Viral Video: ವ್ಯಾಘ್ರನಿಂದ ಮಾಲೀಕನನ್ನು ರಕ್ಷಿಸಿ ಪ್ರಾಣತೆತ್ತ ಶ್ವಾನ! ಮನಮಿಡಿಯುವ ವಿಡಿಯೊ ವೈರಲ್
ಮಧ್ಯಪ್ರದೇಶದ ಬಾಂಧವಗಡ್ ರಾಷ್ಟ್ರೀಯ ಉದ್ಯಾನವನದ ಬಳಿಯ ಭರ್ಹತ್ ಗ್ರಾಮದಲ್ಲಿ ಬೆಂಥೋ ಎಂಬ ಜರ್ಮನ್ ಶೆಫರ್ಡ್ ನಾಯಿಯೊಂದು ಹುಲಿಯ ದಾಳಿಯಿಂದ ತನ್ನ ಮಾಲೀಕನನ್ನು ಕಾಪಾಡಿ ತನ್ನ ಪ್ರಾಣವನ್ನು ತ್ಯಾಗ ಮಾಡಿದೆ. ನಾಯಿಯ ಈ ನಿಸ್ವಾರ್ಥ ಕಾರ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಅನೇಕರ ಮನಗೆದ್ದಿದೆ.


ಭೋಪಾಲ್: ನಿಯತ್ತಿಗೆ ಮತ್ತೊಂದು ಹೆಸರೇು ನಾಯಿ. ಇತ್ತೀಚೆಗಷ್ಟೇ ಮಗುವಿಗೆ ತನ್ನ ಮೊದಲ ಹೆಜ್ಜೆ ಇಡಲು ಸಹಾಯ ಮಾಡಿದ ನಾಯಿಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದರ ನಡುವೆ ಈಗ ನಾಯಿಯೊಂದು ತನ್ನ ಸಾಕಿದ ಮಾಲೀಕನ ಜೀವ ಉಳಿಸಲು ತನ್ನ ಪ್ರಾಣವನ್ನೇ ಬಿಟ್ಟಿದೆಯಂತೆ. ಮಧ್ಯಪ್ರದೇಶದ ಭರ್ಹತ್ ಗ್ರಾಮದಲ್ಲಿ ಹುಲಿ ದಾಳಿಗೆ ಒಳಗಾದ ಮಾಲೀಕನನ್ನು ಉಳಿಸಲು ಆತನ ಸಾಕು ನಾಯಿ ಬೆಂಥೋ ಎಂಬ ಜರ್ಮನ್ ಶೆಫರ್ಡ್ ತನ್ನ ಪ್ರಾಣವನ್ನು ತ್ಯಾಗ ಮಾಡಿದೆ. ಇದರ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video)ಆಗಿದೆ. ಈ ವಿಡಿಯೊ ನೋಡುಗರ ಕಣ್ಣನ್ನು ತೇವಗೊಳಿಸಿದೆ.
ವರದಿ ಪ್ರಕಾರ, ಮಾಲೀಕ ಶಿವಂ ಮತ್ತು ಅವನ ನಾಯಿ ಮನೆಯ ಹೊರಗೆ ಇದ್ದಾಗ ಹುಲಿಯೊಂದು ಶಿವಂ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಆದರೆ ಅವನ ಸಾಕು ನಾಯಿ ಮಾಲೀಕನ ಜೀವ ಉಳಿಸಲು ಹುಲಿಯೊಂದಿಗೆ ಹೋರಾಡಿದೆ.
