ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಪ್ರೀತಿಸಿದ ಗೆಳತಿಗಾಗಿ ಆಕೆಯ ತಾಯಿಯ ಕತ್ತು ಹಿಸುಕಿದ ಪಾಗಲ್‌ ಪ್ರೇಮಿ! ವಿಡಿಯೊ ಫುಲ್‌ ವೈರಲ್‌

ತಾನು ಪ್ರೀತಿಸಿದ ಯುವತಿಗೆ ಆಕೆಯ ತಾಯಿ ಬೇರೆ ಮದುವೆ ನಿಶ್ಚಯ ಮಾಡಿದ್ದರಿಂದ ಕೋಪಗೊಂಡ ಯುವಕ ರಾಜ್‍ಕುಮಾರ್‌ ಎಂಬಾತ ಯುವತಿಯ ತಾಯಿಯ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಗರ್ಲ್‌ಫ್ರೆಂಡ್‌ ತಾಯಿಯ ಕತ್ತು ಹಿಸುಕಿದ ಪಾಗಲ್‌ ಪ್ರೇಮಿ! ವಿಡಿಯೊ ಇದೆ

Profile pavithra Mar 3, 2025 10:49 AM

ತೆಲಂಗಾಣ: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಗಾಗಿ ಆಕೆಯ ತಾಯಿಯ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ ಘಟನೆ ತೆಲಂಗಾಣದ ರಾಮಡುಗು ಮಂಡಲದ ಸುದ್ದಲಪಲ್ಲಿ ಗ್ರಾಮದಲ್ಲಿ ನಡೆದಿದೆ. ಯುವಕ ಮಹಿಳೆಯ ಕತ್ತು ಹಿಸುಕಿ ಸಾಯಿಸಲು ಯತ್ನಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಯತ್ನಿಸಿದ ಆರೋಪಿ ರಾಜ್‍ಕುಮಾರ್ ಹಾಗೂ ಸಂತ್ರಸ್ತ ಮಹಿಳೆ ಚಮಂತಿ ಎಂಬುದಾಗಿ ತಿಳಿದುಬಂದಿದೆ.

ವರದಿಯ ಪ್ರಕಾರ, ಆರೋಪಿ ರಾಜ್‍ಕುಮಾರ್‌ ಸುಶ್ಮಿತಾ ಎಂಬ ಯುವತಿಗೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ. ಹಾಗಾಗಿ ಅವಳ ತಾಯಿ ಚಮಂತಿ ರಾಜ್‌ಕುಮಾರ್‌ ಸುಶ್ಮಿತಾಳಿಗೆ ಕಿರುಕುಳ ನೀಡುವುದನ್ನು ತಡೆಯಲು ಆಕೆಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದಾಳೆ. ಇದರಿಂದ ಕೋಪಗೊಡ ರಾಜ್‍ಕುಮಾರ್‌ ಚಮಂತಿ ಜೊತೆಗೆ ಜಗಳ ಮಾಡಿದ್ದಾನೆ. ಈ ವೇಳೆ ರಾಜ್ ಕುಮಾರ್ ಸಾರ್ವಜನಿಕ ಸ್ಥಳದಲ್ಲಿ ಚಮಂತಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ.



ಇಡೀ ಘಟನೆಯನ್ನು ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್ ಆಗಿದೆ. ವಿಡಿಯೊದಲ್ಲಿ ರಾಜ್‍ಕುಮಾರ್‌ ಚಮಂತಿಯನ್ನು ನೆಲಕ್ಕೆ ಬೀಳಿಸಿ ಆಕೆಯ ಕತ್ತನ್ನು ಹಿಸುಕಿದ್ದಾನೆ. ಈ ನಡುವೆ ಸುಶ್ಮಿತಾ ಆತನನ್ನು ತಡೆಯಲು ಪ್ರಯತ್ನಿಸಿದ್ದಾಳೆ. ಕೊನೆಗೆ ಸ್ಥಳೀಯರು ಬಂದು ಆತನಿಂದ ಮಹಿಳೆಯನ್ನು ಬಿಡಿಸಿದ್ದಾರೆ. ಸಾವಿನಿಂದ ಪಾರಾದ ಚಮಂತಿ ತಕ್ಷಣ ರಾಮಡುಗು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ವರದಿಗಳ ಪ್ರಕಾರ, ದೂರಿನ ನಂತರ ಅಧಿಕಾರಿಗಳು ಆರೋಪಿ ರಾಜ್ ಕುಮಾರ್ ಅನ್ನು ಬಂಧಿಸಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆತನ ವಿರುದ್ಧ ಮಾಡಲಾಗಿರುವ ಗಂಭೀರ ಆರೋಪಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ್ದಾರೆ.

ಪ್ರೀತಿಸಿದ ಗೆಳತಿಗಾಗಿ ಹೆತ್ತವರ ಮೇಲೆ ದಾಳಿ ಮಾಡುವಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ 45 ವರ್ಷದ ತಾಯಿಯನ್ನು ಕೊಂದ ಘಟನೆ ಪಶ್ಚಿಮ ದೆಹಲಿಯ ಖ್ಯಾಲಾದಲ್ಲಿ ನಡೆದಿದೆ. ಅವನು ಅವಳನ್ನು ಕತ್ತು ಹಿಸುಕಿ ನಂತರ ಪಿಸಿಆರ್ ಕರೆ ಮಾಡಿ, ದರೋಡೆಯ ಸಮಯದಲ್ಲಿ ಯಾರೋ ಅವಳನ್ನು ಕೊಂದಿದ್ದಾರೆ ಎಂದು ಹೇಳಿದ್ದಾನೆ. ಆದರೆ ಪೊಲೀಸರಿಗೆ ದರೋಡೆ ನಡೆದ ಯಾವುದೇ ಸೂಚನೆಗಳು ಕಂಡುಬಾರದ ಕಾರಣ ಮಗನನ್ನು ನಿರಂತರ ವಿಚಾರಣೆ ನಡೆಸಿ ನಂತರ ಆತ ತಾನು ಕೊಲೆ ಮಾಡಿರುವುದಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ:MP Shocker: ಆಸ್ತಿ ಆಸೆಗಾಗಿ ತಾಯಿಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಪಾಪಿ ಪುತ್ರ!

ಇತ್ತೀಚೆಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತನ್ನ ತಾಯಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಹೀನ ಘಟನೆಯೊಂದು ನಡೆದಿದೆ. ಪಾನಮತ್ತ ಪಾಪಿ ಪುತ್ರ ತನ್ನ ತಾಯಿಯ ಬಳಿ ಜಾಗ ಮತ್ತು ಮನೆಯಲ್ಲಿ ಪಾಲು ಬೇಕೆಂದು ಕೇಳಿದ್ದಾನೆ. ಆದರೆ ಇದಕ್ಕೆ ತಾಯಿ ಒಪ್ಪದೇ ಇದ್ದಾಗ ಸಿಟ್ಟಿಗೆದ್ದ ಮಗ ತಾಯಿಯ ಮೇಲೆ ಹರಿತವಾದ ಆಯುಧದಿಂದ ಯದ್ವಾತದ್ವಾ ದಾಳಿ ನಡೆಸಿದ್ದಾನಂತೆ.