ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Oscars 2025: ಸ್ಟೈಲಿಶ್‌ ಔಟ್‌ಫಿಟ್‌ ಧರಿಸಿ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಸ್ಟಾರ್ಸ್!

97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿದ. ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಡಿಫರೆಂಟ್ ಲುಕ್ ಮೂಲಕ ಸ್ಟೈಲಿಶ್ ಐಕಾನ್‌ಗಳಂತೆ ಆಸ್ಕರ್ ಸಂಭ್ರಮದ ರೆಡ್ ಕರ್ಪೆಟ್‌ಗೆ ಎಂಟ್ರಿ ನೀಡಿದ್ದಾರೆ. ಸೆಲೆಬ್ರಿಟಿಗಳ ಹೊಸ ಸ್ಟೈಲ್‌ನ ಕೆಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ದುಬಾರಿ ಔಟ್‌ಫಿಟ್‌ ಧರಿಸಿ ಮಿಂಚಿದ ಸ್ಟಾರ್‌ಗಳ ಫೋಟೋ ‌ಇಲ್ಲಿದೆ.

ಡಿಫರೆಂಟ್ ಲುಕ್‌ನಲ್ಲಿ ರೆಡ್ ಕಾರ್ಪೆಟ್‌ಗೆ ಎಂಟ್ರಿ ನೀಡಿದ ಸೆಲೆಬ್ರಿಟಿಗಳು!

Profile Pushpa Kumari Mar 3, 2025 1:15 PM

ನವದೆಹಲಿ: ಈ ಬಾರಿ ಕೂಡ 2025ರ ಆಸ್ಕರ್ (Oscars 2025) ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲಾಸ್ ಏಂಜಲೀಸ್‌ನ ದಾಲ್ಬಿ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಇನ್ನು ಆಸ್ಕರ್‌ ಅವಾರ್ಡ್‌ ಅಂದ ಮೇಲೆ ಕೇಳಬೇಕೆ? ಯಾವ ಸಿನಿಮಾ, ಯಾವ ಸೆಲೆಬ್ರಿಟಿ ಪ್ರಶಸ್ತಿ ಬಾಜಿಕೊಂಡರು ಎಂಬ ಕುತೂಹಲದ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಸೆಲೆಬ್ರಿಟಿಗಳ ಡಿಫರೆಂಟ್‌ ಲುಕ್‌ ಕೂಡ ಎಲ್ಲರ ಗಮನ ಸೆಳೆಯುತ್ತದೆ. ಈ ಬಾರಿಯೂ ಕೆಲವೊಂದು ಸೆಲೆಬ್ರಿಟಿಗಳು ಡಿಫರೆಂಟ್ ಲುಕ್ ಮೂಲಕ ಸ್ಟೈಲಿಶ್ ಐಕಾನ್‌ಗಳಂತೆ ಆಸ್ಕರ್ ಸಂಭ್ರಮದ ರೆಡ್ ಕಾರ್ಪೆಟ್‌ಗೆ ಎಂಟ್ರಿ ನೀಡಿದ್ದಾರೆ. ಸೆಲೆಬ್ರಿಟಿಗಳ ಹೊಸ ಸ್ಟೈಲ್‌ನ ಕೆಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ದುಬಾರಿ ಔಟ್‌ಫಿಟ್‌ ಧರಿಸಿ ಮಿಂಚಿದ ಸ್ಟಾರ್ಸ್ ಗಳ ಫೋಟೋ ‌ಇಲ್ಲಿದೆ.

ಅರಿಯಾನಾ ಗ್ರಾಂಡೆ:

Ariana Grande

ಈ ಬಾರಿಯ ಆಸ್ಕರ್ ಕಾರ್ಯಕ್ರಮಕ್ಕೆ ಮಾಡೆಲ್, ಸೆಲೆಬ್ರಿಟಿಗಳ ಲುಕ್ ಡಿಫ್ರೆಂಟ್ ಆಗಿತ್ತು‌. ಅದರಲ್ಲೂ ಆಸ್ಕರ್ ಅವಾರ್ಡ್‌ಗೆ ನಾಮಿನೇಟ್‌ ಆಗಿದ್ದ ಅರಿಯಾನ ಗ್ರಾಂಡೆ ಕ್ರೀಮ್ ಬಣ್ಣದ ಸ್ಟ್ರಾಪ್ ಲೆಸ್ ಬಸ್ಟಿಯರ್ ಡ್ರೆಸ್ ಧರಿಸಿದ್ದು ಇದು ಪ್ರಿನ್ಸೆಸ್‌ ಲುಕ್ ನೀಡಿದೆ. ರೆಡ್ ಕಾರ್ಪೆಟ್ ನಲ್ಲಿ ಸಿಂಪಲ್ ಮೇಕಪ್ ನಲ್ಲಿ ಹೆಚ್ಚು ಬ್ರೈಟ್ ಆಗಿ ಅರಿಯಾನ ಗ್ರಾಂಡೆ ಅವರು ಎಂಟ್ರಿ ‌ನೀಡಿದ್ದರು.

