಗುವುದನ್ನು ನಾವು ಕಂಡಿದ್ದೇವೆ. ಆದರೆ ಸರಿಯಾದ ಕಾಂಬಿನೇಶನ್ ಮಾಡದೆ ಮಿಸ್ ಮ್ಯಾಚ್ ಬಟ್ಟೆ ತೊಟ್ಟರೆ ಟ್ರೋಲ್ ಆಗುವುದು ಕೂಡ ಇಂದು ಸಾಮಾನ್ಯವಾಗಿದೆ.

ಇದನ್ನು ಓದಿ:Neha Sharma: ಹಾಟ್​ ಫೋಟೊ ಮೂಲಕ ಟೆಂಪರೇಚರ್‌ ಹೆಚ್ಚಿಸಿದ ನಟಿ ನೇಹಾ ಶರ್ಮಾ

ಇವರು ಇದೇ ವರ್ಷ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಮೂರುಗಂಟೆ ತಡವಾಗಿ ಬಂದು ಸಾಕಷ್ಟು ಟೀಕೆಗೆ ಗುರಿಯಾಗಿ ಬಳಿಕ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಈಗ ಮತ್ತೆ ವಿಚಿತ್ರ ಡ್ರೆಸ್ ತೊಡುವ ಮೂಲಕ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ.