Viral Post: ''ಇದು ವಧುವಿಗೆ ವರನ ಹುಡುಕಾಟವೋ ಅಥವಾ.... ?”; ವೈರಲ್ ಆಯ್ತು ಮ್ಯಾಟ್ರಿಮೋನಿ ಜಾಹೀರಾತು
ಸೋಷಿಯಲ್ ಮೀಡಿಯಾದಲ್ಲಿ ವಧು ವರರ ಅನ್ವೇಷಣೆ ಕೇಂದ್ರ ಹಂಚಿಕೊಂಡಿರುವ ಜಾಹೀರಾತು ಒಂದು ವೈರಲ್ ಆಗಿದ್ದು, ವಧು - ವರರನ್ನು ಹುಡುಕಿ ಕೊಡುತ್ತೇವೆ ಎಂದು ಗೋಡೆಯೊಂದರ ಮೇಲೆ ಜಾಹೀರಾತು ಹಾಕಿರುವ ವಧು ವರರ ಅನ್ವೇಷಣೆ ಕೇಂದ್ರ, ವಧು - ವರ ಮಾಹಿತಿ ಕೇಂದ್ರ ಎಂದು ಕನ್ನಡದಲ್ಲಿ ವಾಕ್ಯದೋಷ ಮಾಡಿದ್ದು, ಇಂಗ್ಲೀಷ್ ನಲ್ಲಿ "ಬ್ರೈಡ್ ಆ್ಯಂಡ್ ಗ್ರೂಮ್ '' ಬರೆಯುವ ಬದಲು "ಬ್ರೈಡ್ ಆ್ಯಂಡ್ ಬ್ರೂಮ್'' ಎಂದು ತಪ್ಪಾಗಿ ಬರೆದಿದೆ.


ಬೆಂಗಳೂರು,ಮಾ.3: ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ಪೋಸ್ಟ್ ಗಳು ಕ್ಷಣ ಮಾತ್ರದಲ್ಲಿ ನೋಡುಗರ ಮನಸ್ಸನ್ನು ಗೆದ್ದು ಬಿಡುತ್ತದೆ. ಕೆಲವು ಪೋಸ್ಟರ್ ಹಾಗೂ ವಿಡೀಯೋಗಳು ಅಚ್ಚರಿ ಮೂಡಿಸಿದ್ದರೆ, ಮತ್ತೂ ಕೆಲವು ಪೊಸ್ಟರ್ ಗಳು ಮೊಗದಲ್ಲಿ ನಗುವನ್ನು ತರಿಸುತ್ತದೆ. ಇದೀಗ ಇಂತಹದ್ದೇ ಒಂದು ಪೋಸ್ಟರ್ ವೈರಲ್ ಆಗಿದ್ದು, ಬೆಂಗಳೂರಿನ ರಸ್ತೆ ಬದಿಯ ಗೋಡೆಯಲ್ಲಿ ಬರೆಯಲಾದ ಮ್ಯಾಟ್ರಿಮೋನಿ ಜಾಹೀರಾತು ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಮೊದಲೆಲ್ಲಾ ಮನೆಯಲ್ಲಿರುವ ಹಿರಿಯರು ನೋಡಿ ನಿಶ್ಚಯಿಸಿದ ಹುಡುಗ ಮತ್ತು ಹುಡುಗಿಯನ್ನು ಮನೆಯ ಮಕ್ಕಳು ಮದುವೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಎಲ್ಲರೂ ಚೆನ್ನಾಗಿ ಓದಿಕೊಂಡಿರುವವರಾಗಿದ್ದು, ತುಂಬಾನೇ ತಿಳುವಳಿಕೆ ಮತ್ತು ತಮ್ಮ ಮುಂದಿನ ಜೀವನವನ್ನು ಜೊತೆಯಲ್ಲಿ ಕಳೆಯುವ ಸಂಗಾತಿಯ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ಹೊಂದಿರುತ್ತಾರೆ.
ಹಾಗಾಗಿ ಈಗೆಲ್ಲಾ ಮ್ಯಾಟ್ರಿಮೋನಿ ಜಾಹೀರಾತುಗಳಲ್ಲಿ ಇಂತಹದ್ದೇ ವರ ಬೇಕು ಅಂತ ಹುಡುಗಿಯರು ಹಾಕಿದರೆ, ಇಂತಹದ್ದೇ ವಧು ಬೇಕು ಅಂತ ಹುಡುಗರು ಸಹ ಸ್ಪಷ್ಟವಾಗಿ ಹೇಳುತ್ತಿದ್ದಾರೆ. ನಮಗೆ ಎತ್ತರವಿರುವ, ಕುಳ್ಳಗಿರುವ, ತುಂಬಾನೇ ಬೆಳ್ಳಗಿರುವ ಮತ್ತು ಸ್ವಲ್ಪ ಕಪ್ಪಗಿರುವ ವಧು ಬೇಕು, ವರ ಬೇಕು ಅನ್ನೋ ಜಾಹೀರಾತನ್ನು ನಾವು ನೋಡಿರುತ್ತೇವೆ. ಆದರೆ ಇತ್ತೀಚೆಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಚಿತ್ರ-ವಿಚಿತ್ರವಾದ ಮಾನದಂಡಗಳನ್ನು ಈ ವಧು-ವರರು ಜಾಹೀರಾತಿನಲ್ಲಿ ನೀಡುತ್ತಾರೆ. ವಿಚಿತ್ರ ವಿಚಿತ್ರ ಮಾನದಂಡಗಳಿರಬೇಕೆಂದು ಹೇಳುವ ಮೂಲಕ ವೈರಲ್ ಆಗುತ್ತಾರೆ.