ತಿಮೋತಿ ಚಲಮೆಟ್:

Timothee Chalamet

ಆಸ್ಕರ್ ನಾಮನಿರ್ದೇಶಿತರಾದ ತಿಮೋತಿ ಚಲಮೆಟ್ ಅವರು (ಬಟರ್ ಕಲರ್) ಬೆಣ್ಣೆ ಹಳದಿ ಬಣ್ಣದ ಸೂಟ್ ಅನ್ನು ಧರಿಸಿ ಯಂಗ್ ಆಗಿ ಕಂಗೊಳಿಸಿದ್ದಾರೆ. ಈ ಒಂದು ಕ್ರಾಪ್ಡ್ ಸೂಟ್ ನ ನೆಕ್ ಭಾಗದಲ್ಲಿ ಅಲಂಕರಿಸಿದ್ದ ಫ್ಲವರ್ ಡಿಸೈನ್ ಲುಕ್ ಮತ್ತಷ್ಟು ಅವರನ್ನು ಸ್ಟೈಲಿಶ್‌ ಆಗಿ ಕಾಣುವಂತೆ ಮಾಡಿದ್ದು, ಬಹಳ ಗ್ರ್ಯಾಂಡ್ ಲುಕ್‌ನಲ್ಲಿ ಎಂಟ್ರಿ ನೀಡಿದ್ದಾರೆ.

ಹಾಲೆ ಬೆರ್ರಿ:

Halle Berry

ಆಸ್ಕರ್ ನಾಮನಿರ್ದೇಶಿತರಾದ ಹಾಲೆ ಬೆರ್ರಿ ಅವರು ಕೂಡ ಆಸ್ಕರ್ ಸಮಾರಂಭಕ್ಕೆ ಮಿರರ್ ವರ್ಕ್ ಇರುವ ಡ್ರೆಸ್ ತೊಟ್ಟು ಬಂದು ಅತ್ಯಂತ ಆಕರ್ಷಕವಾಗಿ ಕಂಡಿದ್ದಾರೆ‌. ಈ ಮಿರರ್ ಟಚ್ ಹೊಂದಿದ್ದ ಡ್ರೆಸ್ ಸ್ಟ್ರಾಪ್ ಲೆಸ್ ಆಗಿದ್ದು ಮತ್ಸೆ ಕನ್ಯೆಯಂತೆ ಹಾಲೆ ಬೆರ್ರಿ ಅವರು ಕಂಗೊಳಿಸಿದ್ದಾರೆ. ಈ ಒಂದು ನಿಲುವಂಗಿಯನ್ನು 7000 ಸ್ಪಟಿಕ ಮತ್ತು ಮಿರರ್ ಆರ್ಟ್ ನಿಂದ ಸಿದ್ಧಪಡಿಸ‌ಲಾಗಿದ್ದು ಇವರ ಲುಕ್ ರೆಡ್ ಕಾರ್ಪೆಟ್ ಮೇಲೆ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ ಎಂದರೂ ತಪ್ಪಾಗದು.

ಮೈಲಿ ಸೈರಸ್:

Miley Cyrus

ಗೌನ್ ಎಂಬುದು ಪ್ರಿನ್ಸೆಸ್ ಲುಕ್ ನೀಡುತ್ತದೆ. ಅಂತೆಯೇ ಆಸ್ಕರ್ ನಾಮನಿರ್ದೇಶಿತರಾದ ಮೈಲಿ ಸೈರಸ್ ಅವರು ಕೂಡ ಕಪ್ಪು ಬಣ್ಣದ ಅಲೆಗ್ಸಾಂಡರ್ ಮೆಕ್ ಕ್ವೀನ್ ಗೌನ್ ತೊಟ್ಟು ಬಹಳ ಪ್ರಿಟಿಯಾಗಿ ಕಂಡಿದ್ದಾರೆ. ಈ ಕಪ್ಪು ಗೌನ್ ಬೋಲ್ಟ್ ನೆಕ್ ಮಾದರಿಯಂತಿದ್ದು ಕೈ ಗವಸು ಕೂಡ ಹೊಸ ವಿನ್ಯಾಸದಿಂದ ಕಂಗೊಳಿಸಿದೆ.

