ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Rohit Sharma: ರೋಹಿತ್ ಶರ್ಮಾಗೆ ಫಿಟ್‌ನೆಸ್ ಇಲ್ಲ, ದಪ್ಪ, ಕಳಪೆ ನಾಯಕ ಎಂದು ಟೀಕಿಸಿದ ಕಾಂಗ್ರೆಸ್ ನಾಯಕಿ! ಬಿಜೆಪಿಯಿಂದ ತಕ್ಕ ತಿರುಗೇಟು

ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ಭಾರತ ಕ್ರಿಕೆಟ್ ನಾಯಕ ರೋಹಿತ್ ಶರ್ಮಾ ಅವರ ದೇಹದ ತೂಕದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ರೋಹಿತ್ ಶರ್ಮಾ ದಪ್ಪಗಿದ್ದಾರೆ! ತೂಕ ಇಳಿಸಿಕೊಳ್ಳಬೇಕು! ಮತ್ತು ಖಂಡಿತವಾಗಿಯೂ, ಭಾರತ ಕಂಡ ಅತ್ಯಂತ ಕಳಪೆ ನಾಯಕ ಇವರೇ! ಎಂದು ಹೇಳಿದ್ದಾರೆ.

ರೋಹಿತ್‌ ಶರ್ಮಾಗೆ ಬಾಡಿ ಶೇಮಿಂಗ್‌ ಮಾಡಿದ ಕಾಂಗ್ರೆಸ್‌ ನಾಯಕಿ

ರೋಹಿತ್‌ ಶರ್ಮಾ

Profile Vishakha Bhat Mar 3, 2025 11:54 AM

ನವದೆಹಲಿ: ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ (Shama Mohamed) ಅವರು ಭಾರತ ಕ್ರಿಕೆಟ್ ನಾಯಕ ರೋಹಿತ್ ಶರ್ಮಾ (Rohit Sharma) ಅವರ ದೇಹದ ತೂಕದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ರೋಹಿತ್‌ ಶರ್ಮಾ ಅವರನ್ನು ಅವರನ್ನು "ದಪ್ಪ" ಮತ್ತು "ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ" ಎಂದು ಶಮಾ ಮೊಹಮ್ಮದ್ ಕರೆದಿದ್ದಾರೆ. ಭಾನುವಾರ ರಾತ್ರಿ ಅವರು ಈ ಟ್ವೀಟ್‌ ಮಾಡುತ್ತಿದ್ದಂತೆ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಸೇರಿದಂತೆ ಹಲವರು ಶಮಾ ಮೊಹಮ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಶಮಾ ಮೊಹಮ್ಮದ್ ಕ್ರೀಡಾಪಟುವಾಗಿ ರೋಹಿತ್ ಶರ್ಮಾ ದಪ್ಪಗಿದ್ದಾರೆ! ತೂಕ ಇಳಿಸಿಕೊಳ್ಳಬೇಕು! ಮತ್ತು ಖಂಡಿತವಾಗಿಯೂ, ಭಾರತ ಕಂಡ ಅತ್ಯಂತ ಕಳಪೆ ನಾಯಕ ಇವರೇ!” “ಗಂಗೂಲಿ, ತೆಂಡೂಲ್ಕರ್, ದ್ರಾವಿಡ್, ಧೋನಿ, ಕೊಹ್ಲಿ, ಕಪಿಲ್ ದೇವ್, ಶಾಸ್ತ್ರಿ ಮತ್ತು ಉಳಿದವರಿಗೆ ಹೋಲಿಸಿದರೆ ಅವರಲ್ಲಿ ಜಗತ್ತಿಗೆ ಮಾದರಿಯಾಗುವಂತಹದ್ದೇನಿದೆ? ಅವರು ಸಾಧಾರಣ ಆಟಗಾರರಾಗಿದ್ದು, ಭಾರತದ ನಾಯಕರಾಗಲು ಅದೃಷ್ಟವಿತ್ತು ಅಷ್ಟೇ”ಎಂದು ಹೇಳಿದ್ದಾರೆ.

ಬಿಜೆಪಿಯಿಂದ ತಿರುಗೇಟು:

ಕಾಂಗ್ರೆಸ್‌ ವಕ್ತಾರೆಯ ಈ ಟ್ವೀಟ್‌ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ವಕ್ತಾರ ಶೆಹಜಾದ್ ಪೂನಾವಾಲಾ ಕಾಂಗ್ರೆಸ್ ಪಕ್ಷದ ಚುನಾವಣಾ ದಾಖಲೆಯನ್ನು ಟೀಕಿಸಿದ್ದಾರೆ. “ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 90 ಚುನಾವಣೆಗಳನ್ನು ಸೋತವರು ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಕಳಪೆ ಎಂದು ಕರೆಯುತ್ತಿದ್ದಾರೆ! ಎಂದು ಹೇಳಿದ್ದಾರೆ. "ದೆಹಲಿಯಲ್ಲಿ 6 ಬಾರಿ ಶೂನ್ಯಕ್ಕೆ ಔಟಾದ ಮತ್ತು 90 ಚುನಾವಣೆಗಳಲ್ಲಿ ಸೋತ ನಾಯಕತ್ವವನ್ನು ಹೊಂದಿರುವವರು ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ!" ಎಂದು ಅವರು ವ್ಯಂಗ್ಯವಾಡಿದ್ದಾರೆ.



ಪಾಕಿಸ್ತಾನ ಮೂಲದ ಕ್ರೀಡಾ ಪತ್ರಕರ್ತೆ ಕಾಂಗ್ರೆಸ್ ನಾಯಕಿಯ ಹೇಳಿಕೆಗೆ ತಿರುಗೇಟು ನೀಡಿದ್ದು, ರೋಹಿತ್‌ ಶರ್ಮಾ ಅತ್ಯಂತ ಪ್ರಭಲಶಾಲಿ ನಾಯಕರಲ್ಲಿ ಒಬ್ಬರು. ಗಂಗೂಲಿ, ತೆಂಡೂಲ್ಕರ್, ದ್ರಾವಿಡ್, ಧೋನಿ, ಕೊಹ್ಲಿ, ಕಪಿಲ್ ದೇವ್, ಶಾಸ್ತ್ರಿ ಉಳಿದವರ ಹಾಗೆ ಇವರೂ ಕೂಡ ಅತ್ಯುತ್ತಮ ಆಟಗಾರ ಹಾಗೂ ಉತ್ತಮ ನಾಯಕ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ ಅವರನ್ನು ದೇಹದಾಕಾರದ ಆಧಾರದ ಮೇಲೆ ಟೀಕಿಸಿದ್ದಕ್ಕಾಗಿ ನೆಟ್ಟಿಗರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ರೋಹಿತ್ ಶರ್ಮಾ ತಮ್ಮ ತಂಡ ಮತ್ತು ಇಡೀ ಭಾರತದ ವಿಶ್ವಾಸವನ್ನು ಗಳಿಸಿದ್ದಾರೆ ಎಂದು ಹೇಳಿದ್ದಾರೆ.



ಸದ್ಯ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ಅವರು ಸಮರ್ಥನೆ ನೀಡಿದ್ದು, ತಾನು ಬಾಡಿ ಶೇಮಿಂಗ್‌ ಮಾಡಿಲ್ಲ. ಬದಲಾಗಿ ಫಿಟ್‌ನೆಸ್‌ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.