ಆದ್ರೆ ಈ ಬಾರಿ ವಧು ವರರ ಅನ್ವೇಷಣೆ ಕೇಂದ್ರ ಹಂಚಿಕೊಂಡಿರುವ ಜಾಹೀರಾತು ಒಂದು ವೈರಲ್ ಆಗಿದ್ದು, ವಧು - ವರರನ್ನು ಹುಡುಕಿ ಕೊಡುತ್ತೇವೆ ಎಂದು ಗೋಡೆಯೊಂದರ ಮೇಲೆ ಜಾಹೀರಾತು ಹಾಕಿರುವ ವಧು ವರರ ಅನ್ವೇಷಣೆ ಕೇಂದ್ರ, ವಧು - ವರ ಮಾಹಿತಿ ಕೇಂದ್ರ ಎಂದು ಕನ್ನಡದಲ್ಲಿ ವಾಕ್ಯದೋಷ ಮಾಡಿದ್ದು, ಇಂಗ್ಲೀಷ್ ನಲ್ಲಿ "ಬ್ರೈಡ್ ಆ್ಯಂಡ್ ಗ್ರೂಮ್ '' ಬರೆಯುವ ಬದಲು "ಬ್ರೈಡ್ ಆ್ಯಂಡ್ ಬ್ರೂಮ್'' ಎಂದು ತಪ್ಪಾಗಿ ಬರೆದಿದೆ.
ಈ ಸುದ್ದಿಯನ್ನು ಓದಿ: Viral News: ಚಪ್ಪಲಿ ಕಳ್ಳತನ ನಿಲ್ಲಿಸಲು ಈ ಹೋಟೆಲ್‌ನ ಮಾಸ್ಟರ್ ಪ್ಲಾನ್; ನೆಟ್ಟಿಗರು ಏನಂದ್ರು ನೋಡಿ
ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ರಸ್ತೆ ಬದಿಯೊಂದರಲ್ಲಿ ಈ ಜಾಹೀರಾತು ಕಂಡು ಬಂದಿದ್ದು, ಎಕ್ಸ್(ಟ್ವಿಟರ್) ಬಳಕೆದಾರರಾದ ಶಶಾಂಕ್ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, "ವಧು ಮತ್ತು ಏನು?" ಎಂದು ಕ್ಯಾಪ್ಷನ್ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಜಾಹೀರಾತು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬ್ರೈಡ್ - ಬ್ರೂಮ್(ಪೊರಕೆ) ಮದುವೆಯ ಕುರಿತ ಚರ್ಚೆ ಆರಂಭವಾಗಿದೆ.
ಈ ಜಾಹೀರಾತಿನ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದು, ನಾನಾ ಹಾಸ್ಯಮಯ ಪ್ರಕ್ರಿಯೆಗಳನ್ನು ನೀಡಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಬರೆಯಲಾದ ಈ ಪೋಸ್ಟರ್‌ನಲ್ಲಿ ಲಭ್ಯವಿರುವ ಸೇವೆಯ ಮಾಹಿತಿಗಿಂತ ಆಗಿರುವ ಅಕ್ಷರ ದೋಷದ ಮೇಲೆಯೇ ನೆಟ್ಟಿಗರು ಕಣ್ಣಿಟ್ಟಿದ್ದು, ಇಂತಹ ಕಂಟೆಂಟ್ ಗಳನ್ನು ವೈರಲ್ ಮಾಡಿರುವುದರಲ್ಲಿ ಬೆಂಗಳೂರಿಗರು ನಿಸ್ಸೀಮರು ಎಂದು ತೋರಿಸಿದೆ. ಇನ್ನು ಆ ಜಾಹೀರಾತಿನಲ್ಲಿ ಮೊಬೈಲ್ ನಂಬರ್ ಅನ್ನು ಹಾಕಿದ್ದು, ಕನ್ನಡ, ತಮಿಳು, ತೆಲುಗು ಮತ್ತು ಗುಜರಾತಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮ್ಯಾಚ್-ಮೇಕಿಂಗ್ ಸೇವೆಗಳು ಲಭ್ಯವಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.