ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Bhagya Lakshmi Serial: ಭಾಗ್ಯಾಳಿಗೆ ಮತ್ತೊಂದು ಸಂಕಷ್ಟ: ಮನೆಯಲ್ಲಿದ್ದ ಎಲ್ಲ ಚಿನ್ನವನ್ನ ಕೊಂಡೊಯ್ದ ತಾಂಡವ್-ಶ್ರೇಷ್ಠಾ

ತಾಂಡವ್-ಶ್ರೇಷ್ಠಾ ನೇರವಾಗಿ ಭಾಗ್ಯಾ ಮನೆಗೆ ಬರುತ್ತಾರೆ. ಅಲ್ಲಿ ಭಾಗ್ಯಾ ಚಿನ್ನ ತೆಗೆದುಕೊಂಡು ಬ್ಯಾಂಕ್ಗೆ ಹೋಗಲು ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತಾಳೆ. ನಾನು ಈ ಮನೆಯ ಮಾಜಿ ಮಗ, ಈ ಮನೆಯಲ್ಲಿ ನನ್ನದು ಚಿನ್ನ ಇದೆ, ಅದನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ ಎಂದು ಹೇಳುತ್ತಾನೆ.

ಮನೆಯಲ್ಲಿದ್ದ ಎಲ್ಲ ಚಿನ್ನವನ್ನ ಕೊಂಡೊಯ್ದ ತಾಂಡವ್-ಶ್ರೇಷ್ಠಾ

Bhagya Lakshmi Serial

Profile Vinay Bhat Mar 3, 2025 12:06 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಶ್ರೇಷ್ಠಾಳನ್ನು ತಾಂಡವ್ ಮದುವೆಯಾದ ಬಳಿಕ ಭಾಗ್ಯಾಳ ಜೀವನ ಏನು ಎಂಬುದು ವೀಕ್ಷಕರಿಗೆ ಸಸ್ಪೆನ್ಸ್ ಆಗಿ ಇಟ್ಟಿದ್ದು ಎಪಿಸೋಡ್​ಗಳು ಅದ್ಭುತವಾಗಿ ಬರುತ್ತಿದೆ. ತನಗೆ ಗಂಡ ಬೇಡ ಎಂದು ಭಾಗ್ಯಾ, ನನಗೆ ಮಗ ಬೇಡ ಎಂದು ಕುಸುಮಾ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾಗ್ಯಾ ತನ್ನ ತಾಳಿಯನ್ನೇ ತೆಗೆದು ತಾಂಡವ್ ಕೈಗೆ ಕೊಟ್ಟಿದ್ದಾಳೆ. ಇಲ್ಲಿಂದ ಭಾಗ್ಯಾಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಸದ್ಯ ತಾಂಡವ್-ಶ್ರೇಷ್ಠಾ ಮದುವೆಯಾಗಿ ಜೊತೆಯಾಗಿ ವಾಸಿಸುತ್ತಿದ್ದಾರೆ. ಆದರೆ ಅತ್ತ ಭಾಗ್ಯಾ ಮನೆಯಲ್ಲಿ ಕಷ್ಟಗಳ ಸರಮಾಲೆಯೇ ಬರುತ್ತಿದೆ. ಮನೆಯ ಲೋನ್ ಕಟ್ಟಲು ಭಾಗ್ಯಾ-ಕುಸುಮಾ ಪರದಾಡುತ್ತಿದ್ದಾರೆ. ಆದರೆ, ಇದನ್ನು ಹಾಳು ಮಾಡಲು ತಾಂಡವ್-ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಅನ್ನೇ ಮಾಡಿ ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಭಾಗ್ಯ ಮನೆಯನ್ನು ಉಳಿಸಿಕೊಳ್ಳಲು ಏನಾದರೂ ಪ್ಲ್ಯಾನ್ ಮಾಡುತ್ತಾಳೆ, ಆದರೆ ಅದಕ್ಕೆ ನಾವು ಅಡ್ಡಿಪಡಿಸಬೇಕು ಎಂದು ತಾಂಡವ್-ಶ್ರೇಷ್ಠಾ ಯೋಚಿಸುತ್ತಿರುತ್ತಾರೆ.

ಆಗ ತಾಂಡವ್ ತನ್ನ ಮಗಳು ತನ್ವಿಗೆ ಫೋನ್ ಮಾಡಿ ಭಾಗ್ಯಾಳ ಪ್ಲ್ಯಾನ್ ಏನು ಎಂಬುದನ್ನು ಬಾಯಿ ಬಿಡಿಸಲು ಟ್ರೈ ಮಾಡುತ್ತಾನೆ. ಅಪ್ಪ ಯಾಕೆ ಫೋನ್ ಮಾಡಿರಬಹುದು ಎಂದು ತನ್ವಿ ಫೋನ್ ರಿಸೀವ್ ಮಾಡಿದ ಕೂಡಲೆ ತಾಂಡವ್ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಾ, ನಿಮ್ಮ ಬಗ್ಗೆ ನೆನೆಸಿದರೆ ನನಗೆ ಬೇಸರವಾಗುತ್ತಿದೆ, ಆದರೆ ಏನು ಮಾಡಲಿ, ಮನೆಯ ಸಾಲದ ಕಂತು ಕಟ್ಟಲು ನನ್ನ ಬಳಿ ಈಗ ಹಣವಿಲ್ಲ, ಹೀಗಾಗಿ ನಾನು ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾನೆ.

