ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IND vs NZ: ಸಚಿನ್‌ ನಾಯಕತ್ವದ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್‌

Rohit Sharma: ‌ಭಾರತ ಏಕದಿನ ತಂಡದ ನಾಯಕನಾಗಿ ಅತ್ಯಧಿಕ ರನ್‌ಗಳಿಸಿದ ದಾಖಲೆ ಮಾಜಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಹೆಸರಿನಲ್ಲಿದೆ. ಧೋನಿ 200 ಪಂದ್ಯಗಳನ್ನಾಡಿ 6641 ರನ್‌ ಬಾರಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ 5449 ರನ್‌ ಕಲೆಹಾಕಿದ್ದಾರೆ.

ಸಚಿನ್‌ ನಾಯಕತ್ವದ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್‌

Profile Abhilash BC Mar 1, 2025 2:48 PM

ದುಬೈ: ಟೀಮ್‌ ಇಂಡಿಯಾದ ನಾಯಕ ರೋಹಿತ್ ಶರ್ಮಾ(Rohit Sharma) ಅವರು ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌(Sachin Tendulkar) ಅವರ ನಾಯಕತ್ವದ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ. ಚಾಂಪಿಯನ್ಸ್‌ ಟ್ರೋಫಿಯ ಮುಂದಿನ(IND vs NZ) ಪಂದ್ಯದಲ್ಲಿ ರೋಹಿತ್‌ 68 ರನ್‌ ಬಾರಿಸಿದರೆ, ಏಕದಿನದಲ್ಲಿ ಅತ್ಯಧಿಕ ರನ್‌ ಗಳಿಸಿದ ಭಾರತೀಯ ನಾಯಕರ ಪಟ್ಟಿಯಲ್ಲಿ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಲಿದ್ದಾರೆ. ಸಚಿನ್‌ 73 ಪಂದ್ಯಗಲ್ಲಿ ನಾಯಕನಾಗಿ 37.75 ಸರಾಸರಿಯಲ್ಲಿ ಆರು ಶತಕಗಳು ಮತ್ತು 12 ಅರ್ಧಶತಕಗಳೊಂದಿಗೆ 2454 ರನ್ ಗಳಿಸಿದ್ದಾರೆ. ರೋಹಿತ್‌ ಸದ್ಯ 53 ಪಂದ್ಯಗಳಲ್ಲಿ ನಾಯಕನಾಗಿ 2387* ರನ್‌ ಬಾರಿಸಿದ್ದಾರೆ.

‌ಭಾರತ ಏಕದಿನ ತಂಡದ ನಾಯಕನಾಗಿ ಅತ್ಯಧಿಕ ರನ್‌ಗಳಿಸಿದ ದಾಖಲೆ ಮಾಜಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಹೆಸರಿನಲ್ಲಿದೆ. ಧೋನಿ 200 ಪಂದ್ಯಗಳನ್ನಾಡಿ 6641 ರನ್‌ ಬಾರಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ 5449 ರನ್‌ ಕಲೆಹಾಕಿದ್ದಾರೆ. ರೋಹಿತ್‌ ಮುಂದಿನ ಪಂದ್ಯದಲ್ಲಿ 68 ರನ್‌ ಬಾರಿಸಿದರೆ ಈ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಲಿದ್ದಾರೆ.

ಏಕದಿನದಲ್ಲಿ ಭಾರತದ ನಾಯಕನಾಗಿ ಅತಿ ಹೆಚ್ಚು ರನ್

ಮಹೇಂದ್ರ ಸಿಂಗ್‌ ಧೋನಿ: 6641 ರನ್‌

ವಿರಾಟ್‌ ಕೊಹ್ಲಿ; 5449 ರನ್‌

ಮೊಹಮ್ಮದ್ ಅಜರುದ್ದೀನ್; 5239 ರನ್‌

ಸೌರವ್‌ ಗಂಗೂಲಿ; 5082 ರನ್‌

ರಾಹುಲ್‌ ದ್ರಾವಿಡ್‌; 2658 ರನ್‌

ಸಚಿನ್‌ ತೆಂಡೂಲ್ಕರ್‌; 2454 ರನ್‌

ರೋಹಿತ್‌ ಶರ್ಮ; 2387 ರನ್‌

ಇದನ್ನೂ ಓದಿ IND vs NZ: ಭಾರತ-ಕಿವೀಸ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ರೋಹಿತ್‌ ಆಡಿದ ಎರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಪೇರಿಸಿಲ್ಲ. ಬಾಂಗ್ಲಾ ವಿರುದ್ಧ 41 ಮತ್ತು ಪಾಕಿಸ್ತಾನ ವಿರುದ್ಧ 20 ರನ್‌ ಬಾರಿಸಿದ್ದರು. ಸ್ನಾಯು ಸೆಳೆತದಿಂದ ಬಳಲುತ್ತಿರುವ ರೋಹಿತ್‌ ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯಕ್ಕೆ ವಿಶ್ರಾಂತಿ ತೆಗೆದುಕೊಂಡು ಸೆಮಿ ಫೈನಲ್‌ ವೇಳೆ ಫಿಟ್‌ ಆಗುವ ಯೋಚನೆಯಲ್ಲಿದ್ದಾರೆ. ರೋಹಿತ್‌ ಹೊರಗುಳಿದರೆ ಕನ್ನಡಿಗ ಕೆ.ಎಲ್‌. ರಾಹುಲ್‌(KL Rahul) ಆರಂಭಿಕನಾಗಿ ಗಿಲ್‌ ಜತೆ ಇನಿಂಗ್ಸ್‌ ಆರಂಭಿಸಬಹುದು. ಗಿಲ್‌ ತಂಡವನ್ನು ಮುನ್ನಡೆಸಬಹುದು.