ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Anushka Sharma: ಕೊಹ್ಲಿಯ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಆಘಾತಕ್ಕೊಳಗಾದ ಪತ್ನಿ ಅನುಷ್ಕಾ

Glenn Phillips Stunning Catch: ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೈದಾನಕ್ಕಿಳಿಯುವ ಮೂಲಕ 300ನೇ ಏಕದಿನ ಕ್ರಿಕೆಟ್‌ ಪಂದ್ಯವನ್ನಾಡಿದ ಸಾಧನೆ ಮಾಡಿದರು. ಈ ಮೂಲಕ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಧೋನಿ ಬಳಿಕ ಈ ಸಾಧನೆಗೈದ ಭಾರತದ ಏಳನೇ ಹಾಗೂ ವಿಶ್ವದ 22 ನೇ ಆಟಗಾರ ಎನಿಸಿಕೊಂಡರು.

ಫಿಲಿಪ್ಸ್‌ ಕ್ಯಾಚ್‌ ಕಂಡು  ತಲೆಯ ಮೇಲೆ ಕೈಹೊತ್ತುಕೊಂಡು ಕುಳಿತು ಅನುಷ್ಕಾ

Profile Abhilash BC Mar 2, 2025 4:50 PM

ದುಬೈ: ಮುನ್ನೂರನೇ ಪಂದ್ಯವನ್ನಾಡುತ್ತಿರುವ ಪತಿ ವಿರಾಟ್‌ ಕೊಹ್ಲಿಯ(Virat Kohli) ಆಟವನ್ನು ಭಾರೀ ನಿರೀಕ್ಷೆ ಮತ್ತು ದೊಡ್ಡ ಕನಸುಗಳನ್ನು ಹೊತ್ತುಕೊಂಡು ಪತ್ನಿ ಅನುಷ್ಕಾ ಶರ್ಮಾ(Anushka Sharma) ಮೈದಾನಕ್ಕೆ ಬಂದಿದ್ದರು. ಆದರೆ ಇದಕ್ಕೆ ಎದುರಾಳಿ ನ್ಯೂಜಿಲ್ಯಾಂಡ್‌ ತಂಡದ ಆಟಗಾರ ಗ್ಲೆನ್‌ ಫಿಲಿಪ್ಸ್‌(Glenn Phillips) ಅಡ್ಡಗಾಲಿಕ್ಕಿದರು. 11 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿಯನ್ನು ಫಿಲಿಪ್ಸ್‌ ಯಾರೂ ಊಹಿಸದಂತೆ ಸೂಪರ್‌ ಮ್ಯಾನ್‌ ರೀತಿಯಲ್ಲಿ ಜಿಗಿದು, ಒನ್‌ ಹ್ಯಾಂಡೆಡ್‌ ಕ್ಯಾಚ್‌ ಹಿಡಿದು ಪೆವಿಲಿಯನ್‌ಗೆ ಅಟ್ಟಿದರು. ಈ ಅಸಾಧಾರಣ ಕ್ಯಾಚ್‌ ಕಂಡ ಅನುಷ್ಕಾ 'ಓ ಮೈ ಗಾಡ್!' ಎಂದು ಪ್ರತಿಕ್ರಿಯಿಸುವ ಮೂಲಕ ತಲೆ ಮೇಲೆ ಕೈ ಹೊತ್ತುಕೊಂಡರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪತಿ ವಿರಾಟ್‌ ಕೊಹ್ಲಿಯ ಯಾವುದೇ ಸ್ಮರಣೀಯ ಪಂದ್ಯದಲ್ಲಿಯೂ ಪತ್ನಿ ಅನುಷ್ಕಾ ಹಾಜರಿದ್ದು ಬೆಂಬಲ ಸೂಚಿಸುತ್ತಾರೆ. ಜತೆಗೆ ಈ ಜೋಡಿ ಅದೆಷ್ಟೋ ಜನಕ್ಕೆ ಸ್ಫೂರ್ತಿಯಾಗಿದೆ. 2017ರ ಡಿಸೆಂಬರ್ 11ರಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಟಲಿಯಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.





ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೈದಾನಕ್ಕಿಳಿಯುವ ಮೂಲಕ 300ನೇ ಏಕದಿನ ಕ್ರಿಕೆಟ್‌ ಪಂದ್ಯವನ್ನಾಡಿದ ಸಾಧನೆ ಮಾಡಿದರು. ಈ ಮೂಲಕ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಧೋನಿ ಬಳಿಕ ಈ ಸಾಧನೆಗೈದ ಭಾರತದ ಏಳನೇ ಹಾಗೂ ವಿಶ್ವದ 22 ನೇ ಆಟಗಾರ ಎನಿಸಿಕೊಂಡರು.

ಕೊಹ್ಲಿಯ ಏಕದಿನ ಕ್ರಿಕೆಟ್‌ ಮೈಲಿಗಲ್ಲು

ಮೊದಲ ಪಂದ್ಯ: 2008 ರಲ್ಲಿ ಶ್ರೀಲಂಕಾ ವಿರುದ್ಧ 12 ರನ್‌

50ನೇ ಪಂದ್ಯ; 2011ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1 ರನ್‌

100ನೇ ಪಂದ್ಯ; 2013ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 22 ರನ್‌

150ನೇ ಪಂದ್ಯ; 2015ರಲ್ಲಿ ಇಂಗ್ಲೆಂಡ್‌ ವಿರುದ್ಧ 8 ರನ್‌

200ನೇ ಪಂದ್ಯ; 2017ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 121 ರನ್‌

250ನೇ ಪಂದ್ಯ; 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 89 ರನ್‌

300ನೇ ಪಂದ್ಯ; 2025ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 11 ರನ್‌