ಅದನ್ನು ಕೇಳಿದ ತನ್ವಿಗೆ, ಅಪ್ಪ ನಿಜವಾಗಿಯೂ ನಮ್ಮನ್ನು ಪ್ರೀತಿಸುತ್ತಾನೆ ಎಂದು ನಂಬುತ್ತಾಳೆ. ಜೊತೆಗೆ ಭಾಗ್ಯಾಳ ಗುಟ್ಟನ್ನು ಕೂಡ ರಟ್ಟು ಮಾಡುತ್ತಾಳೆ. ಅಮ್ಮ ಮನೆಯನ್ನು ಉಳಿಸಿಕೊಳ್ಳಲು ವಿವಿಧ ಪ್ರಯತ್ನ ಮಾಡುತ್ತಿದ್ದಾಳೆ. ಮನೆಯಲ್ಲಿ ಇರುವ ಚಿನ್ನವನ್ನು ಒಟ್ಟುಗೂಡಿಸಿ, ಬ್ಯಾಂಕ್‌ನಲ್ಲಿ ಇಟ್ಟು, ಅದರಲ್ಲಿ ಬಂದ ಹಣದಿಂದ ಸಾಲದ ಕಂತು ಕಟ್ಟುತ್ತಾಳೆ ಎಂದು ಎಲ್ಲ ವಿವರ ನೀಡುತ್ತಾಳೆ. ಈ ಮೂಲಕ ತಾಂಡವ್‌ಗೆ ಭಾಗ್ಯಳ ಪ್ಲ್ಯಾನ್ ಗೊತ್ತಾಗುತ್ತದೆ.

ಈ ಪ್ಲ್ಯಾನ್ ಅರಿತು ತಾಂಡವ್-ಶ್ರೇಷ್ಠಾ ನೇರವಾಗಿ ಭಾಗ್ಯಾ ಮನೆಗೆ ಬರುತ್ತಾರೆ. ಅಲ್ಲಿ ಭಾಗ್ಯಾ ಚಿನ್ನ ತೆಗೆದುಕೊಂಡು ಬ್ಯಾಂಕ್​ಗೆ ಹೋಗಲು ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತಾಳೆ. ನಾನು ಈ ಮನೆಯ ಮಾಜಿ ಮಗ, ಈ ಮನೆಯಲ್ಲಿ ನನ್ನದು ಚಿನ್ನ ಇದೆ, ಅದನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ. ಅದು ನಾನು ದುಡಿದು, ಕೊಡಿಸಿದ ಚಿನ್ನ, ಹೀಗಾಗಿ ಅದರ ಮೇಲೆ ನನಗೆ ಹಕ್ಕಿದೆ, ಭಾಗ್ಯನಿಗೆ ಅದರ ಮೇಲೆ ಅಕ್ಕಿಲ್ಲ.. ಅದನ್ನು ನಾನೇ ತೆಗೆದುಕೊಂಡು ಹೋಗುವೆ ಎಂದು ತಾಂಡವ್ ಹೇಳುತ್ತಾನೆ.



ತಾಂಡವ್​ನ ಈ ಮಾತು ಕೇಳಿ ಮನೆಮಂದಿಗೆ ಆಘಾತವಾಗುತ್ತದೆ. ಆದರೆ, ಭಾಗ್ಯಾ ತನ್ನ ಕೈಯಲ್ಲಿದ್ದ ಚಿನ್ನವನ್ನು ಮೇಜಿನ ಮೇಲೆ ಇಟ್ಟು, ಅತ್ತೆ ಇದನ್ನು ಅವರಿಗೆ ಕೊಟ್ಟುಬಿಡಿ.. ಯಾರೊದ್ದೊ ಚಿನ್ನ ತೆಗೊಂಡು ಮನೆ ಉಳಿಸಿಕೊಳ್ಳುವ ಗತಿ ನಮಗಿನ್ನು ಬಂದಿಲ್ಲ ಎನ್ನುತ್ತಾಳೆ. ಅದಕ್ಕೆ ಕುಸುಮಾ ಅಡ್ಡಿ ಪಡಿಸುತ್ತಾಳೆ. ಆಗ ಶ್ರೇಷ್ಠಾ, ನಮ್ಮ ಒಡವೆನಾ ನಾವು ತೆಗೊಂಡು ಹೋಗೋಕೆ ಬಂದ್ರೆ ನಿಮಗೇನು ಪ್ರಾಬ್ಲಂ.. ಭಾಗ್ಯಾನೇ ಅವಳ ಹೆಂಡ್ತಿ ಅಲ್ಲ.. ನಾನು ತಾಂಡವ್​ನ ಹೆಂಡ್ತಿ.. ಸೋ ಈ ಒಡವೆ ಮೇಲೆ ನನಗೆ ಹಕ್ಕಿದೆ ಎಂದು ಮೇಜಿನ ಮೇಲಿದ್ದ ಚಿನ್ನವನ್ನ ತೆಗೆದುಕೊಂಡು ಹೋಗುತ್ತಾರೆ.



ಭಾಗ್ಯಾ ಮನೆಯವರಿಗೆ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಆದರೂ ನಾನು ಏನಾದರು ಮಾಡಿ 40,000 ರೂಪಾಯಿ ಅರೆಂಜ್ ಮಾಡುತ್ತೇನೆ ಎಂದು ಮನೆಯಿಂದ ಹೊರಡುತ್ತಾಳೆ. ಸದ್ಯ ಭಾಗ್ಯಾ ಮನೆಯ ಸಾಲ ತೀರಿಸಲು ಏನು ಮಾಡುತ್ತಾಳೆ?, ಕೆಲಸ ಕೂಡ ಇಲ್ಲದೆ ಹೇಗೆ ಹಣ ಕಟ್ಟುತ್ತಾಳೆ? ಎಂಬುದು ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

Chaitra Vasudevan: 2 ಲಕ್ಷದ ಸೀರೆಯುಟ್ಟು ಎರಡನೇ ಮದುವೆಯಾದ ಚೈತ್ರಾ ವಾಸುದೇವನ್