ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಟ್ಯಾಕ್ಸಿ ಚಾಲಕನ ಮೇಲೆ ಯುವಕರಿಂದ ಅಟ್ಯಾಕ್‌! ಆಮೇಲೆ ನಡೆದಿದ್ದೇ ಬೇರೆ- ವಿಡಿಯೊ ನೋಡಿದ್ರೆ ಶಾಕ್‌ ಆಗ್ತೀರಿ

ಯುವಕರ ಗುಂಪೊಂದು ರಾಡ್ ಬಳಸಿ ಟ್ಯಾಕ್ಸಿವೊಂದರ ಗಾಜನ್ನು ಒಡೆದಿದ್ದಲ್ಲದೇ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನೋಯ್ಡಾದ ಲಾಜಿಕ್ಸ್ ಮಾಲ್ ಬಳಿ ನಡೆದಿದೆ. ಯುವಕರ ಹಿಂಸಾಚಾರದ ವಿರುದ್ಧ ಹುಡುಗಿಯರ ಗುಂಪೊಂದು ಪ್ರತಿಭಟಿಸಿದೆ. ಈ ವಾಗ್ವಾದದ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಟ್ಯಾಕ್ಸಿ ಚಾಲಕನ ಮೇಲೆ ಯುವಕರಿಂದ ಹಲ್ಲೆ; ಆಮೇಲೆ ನಡೆದಿದ್ದೇ ಬೇರೆ!

Profile pavithra Mar 3, 2025 11:01 AM

ಲಖನೌ: ಯುವಕರ ಗುಂಪೊಂದು ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನೋಯ್ಡಾದ ಲಾಜಿಕ್ಸ್ ಮಾಲ್ ಬಳಿ ನಡೆದಿದೆ. ಯುವಕರು ರಾಡ್ ಅನ್ನು ಬಳಸಿ ಟ್ಯಾಕ್ಸಿಯ ಗಾಜನ್ನು ಒಡೆದಿದ್ದಾರೆ. ಮಾಲ್‍ನ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವಕರ ಹಿಂಸಾಚಾರದ ವಿರುದ್ಧ ಹುಡುಗಿಯರ ಗುಂಪೊಂದು ಪ್ರತಿಭಟಿಸಿದೆ. ಈ ವಾಗ್ವಾದದ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೊ ವೈರಲ್(Viral Video) ಆಗಿ ನೆಟ್ಟಿಗರು ಈ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಯುವಕರು ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ವಾಹನಕ್ಕೆ ಹಾನಿ ಉಂಟುಮಾಡಿರುವುದು ಸೆರೆಯಾಗಿದೆ. ಈ ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಘಟನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.



ಮಾರ್ಚ್ 2 ರಂದು, ನೋಯ್ಡಾದ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಈ ಘಟನೆಗೆ ಪ್ರತಿಕ್ರಿಯೆಯಾಗಿ ಎಕ್ಸ್ ನಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ವಿವಾದದಲ್ಲಿ ಭಾಗಿಯಾಗಿರುವವರು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗೇ ಪೊಲೀಸ್ ಠಾಣೆಗೆ ಲಿಖಿತ ಒಪ್ಪಂದವನ್ನು ಸಲ್ಲಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಇತ್ತೀಚೆಗೆ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಬೈಕ್ ಮತ್ತು ಆಟೋ ಚಾಲಕನ ನಡುವೆ ಜಗಳ ನಡೆದ ಘಟನೆ ಗ್ರೇಟರ್ ನೋಯ್ಡಾದ ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದಾದ ನಂತರ, ಬೈಕ್‍ನಲ್ಲಿದ್ದ ವ್ಯಕ್ತಿ ತನ್ನ ಕೆಲವು ಸಹೋದ್ಯೋಗಿಗಳನ್ನು ಸ್ಥಳಕ್ಕೆ ಕರೆದು ಆಟೋ ಚಾಲಕನಿಗೆ ಸಹಾಯ ಮಾಡಲು ಬಂದ ಇನ್ನೊಬ್ಬ ಆಟೋ ಚಾಲಕನನ್ನು ಥಳಿಸಿದ್ದಾನೆ. ಈ ಘಟನೆಯಲ್ಲಿ ಆಟೋ ಚಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದರ ನಂತರ, ಇತರರನ್ನು ಪತ್ತೆಹಚ್ಚಿದ ಪೊಲೀಸ್ ತಂಡವು ಇತರ ಇಬ್ಬರು ಆರೋಪಿಗಳನ್ನು ಸಹ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Murder Case: ಆಟೋ ಟಚ್ ಆಗಿದ್ದಕ್ಕೆ ಚಾಲಕನ ಮೇಲೆ ಹಲ್ಲೆ ನಡೆಸಿ ಕೊಲೆ, ನಾಲ್ವರು ಅರೆಸ್ಟ್

ಇನ್ನು ಬೆಂಗಳೂರಿನಲ್ಲಿ ಆಟೋ ಟಚ್ ಆಯಿತು ಎಂಬ ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್ ಟಿ ನಗರ ಠಾಣಾ ವ್ಯಾಪ್ತಿಯ ರೆಹಮದ್ ನಗರದಲ್ಲಿ ನಡೆದಿದೆ.ಆಟೋ ಚಾಲಕ ಸಲ್ಮಾನ್ (27) ಕೊಲೆಯಾದವನು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ರಹಮತ್‌ ನಗರದ ಸೈಯದ್ ಪರ್ವೇಜ್, ಆತನ ಸಹೋದರ ಸೈಯದ್ ತಬ್ರೇಜ್ ಮತ್ತು ಸಂಬಂಧಿಕರಾದ ಸಾದಿಕ್, ತೌಸಿಫ್ ಎಂಬವರನ್ನು ಬಂಧಿಸಿದ್ದಾರೆ.