વાઘના હુમલાથી માલિકને બચાવવા જર્મન શેફર્ડે આપ્યું જીવનું બલિદાન; મધ્યપ્રદેશનો હૃદયદ્રાવક કિસ્સો #Madhyapradesh #tigerattack #GermanShepherd #gujaratsamachar pic.twitter.com/wkzOIwSDny
— Gujarat Samachar (@gujratsamachar) March 1, 2025
ಹುಲಿ ಶುರುವಿನಲ್ಲಿ ಶಿವಂ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ ನಾಯಿ ಬೊಗಳುವುದನ್ನು ಕೇಳಿದ ಹುಲಿ ಮಾಲೀಕನನ್ನು ಬಿಟ್ಟು ನಾಯಿ ಮೇಲೆ ದಾಳಿ ಮಾಡಿ ಅದನ್ನು ಎಳೆದುಕೊಂಡು ಹೋಗಿದೆ. ಮಧ್ಯಪ್ರದೇಶದಲ್ಲಿ ನಡೆದ ಈ ಹುಲಿ ದಾಳಿಯ ಸಮಯದಲ್ಲಿ ನಾಯಿ ತೀವ್ರವಾಗಿ ಗಾಯಗೊಂಡಿತ್ತು. ಹುಲಿಯು ನಾಯಿಯ ಕುತ್ತಿಗೆಯನ್ನು ಕಚ್ಚಿ ಹಾಕಿತ್ತು. ಇಷ್ಟಾದರೂ ನಾಯಿ ಹುಲಿಯಿಂದ ತಪ್ಪಿಸಿಕೊಂಡು ಬಂದಿದೆಯಂತೆ. ಮರುದಿನ ಮುಂಜಾನೆ ಬೆಂಥೋ ಮನೆ ಮುಂದೆ ಬಂದಾಗ ತಕ್ಷಣ ಅದನ್ನು ಮಾಲೀಕ ಪಶುವೈದ್ಯನ ಬಳಿಗೆ ಕರೆದುಕೊಂಡು ಹೋಗಿ ನಾಯಿಯ ಜೀವ ಉಳಿಸಿಕೊಡುವಂತೆ ವೈದ್ಯರ ಬಳಿ ಮಾಲೀಕ ಅಂಗಲಾಚಿದ್ದಾನೆ. ಆದರೆ ಆಸ್ಪತ್ರೆಗೆ ಸಾಗಿಸಿ ವೈದ್ಯಕೀಯ ಚಿಕಿತ್ಸೆ ಪಡೆಯುವ ವೇಳೆ ಗಂಭೀರ ಗಾಯಗಳಿಂದ ನಾಯಿ ಸಾವನ್ನಪ್ಪಿದೆ. ಕುಟುಂಬದವರು ಮತ್ತು ಗ್ರಾಮಸ್ಥರು ನಾಯಿಯನ್ನು ಕಳೆದುಕೊಂಡಿದ್ದಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅದರ ಧೈರ್ಯಶಾಲಿ ಕಾರ್ಯವನ್ನು ಹೊಗಳಿದ್ದಾರೆ.
ಫೆಬ್ರವರಿ 26ರಂದು ಈ ಘಟನೆ ನಡೆದಿದ್ದು, ಜರ್ಮನ್ ಶೆಫರ್ಡ್ ಯಜಮಾನನ ಜೀವ ಉಳಿಸಲು ಹುಲಿಯೊಂದಿಗೆ ಹೋರಾಡಿ ತನ್ನ ಪ್ರಾಣವನ್ನು ಬಿಟ್ಟಿತು. ಈ ನಿಸ್ವಾರ್ಥ ಕಾರ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಾಣಿ ಪ್ರಿಯರ ಕಣ್ಣಿನಲ್ಲಿ ನೀರು ತರಿಸಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Self Harming: ಮುದ್ದಿನ ನಾಯಿ ಸತ್ತಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!
ಇತ್ತೀಚೆಗೆ ಮುದ್ದಿನ ಸಾಕು ನಾಯಿ ಸತ್ತಿದ್ದಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವಪುರದಲ್ಲಿ ನಡೆದಿದೆ. ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡವನು. .ಯುವಕ 9 ವರ್ಷದ ಹಿಂದೆ ಜಮರ್ನ್ ಶೆಫರ್ಡ್ ನಾಯಿ ತಂದಿದ್ದರು. ನಾಯಿಗೆ ಪ್ರೀತಿಯಿಂದ ಬೌನ್ಸಿ ಎಂದು ಹೆಸರಿಟ್ಟಿದ್ದನು. ಅನಾರೋಗ್ಯದಿಂದ ನಾಯಿ ಮೃತಪಟ್ಟಿದ್ದು, ಬೆಳ್ಳಗ್ಗೆ ಎದ್ದು ನೋಡಿದಾಗ ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.