ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಪಾಕಿಸ್ತಾನದ ಸ್ಟೇಡಿಯಂನ ಚಾವಣಿಯಲ್ಲಿ ನೀರು ಸೋರಿಕೆ: ಪಿಸಿಬಿ ವಿರುದ್ದ ಫ್ಯಾನ್ಸ್‌ ಕಿಡಿ!

Lahore's Gaddafi stadium:ಪಾಕಿಸ್ತಾನದ ಆತಿಥ್ಯದಲ್ಲಿ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ನಡೆಯುತ್ತಿದೆ. ಪಾಕಿಸ್ತಾನ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯದ ಬಗ್ಗೆ ಬೇಸರಗೊಂಡಿರುವ ಅಭಿಮಾನಿಗಳು ಇದೀಗ ಮತ್ತೊಂದು ಕಾರಣಕ್ಕೆ ಪಿಸಿಬಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಮಳೆಯಿಂದ ನೀರು ಸೋರಿಕೆಯಾಗಿದೆ. ಇದರ ಬಗ್ಗೆ ಫ್ಯಾನ್ಸ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಲಾಹೋರ್‌ನ ಗಡಾಫಿ ಸ್ಟೇಡಿಯಂನ ಚಾವಣಿಯಲ್ಲಿ ನೀರು ಸೋರಿಕೆ!

ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನೀರು ಸೋರಿಕೆ.

Profile Ramesh Kote Mar 2, 2025 9:55 PM

ಲಾಹೋರ್:‌ ಪ್ರಸ್ತುತ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿದೆ. ಆದರೆ, ಪಾಕಿಸ್ತಾನ ತಂಡವೇ ಲೀಗ್‌ ಹಂತ ಹಂತದಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಕಾರಣ ಸೆಮಿಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಜೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ವಿರುದ್ಧ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವಿರುದ್ದ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಲಾಹೋರ್‌ನ ಗಡಾಫಿ ಸ್ಟೇಡಿಯಂನ ಚಾವಣಿಯಲ್ಲಿ ನೀರು ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಗರಂ ಆಗಿದ್ದಾರೆ.

ಇಲ್ಲಿನ ಗಡಾಫಿ ಸ್ಟೇಡಿಯಂನಲ್ಲಿ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ 10ನೇ ಪಂದ್ಯ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ವಿರುದ್ದ ನಡೆದಿತ್ತು. ಆದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಆಫ್ಘನ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 273 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡ 12.5 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 109 ರನ್‌ಗಳನ್ನು ಗಳಿಸಿತ್ತು. ಆದರೆ, ಈ ವೇಳೆ ಜೋರಾಗಿ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಗಿತ್ತು. ಕೊನೆಗೆ ಈ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೂ ಒಂದೊಂದು ಅಂಕವನ್ನು ಹಂಚಲಾಗಿತ್ತು.

IND vs NZ: ರವೀಂದ್ರ ಜಡೇಜಾರ ಸ್ಟನಿಂಗ್‌ ಕ್ಯಾಚ್‌ ಪಡೆದ ಕೇನ್‌ ವಿಲಿಯಮ್ಸನ್‌! ವಿಡಿಯೊ

ಸ್ಟೇಡಿಯಂನ ಚಾವಣಿಯಲ್ಲಿ ನೀರು ಸೋರಿಕೆ

ಮಳೆ ಕೇವಲ ಅರ್ಧ ಗಂಟೆ ಬಿದ್ದರೂ ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಹಲವು ಕ್ರಿಕೆಟ್‌ ಪಂಡಿತರು ಸ್ಟೇಡಿಯಂನ ಒಳಚರಂಡಿ ಸೌಲಭ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಅಲ್ಲದೆ ಕ್ರೀಡಾಂಗಣದಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆಯೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಪಂದ್ಯದ ವೇಳೆ ಸ್ಟೇಡಿಯಂನ ಚಾವಣೆಯಲ್ಲಿ ನೀರು ಸೋರಿಕೆಯಾಗುತಿತ್ತು. ಈ ವಿಡಿಯೊವನ್ನು ಅಭಿಮಾನಿಯೊಬ್ಬರು ಎಕ್ಸ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದರು ಹಾಗೂ ಇದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.



ಪಿಸಿಬಿ ವಿರುದ್ದ ಅಭಿಮಾನಿಗಳು ಆಕ್ರೋಶ

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಆಯೋಜಿಸಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹಾಗೂ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅವರನ್ನು ವೈರಲ್‌ ಆಗಿರುವ ವಿಡಿಯೊದಲ್ಲಿ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

"ಇಲ್ಲಿ ನೋಡಿ, ಎಲ್ಲಾ ಕಡೆ ನೀರು ತುಬಿಕೊಂಡಿದೆ. 12.5 ಓವರ್‌ಗಳ ನಂತರ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಇಲ್ಲಿ ನಿಖರವಾದ ಮೂಲಭೂತ ಸೌಲಭ್ಯಗಳು ಇಲ್ಲ, ಶೌಚಾಲಯಗಳನ್ನು ಈಗಾಗಲೇ ನೋಡಿದ್ದೇವೆ ಹಾಗೂ ಇಲ್ಲಿನ ಚಾವಣಿಯಲ್ಲಿ ನೀರು ಸೋರುತ್ತಿದೆ. ಈ ಟೂರ್ನಿಯ ಎರಡನೇ ಅಥವಾ ಮೂರನೇ ಪಂದ್ಯ ಇಲ್ಲಿ ನಡೆಯುತ್ತಿದೆ ಎಂದು ಕಾಣಿಸುತ್ತಿಲ್ಲ. 20-20 ವರ್ಷಗಳ ಹಳೆಯ ಕ್ರೀಡಾಂಗಣದ ರೀತಿ ಇದು ಕಾಣುತ್ತಿದೆ," ಎಂದು ಅಫ್ಘಾನಿಸ್ತಾನ ಅಭಿಮಾನಿ ವಿಡಿಯೊದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಒಟ್ಟು ಮೂರು ಪಂದ್ಯಗಳು ಮಳೆಗೆ ರದ್ದಾಗಿವೆ. ಈ ಮೂರು ಪಂದ್ಯಗಳ ಪೈಕಿ ಎರಡು ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಹಾಗೂ ಇನ್ನೊಂದು ಪಂದ್ಯ ಲಾಹೋರ್‌ ಗಡಾಫಿ ಕ್ರೀಡಾಂಗಣದಲ್ಲಿ ಪಂದ್ಯ ಮಳೆಯಿಂದ ರದ್ದಾಗಿತ್ತು. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ನಿಮಿತ್ತ ಇಲ್ಲಿನ ಕ್ರೀಡಾಂಗಣಗಳನ್ನು ನವೀಕರಿಸಲು ಪಿಸಿಬಿ ಸುಮಾರು 561 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ವರದಿಗಳು ತಿಳಿಸಿವೆ. ಅಂದ ಹಾಗೆ ಪಾಕಿಸ್ತಾನ 29 ವರ್ಷಗಳ ಐಸಿಸಿ ಟೂರ್ನಿಗೆ ಆತಿಥ್ಯವನ್ನು ವಹಿಸಿದೆ.