ಇದನ್ನು ಓದಿ: Winter Cape Dress Fashion: ಹೊಸ ವಿನ್ಯಾಸದಲ್ಲಿ ಎಂಟ್ರಿ ಕೊಟ್ಟ ಕೇಪ್ ಡಿಸೈನರ್‌ವೇರ್ಸ್

ಸೆಲೆನಾ ಗೊಮೆಜ್:

Selena

ಇಟಾಲಿಯನ್ ನಟಿಯಾದ ಸೆಲೆನಾ ಗೊಮೆಜ್ ಅವರು ಈ ಬಾರಿ ಆಸ್ಕರ್ ಅಂಗಳಕ್ಕೆ ರಾಲ್ಫ್ ಲಾರೆನ್ ಆಫ್ ಶೊಲ್ಢರ್ ನ ನಿಲುವಂಗಿಯಲ್ಲಿ ಬಂದಿ ದ್ದಾರೆ. ಈ ಗೌನ್ ಲೈಟ್ ಕಲರ್ ನಲ್ಲಿ ಇದ್ದು ಇದರ ಮೇಲೆ ಅನೇಕ ಮಿನು ಗುವ ಹರಳುಗಳು ಇವರ ಅಂದಕ್ಕೆಮತ್ತಷ್ಟು ಮೆರುಗು ನೀಡಿದೆ. ಇಟಾಲಿ ಯನ್ ನಟಿ ಸೋಫಿಯಾ ಲೊರೆನ್ ಅವರಿಂದ ಸ್ಪೂರ್ತಿ ಪಡೆದು ಈ ಗೌನ್ಅ ನ್ನು ಸಿದ್ಧಪಡಿಸಲಾಗಿದ್ದು ಇದು ಸಾಮಾನ್ಯ ಬಟ್ಟೆಗಿಂತ ಅಧಿಕ ತೂಕ ಹೊಂದಿದ್ದರು ಗ್ರ್ಯಾಂಡ್ ಲುಕ್ ನೀಡಿದೆ.

ಒಮರ್ ಅಪೊಲೊ:

Omar Apollo

ಆಸ್ಕರ್ ನಾಮನಿರ್ದೇಶಿತರಾದ ಒಮರ್ ಅಪೊಲೊ ಅವರು ಕಪ್ಪು ಸೂಟ್ ಜೊತೆಗೆ ಪೊಲ್ಕಾ ಡಾಟ್ ಇರುವ ಶರ್ಟ್ ಅನ್ನು ತೊಟ್ಟಿದ್ದು ಅದರೊಂದಿಗೆ ಟೈ ನಂತೆ ಕ್ರೀಮ್ ಬಣ್ಣದ ಸ್ಟೈಲ್ ಸ್ಕಾರ್ಫ್ ಧರಿಸಿದ್ದಾರೆ. ಹೆಚ್ಚಾಗಿ ಮಹಿಳಾ ಮಾಡೆಲ್ ಹಾಕುವಂತಹ ಮುಖದ ಮೇಲಿನ ನೆಟ್ ವಿನ್ಯಾಸವನ್ನು ಈ ಬಾರಿ ಓಮರ್ ಅಪೊಲೊ ತೊಟ್ಟು ಹೊಸ ಟ್ರೆಂಡ್ ಸೃಷ್ಟಿಸಿದ್ದು ಅವರ ಸೂಟ್ ನೋಡಲು ಡಿಫರೆಂಟ್ ಲುಕ್ ನೀಡಿದೆ. ಒಟ್ಟಿನಲ್ಲಿ‌ ಈ ಬಾರಿ ಆಸ್ಕರ್ ಗೆ ಅನೇಕ ಸಿನಿಮಾಗಳು ಆಯ್ಕೆ ಆಗಿದ್ದು ಯಾರಿಗೆ ಈ ಪ್ರಶಸ್ತಿ ಒಲಿದು ಬರ ಬಹುದು ಎಂಬ ಕುತೂಹಲ ಇದ್ದೇ ಇರಲಿದ್ದು ಈ ನಡುವೆ ಸೆಲೆಬ್ರಿಟಿಗಳ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ.