ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

England-W ODI: ಭಾರತ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್‌ ಮಹಿಳಾ ತಂಡ ಪ್ರಕಟ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ತಪ್ಪಿಸಿಕೊಂಡ ನಂತರ ಎಕ್ಲೆಸ್ಟೋನ್ ಮತ್ತೆ ಏಕದಿನ ತಂಡಕ್ಕೆ ಮರಳಿದ್ದಾರೆ. ಟಿ20 ಸರಣಿ ವೇಳೆ ಗಾಯಗೊಂಡ ನ್ಯಾಟ್ ಸಿವರ್-ಬ್ರಂಟ್ ಬದಲಿಗೆ ತಂಡ ಸೇರಿದ ಬೌಚಿಯರ್‌ಗೆ ಏಕದಿನ ತಂಡದಲ್ಲೂ ಸ್ಥಾನ ನೀಡಲಾಗಿದೆ.

ಭಾರತ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್‌ ಮಹಿಳಾ ತಂಡ ಪ್ರಕಟ

Profile Abhilash BC Jul 8, 2025 4:29 PM

ಲಂಡನ್‌: ಈ ತಿಂಗಳ ಕೊನೆಯಲ್ಲಿ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ 15 ಸದಸ್ಯರ ಇಂಗ್ಲೆಂಡ್ ಮಹಿಳಾ ತಂಡವನ್ನು(England-W ODI squad) ಪ್ರಕಟಿಸಲಾಗಿದ್ದು, ಸೋಫಿ ಎಕ್ಲೆಸ್ಟೋನ್(Sophie Ecclestone) ಮತ್ತು ಮಾಯಾ ಬೌಚಿಯರ್(Maia Bouchier) ಮತ್ತೆ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಸದ್ಯ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದ್ದು, ಭಾರತ 2-1 ಮುನ್ನಡೆಯಲ್ಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ತಪ್ಪಿಸಿಕೊಂಡ ನಂತರ ಎಕ್ಲೆಸ್ಟೋನ್ ಮತ್ತೆ ಏಕದಿನ ತಂಡಕ್ಕೆ ಮರಳಿದ್ದಾರೆ. ಟಿ20 ಸರಣಿ ವೇಳೆ ಗಾಯಗೊಂಡ ನ್ಯಾಟ್ ಸಿವರ್-ಬ್ರಂಟ್ ಬದಲಿಗೆ ತಂಡ ಸೇರಿದ ಬೌಚಿಯರ್‌ಗೆ ಏಕದಿನ ತಂಡದಲ್ಲೂ ಸ್ಥಾನ ನೀಡಲಾಗಿದೆ. ತೊಡೆಸಂದು ಗಾಯದಿಂದಾಗಿ ಐದು ಪಂದ್ಯಗಳ ಸರಣಿಯ ಕೊನೆಯ ಮೂರು ಟಿ20ಐಗಳಿಂದ ಹೊರಗುಳಿದಿದ್ದ ಸೈವರ್-ಬ್ರಂಟ್ ಏಕದಿನ ಸರಣಿಗೆ ಫಿಟ್ ಆಗುವ ನಿರೀಕ್ಷೆಯಿದೆ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಇದೇ ಕಾರಣಕ್ಕೆ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.



ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 16, 19 ಮತ್ತು 22 ರಂದು ಕ್ರಮವಾಗಿ ಸೌತಾಂಪ್ಟನ್, ಲಾರ್ಡ್ಸ್ ಮತ್ತು ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆಯಲಿವೆ.

ಇಂಗ್ಲೆಂಡ್‌ ಮಹಿಳಾ ಏಕದಿನ ತಂಡ

ನ್ಯಾಟ್ ಸಿವರ್-ಬ್ರಂಟ್ (ನಾಯಕಿ), ಎಮ್ ಆರ್ಲಾಟ್, ಸೋಫಿಯಾ ಡಂಕ್ಲಿ, ಎಮ್ಮಾ ಲ್ಯಾಂಬ್, ಟ್ಯಾಮಿ ಬ್ಯೂಮಾಂಟ್ (ವಿ.ಕೀ.), ಆಮಿ ಜೋನ್ಸ್, ಮಾಯಾ ಬೌಚಿಯರ್, ಆಲಿಸ್ ಕ್ಯಾಪ್ಸಿ, ಕೇಟ್ ಕ್ರಾಸ್, ಆಲಿಸ್ ಡೇವಿಡ್ಸನ್-ರಿಚರ್ಡ್ಸ್, ಚಾರ್ಲಿ ಡೀನ್, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್.